




ಪುತ್ತೂರು: ಸನ್ಯಾಸಿಗುಡ್ಡೆ ಹಾಲು ಉತ್ಪಾದಕರ ಮಹಿಳಾ ಸಹಕಾರ ಪುತ್ತೂರು ತಾಲೂಕು ಇದರ ಚುನಾವಣಾ ದಿನಾಂಕದಿಂದ ಮುಂದಿನ 5 ವರ್ಷಗಳ ಅವಧಿಗೆ ಆಡಳಿತ ಮಂಡಳಿ ನಿರ್ದೇಶಕರುಗಳಾಗಿ ಅವಿರೋಧ ಆಯ್ಕೆ ನಡೆದಿದೆ. 9 ಸಾಮಾನ್ಯ ಸ್ಥಾನಗಳಿಗೆ 1 ಪ.ಜಾತಿ ಮೀಸಲು ಸ್ಥಾನ ಹಾಗೂ 1 ಪ.ಪಂಗಡ ಮೀಸಲು ಸ್ಥಾನಕ್ಕೆ ನಾಮಪತ್ರ ಸಲ್ಲಿಕೆಯಾಗಿದ್ದು ದ.22ರಂದು ಸಂಘದ ಕಛೇರಿಯಲ್ಲಿ ಚುನಾವಣೆ ನಡೆಯಬೇಕಿತ್ತು, ಆದರೆ ಎಲ್ಲಾ ಸ್ಥಾನಗಳಿಗೆ ಅವಿರೋಧ ಆಯ್ಕೆ ನಡೆದಿದೆ ಎಂದು ಚುನಾವಣಾ ರಿಟರ್ನಿಂಗ್ ಅಧಿಕಾರಿ ಕವಿತಾ ಕೆ.ರವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಸಾಮಾನ್ಯ ಸ್ಥಾನಗಳಲ್ಲಿ ಪುಷ್ಪಾವತಿ ಎಚ್, ಸಂಜೀವಿ ವಿ.ರೈ, ವೀಣಾ ಆರ್ ರೈ,ಸುಜಾತ ಎಸ್.ರೈ, ಸುಜಾತ ವೈ ಚೌಟ,ನಮಿತಾ ಪಿ.ಶೆಟ್ಟಿ,ಇಂದಿರಾ ಕೆ, ಸುಮತಿ ಬಿ.ಚೌಟ, ಜಯಂತಿ ಆರ್.ರೈ ಹಾಗೂ ಪರಿಶಿಷ್ಟ ಪಂಗಡದಲ್ಲಿ ಹೇಮಾವತಿ ನಾಯ್ಕ ಮತ್ತು ಪರಿಶಿಷ್ಟ ಜಾತಿಯಲ್ಲಿ ಅಮಿತಾ ಬಿ.ಕೆರವರುಗಳು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.









