ಶ್ರೀ ರಾಮಕುಂಜೇಶ್ವರ ವಿದ್ಯಾಲಯದಲ್ಲಿ ದಿ|ಪ್ರದೀಪ್ ಬಾಕಿಲ ಅವರಿಗೆ ಶ್ರದ್ಧಾಂಜಲಿ ಸಭೆ

0

ರಾಮಕುಂಜ: ಡಿ.5ರಂದು ಹೃದಯಾಘಾತದಿಂದ ನಿಧನರಾದ ಶ್ರೀ ರಾಮಕುಂಜೇಶ್ವರ ವಿದ್ಯಾಲಯದ ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷ, ಶಾಂತಿನಗರ ಸರಕಾರಿ ಹಿ.ಪ್ರಾ.ಶಾಲೆಯ ಪ್ರಭಾರ ಮುಖ್ಯಶಿಕ್ಷಕ, ಆಲಂಕಾರು ಗ್ರಾಮದ ಬಾಕಿಲ ನಿವಾಸಿ ಪ್ರದೀಪ್ (41ವ.)ಅವರಿಗೆ ಶ್ರೀ ರಾಮಕುಂಜೇಶ್ವರ ವಿದ್ಯಾಲಯದ ವತಿಯಿಂದ ಶ್ರದ್ಧಾಂಜಲಿ ಸಭೆ ಡಿ.20ರಂದು ಶ್ರೀ ರಾಮಕುಂಜೇಶ್ವರ ವಿದ್ಯಾಲಯದ ಸಭಾಭವನದಲ್ಲಿ ನಡೆಯಿತು.


ನುಡಿನಮನ ಸಲ್ಲಿಸಿದ ಶ್ರೀ ರಾಮಕುಂಜೇಶ್ವರ ವಿದ್ಯಾಲಯದ ಕಾರ್ಯದರ್ಶಿ ಕೆ. ಸೇಸಪ್ಪ ರೈ ಅವರು, ಪ್ರದೀಪ್ ಬಾಕಿಲ ಅವರು ಕೇವಲ ಒಂದು ಸಂಘಟನೆಯ ಸೊತ್ತು ಆಗಿರಲಿಲ್ಲ. ಅವರು ಊರಿನ ಸೊತ್ತು ಆಗಿದ್ದರು. ಅವರು ಶಾಲೆಗೆ ಮಾತ್ರ ಅಧ್ಯಪಕರಾಗದೆ ಊರಿಗೂ ಅಧ್ಯಾಪಕರಾಗಿ ಇದ್ದರು. ಅವರ ಜೀವನ ಶೈಲಿಯನ್ನು ನಮ್ಮ ಜೀವನದಲ್ಲೂ ಅಳವಡಿಸಿಕೊಳ್ಳಬೇಕು ಎಂದು ನುಡಿದರು.


ಶಾಲೆಯ ಸಂಚಾಲಕ ಶಿವಪ್ರಸಾದ್ ಆಚಾರ್ಯ, ಸದಸ್ಯರಾದ ಎಂ. ಸತೀಶ್ ಭಟ್, ಹರಿನಾರಾಯಣ ಆಚಾರ್ಯ, ರಕ್ಷಕ ಶಿಕ್ಷಕ ಸಂಘದ ಉಪಾಧ್ಯಕ್ಷ ಸುಲೈಮಾನ್, ಸದಸ್ಯರಾದ ನೀರಾಜ್ ಕುಮಾರ್ ಎ, ಸೋಮಶೇಖರ ಶೆಟ್ಟಿ, ಶ್ರೀ ರಾಮಕುಂಜೇಶ್ವರ ಮಹಾವಿದ್ಯಾಲಯದ ಪ್ರಾಂಶುಪಾಲ ಗಣರಾಜ ಕುಂಬ್ಳೆ ಅವರು ದಿವಂಗತ ಪ್ರದೀಪ್ ಬಾಕಿಲ ಅವರ ಗುಣಗಾನ ಮಾಡಿ ನುಡಿನಮನ ಸಲ್ಲಿಸಿದರು. ಶ್ರೀ ರಾಮಕುಂಜೇಶ್ವರ ವಿದ್ಯಾಲಯದ ಪ್ರಾಂಶುಪಾಲ ಪ್ರವೀದ್ ಪಿ.ಸ್ವಾಗತಿಸಿ, ನಿರೂಪಿಸಿದರು. 1 ನಿಮಿಷ ಮೌನ ಪ್ರಾರ್ಥನೆ ಸಲ್ಲಿಸಿ ದಿ.ಪ್ರದೀಪ್ ಬಾಕಿಲ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಶ್ರದ್ಧಾಂಜಲಿ ಸಲ್ಲಿಸಲಾಯಿತು.

LEAVE A REPLY

Please enter your comment!
Please enter your name here