ಡಿ.22:ಮೊಟ್ಟೆತ್ತಡ್ಕ ಶ್ರೀ ಅಮೃತಾ ಸ್ವ-ಸಹಾಯ ಸಂಘದಿಂದ ಸಾವಿರದ ಒಂದನೇ ಸಭೆಯ ಸಮಾರಂಭ

0

ಪುತ್ತೂರು: ಪರಮಪೂಜ್ಯ ಖಾವಂದರು ಹಾಗೂ ಮಾತೃಶ್ರೀ ಅಮ್ಮನವರ ಆಶೀರ್ವಾದದೊಂದಿಗೆ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ಬಿ.ಸಿ ಟ್ರಸ್ಟ್ ಪುತ್ತೂರು, ಆಕಾಶ್ ಮಿತ್ರಮಂಡಲ ಮೊಟ್ಟೆತ್ತಡ್ಕ ಪುತ್ತೂರು ಇದರ ಸಹಕಾರದೊಂದಿಗೆ ಶ್ರೀ ಅಮೃತಾ ಸ್ವ-ಸಹಾಯ ಸಂಘ ಮೊಟ್ಟೆತ್ತಡ್ಕ ಇದರ ಸಾವಿರದ ಒಂದನೇ ಸಭೆಯ ಸಮಾರಂಭವು ಡಿ.22ರಂದು ಬೆಳಿಗ್ಗೆ ಪುತ್ತೂರಿನ ಹೃದಯ ಭಾಗದಲ್ಲಿರುವ ಸೈನಿಕ ಭವನದಲ್ಲಿ ಜರಗಲಿದೆ.


ಪುತ್ತೂರು ನಗರ ಪೊಲೀಸ್ ಠಾಣೆಯ ಎಸ್‌ಐ ಆಂಜನೇಯ ರೆಡ್ಡಿರವರು ದೀಪ ಪ್ರಜ್ವಲನೆ ಮಾಡಲಿದ್ದಾರೆ. ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಜಯಗುರು ಆಚಾರ್ ಹಿಂದಾರು ಹಾಗೂ ಗಾಯಕ ಸನತ್ ಆಚಾರ್ಯ ಸುಳ್ಯ, ಪುತ್ತೂರು ನಗರಸಭೆ ಉಪಾಧ್ಯಕ್ಷ ಬಾಲಚಂದ್ರ ಕೆಮ್ಮಿಂಜೆರವರಿಗೆ ಗೌರವ ಸಮರ್ಪಣೆ ನಡೆಯಲಿರುವುದು. ಮುಖ್ಯ ಅತಿಥಿಗಳಾಗಿ ಧರ್ಮಸ್ಥಳ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ ಬಿ.ಸಿ ವಿಭಾಗ ಕಛೇರಿಯ ನಿರ್ದೇಶಕ ವಸಂತ ಕೆ, ಪುತ್ತೂರು ತಾಲೂಕು ಯೋಜನಾಧಿಕಾರಿ ಶಶಿಧರ ಗೌಡ ಎಂ, ಸಂಪನ್ಮೂಲ ವ್ಯಕ್ತಿ ಪೂರ್ಣಾತ್ಮರಾಮ್ ಈಶ್ವರಮಂಗಲ, ಮಾಜಿ ಕೇಂದ್ರ ಸಮಿತಿ ಅಧ್ಯಕ್ಷ ಸದಾಶಿವ ಮಣಿಯಾಣಿ ಕುತ್ಯಾಡಿ, ಪುತ್ತೂರು ನಗರಸಭೆ ಉಪಾಧ್ಯಕ್ಷ ಬಾಲಚಂದ್ರ ಕೆ,ರವರು ಭಾಗವಹಿಸಲಿದ್ದಾರೆ ಎಂದು ಮೊಟ್ಟೆತ್ತಡ್ಕ ಆಕಾಶ್ ಮಿತ್ರಮಂಡಲ ಇದರ ಅಧ್ಯಕ್ಷ ಉಮೇಶ್ ಡಿ.ಕೆ ಹಾಗೂ ಸರ್ವ ಸದಸ್ಯರು ಮತ್ತು ಶ್ರೀ ಅಮೃತಾ ಸ್ವ-ಸಹಾಯ ಸಂಘ ಮೊಟ್ಟೆತ್ತಡ್ಕ ಇದರ ಅಧ್ಯಕ್ಷ ಗೋವಿಂದರಾಜ್ ಬಿ ಹಾಗೂ ಸರ್ವ ಸದಸ್ಯರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here