ಪುತ್ತೂರು:ಸೆ.29 ಮತ್ತು ಅಕ್ಟೋಬರ್ 26ರಂದು ನಡೆದ ಕಡ್ಡಾಯ ಕನ್ನಡ ಪರೀಕ್ಷೆ ಹಾಗೂ ಅಕ್ಟೋಬರ್ 26ರಂದು ನಡೆದ ನೇಮಕಾತಿ ಪರೀಕ್ಷೆಗಳಲ್ಲಿ ವಿದ್ಯಾಮಾತಾ ಅಕಾಡೆಮಿಯ 23 ಅಭ್ಯರ್ಥಿಗಳು ಉತ್ತೀರ್ಣರಾಗಿ ಅರ್ಹತಾ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ.
ವಿದ್ಯಾಮಾತಾ ಅಕಾಡೆಮಿಯು ಗ್ರಾಮ ಆಡಳಿತ ನೇಮಕಾತಿಯ ಪರೀಕ್ಷೆಗೆ ಆನ್ಲೈನ್ ಮತ್ತು ನೇರ ತರಗತಿಯ ಮೂಲಕ ಹಾಗೂ ಹಲವಾರು ಕಾರ್ಯಗಾರಗಳ ಮೂಲಕ ತರಬೇತಿಯನ್ನು ನೀಡಲಾಗಿತ್ತು. ಇದೀಗ ಎರಡು ಪರೀಕ್ಷೆಗಳ ಅಂಕಗಳ ಆಧಾರದಲ್ಲಿ ಅರ್ಹತಾ ಪಟ್ಟಿಯು ಬಿಡುಗಡೆಗೊಳಿಸಲಾಗಿದ್ದು, ಅಂತಿಮ ಪಟ್ಟಿಯನ್ನು ಆಯಾ ಜಿಲ್ಲೆಗಳ ಜಿಲ್ಲಾಧಿಕಾರಿಗಳ ಮೂಲಕ ಬಿಡುಗಡೆಗೊಳಿಸುವುದಾಗಿ ಸರಕಾರದ ಪ್ರಕಟಣೆಯು ತಿಳಿಸಿರುತ್ತದೆ. ಅರ್ಹ ಎಲ್ಲ ಅಭ್ಯರ್ಥಿಗಳನ್ನು ವಿದ್ಯಾಮಾತಾ ಅಕಾಡೆಮಿಯ ಆಡಳಿತ ನಿರ್ದೇಶಕರಾದ ಭಾಗ್ಯೇಶ್ ರೈ ರವರು ಅಭಿನಂದಿಸಿದ್ದಾರೆ.