ಪುತ್ತೂರು: ಆರ್ಯಾಪು ಗ್ರಾಮದ ಮಿನಿಪದವು ಶ್ರೀ ಅಯ್ಯಪ್ಪ ಭಜನಾ ಮಂದಿರದಲ್ಲಿ ಜ.7 ಹಾಗೂ 8ರಂದು ನಡೆಯಲಿರುವ ಪ್ರತಿಷ್ಠಾ ಮಹೋತ್ಸವದ ಆಮಂತ್ರಣ ಪತ್ರಿಕೆಯು ಡಿ.19ರಂದು ಕಾರ್ಪಾಡಿ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಬಿಡುಗಡೆಗೊಂಡಿತು.
ದೇವಸ್ಥಾನದಲ್ಲಿ ಪೂಜೆ, ಪ್ರಾರ್ಥನೆ ಸಲ್ಲಿಸಿದ ಬಳಿಕ ಆಮಂತ್ರಣ ಪತ್ರಿಕೆ ಬಿಡುಗಡೆಗೊಳಿಸಲಾಯಿತು. ಕಾರ್ಪಾಡಿ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಬೂಡಿಯಾರು ರಾಧಾಕೃಷ್ಣ ರೈ ಆಮಂತ್ರಣ ಪತ್ರಿಕೆ ಬಿಡುಗಡೆಗೊಳಿಸಿದರು. ಭಜನಾ ಮಂದಿರದ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ರಾಧಾಕೃಷ್ಣ ಬೋರ್ಕರ್, ಪ್ರಧಾನ ಕಾರ್ಯದರ್ಶಿ ಹರೀಶ್ ಕುಮಾರ್ ಮಿನಿಪದವು, ಉಪಾಧ್ಯಕ್ಷ ಸದಾನಂದ ಶೆಟ್ಟಿ ಕೂರೇಲು, ಕೋಶಾಧಿಕಾರಿ ಹರೀಶ್ ನಾಯಕ್ ಬಳಕ್ಕ, ಶ್ರೀ ಅಯ್ಯಪ್ಪ ಸೇವಾ ಟ್ರಸ್ಟ್ ಅಧ್ಯಕ್ಷ ಶ್ರೀಧರ ನಾಯ್ಕ ಮಿನಿಪದವು, ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ಸೀತಾರಾಮ ರೈ ಕೈಕಾರ, ಉಪಾಧ್ಯಕ್ಷ ನವೀನ್ ಕುಮಾರ್ ರೈ ಪನಡ್ಕ ಕೈಕಾರ, ಮಹಾಬಲ ರೈ ಒಳತ್ತಡ್ಕ, ರಾಮಣ್ಣ ಗೌಡ ಪರನೀರು, ಯತೀಶ್ ದೇವ ಸಂಟ್ಯಾರು, ಚಂದ್ರಹಾಸ ರೈ ಪನಡ್ಕ, ಪ್ರಧಾನ ಕಾರ್ಯದರ್ಶಿ ಪ್ರಜ್ವಲ್ ರೈ ತೊಟ್ಲ ಚಿಪ್ಪಾರುಗುತ್ತು, ವೈದಿಕ ಸಮಿತಿಯ ಲೋಕೇಶ್ ಮಿನಿಪದವು, ಅಲಂಕಾರ ಸಮಿತಿಯ ಅಶೋಕ್ ಮರಿಕೆ, ಮಂಜುನಾಥ ನಾಯ್ಕ ಬಿಜತ್ರೆ, ಕಾರ್ಯಾಲಯ ಸಮಿತಿಯ ತಿಮ್ಮಪ್ಪ ಗೌಡ ಕೂರೇಲು, ನೀರು ಮತ್ತು ಸ್ವಚ್ಚತ ಸಮಿತಿಯ ರಾಮಚಂದ್ರ ಮಿನಿಪದವು, ಕಾರ್ಪಾಡಿ ಸುಬ್ರಹ್ಮಣ್ಯ ದೇವಸ್ಥಾನದ ಜೀರ್ಣೋದ್ಧಾರ ಸಮಿತಿ ಕಾರ್ಯದರ್ಶಿ ಗಿರೀಶ್ ಕಿನ್ನಿಜಾಲು ಹಾಗೂ ದೇವಸ್ಥಾನದ ಅರ್ಚಕ ಸೂರ್ಯನಾರಾಯಣ ಭಟ್ ಸೇರಿದಂತೆ ಹಲವು ಮಂದಿ ಭಕ್ತಾದಿಗಳು ಉಪಸ್ಥಿತರಿದ್ದರು.
ಎರಡು ದಿನಗಳ ಕಾಲ ನಡೆಯಲಿರುವ ಪ್ರತಿಷ್ಠಾ ಮಹೋತ್ಸವದಲ್ಲಿ ಜ.7ರಂದು ಅಪರಾಹ್ನ ಹೊರೆಕಾಣಿಕೆ ಸಮರ್ಪಣೆ, ಸಂಜೆ ಸಂಟ್ಯಾರ್ನಿಂದ ಅಯ್ಯಪ್ಪ ದೇವರ ಛಾಯಾ ಬಿಂಬದ ಮೆರವಣಿಗೆ, ತಂತ್ರಿಗಳಿಗೆ ಪೂರ್ಣಕುಂಭ ಸ್ವಾಗತ, ವಿವಿಧ ವೈದಿಕ, ತಾಂತ್ರಿಕ ವಿಧಿ ವಿಧಾನಗಳು, ಜ.8ರಂದು ವಿವಿಧ ವೈದಿಕ, ತಾಂತ್ರಿಕ ವಿಧಿ ವಿಧಾನಗಳು, ಭಜನೆ, ಪ್ರತಿಷ್ಠಾಪನೆ, ಕಲಶಾಭಿಷೇಕ, ಧಾರ್ಮಿಕ ಸಭೆ, ಮಧ್ಯಾಹ್ನ ಮಹಾಪೂಜೆ, ಅನ್ನಸಂತರ್ಪಣೆ, ಸಂಜೆ ಸತ್ಯನಾರಾಯಣ ಪೂಜೆ, ರಾತ್ರಿ ವಿಷ್ಣು ಮಕ್ಕಳ ಯಕ್ಷ ಬಳಗದವರಿಂದ ಇರ್ದೆ-ಉಪ್ಪಳಿಗೆ ಇವರಿಂದ ‘ಶ್ರೀಅಯ್ಯಪ್ಪ ಚರಿತ್ರೆ’ ಎಂಬ ಯಕ್ಷಗಾನ ನಡೆಯಲಿದೆ ಎಂದು ಅಯ್ಯಪ್ಪ ಸೇವಾ ಟ್ರಸ್ಟ್ನ ಪ್ರಕಟಣೆ ತಿಳಿಸಿದೆ.