ಫಿಲೋಮಿನಾ ಪ.ಪೂ ಕಾಲೇಜಿನಲ್ಲಿ “ಪ್ರತಿಭಾ ಪುರಸ್ಕಾರ” ಸಮಾರಂಭ

0

ನಿದ್ರೆ ಮಾಡಲು ಬಿಡದಂತಹ ಕನಸನ್ನು ಕಾಣಬೇಕು-ವಂ.ಸ್ಟಾನಿ ಪಿಂಟೋ

ಪುತ್ತೂರು: ವಿದ್ಯಾರ್ಥಿಗಳಾದ ನೀವು ಬದುಕಿನಲ್ಲಿ ದೊಡ್ಡದನ್ನು ಸಾಧಿಸುವ ಕನಸನ್ನು ಕಾಣಬೇಕು. ಈ ಕನಸು ನಿಮಗೆ ನಿದ್ರೆ ಮಾಡಲು ಬಿಡದಂತಹ ಕನಸಾಗಬೇಕು. ಕನಸಿನ ಸಾಕಾರಕ್ಕಾಗಿ ಕಠಿಣ ಪರಿಶ್ರಮ ಪಡಬೇಕು ಎಂದು ಮುಕ್ಕ ಹೋಲಿ ಸ್ಪಿರಿಟ್ ಚರ್ಚ್‌ನ ಧರ್ಮಗುರು ವಂ. ಸ್ಟಾನಿ ಪಿಂಟೋ ಹೇಳಿದರು. ಸಂತ ಪಿಲೋಮಿನಾ ಪದವಿ ಪೂರ್ವ ಕಾಲೇಜಿನ ಪ್ರಾಂಗಣದಲ್ಲಿ ಡಿ.21ರಂದು ನಡೆದ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಅವರು ಮಾತನಾಡಿದರು. ವಿದ್ಯಾರ್ಥಿಗಳು ಪಠ್ಯ ಹಾಗೂ ಪಠ್ಯೇತರ ಚಟುವಟಿಕೆಗಳಲ್ಲಿ ಸಾಧನೆಯನ್ನು ಮಾಡಿ ಇಂದು ಬಹುಮಾನವನ್ನು ಪಡೆಯುತ್ತಿದ್ದೀರಿ. ನಿಮಗೆಲ್ಲರಿಗೂ ಅಭಿನಂದನೆಗಳನ್ನು ತಿಳಿಸುತ್ತೇನೆ. ನಿಮ್ಮ ಗುರಿಯ ಬಗ್ಗೆ ನಿಮಗೆ ಸ್ಪಷ್ಟತೆ ಇರಲಿ. ನಿಮಗೆ ನಿಮ್ಮ ಜೀವನದಲ್ಲಿ ಮೂರು ಋಣಗಳನ್ನು ತೀರಿಸುವ ಜವಾಬ್ದಾರಿ ಇದೆ. ಪಿತೃ ಋಣ, ಸಮಾಜ ಋಣ ಹಾಗೂ ಆಚಾರ್ಯ ಋಣ ಇವುಗಳನ್ನು ತೀರಿಸಲು ಜೀವನದಲ್ಲಿ ಶ್ರೇಷ್ಠ ಸಾಧನೆಯನ್ನು ಮಾಡಬೇಕು. ನಿಮ್ಮ ಸಾಧನೆ ನಿಮ್ಮ ಹೆತ್ತವರು, ಸಮಾಜ ಹಾಗೂ ಗುರು ವೃಂದಕ್ಕೆ ಸಂತೋಷವನ್ನು ನೀಡುತ್ತದೆ ಎಂದು ಹೇಳಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲ ರೆ.ಫಾ. ಅಶೋಕ್ ರಾಯನ್ ಕ್ರಾಸ್ತಾ ಮಾತನಾಡಿ, ಜೀವನದಲ್ಲಿ ಯಶಸ್ಸನ್ನು ಸಾದಿಸುವುದು ಅತ್ಯಂತ ಮುಖ್ಯವಾಗಿದ್ದು, ಯಶಸ್ಸನ್ನು ಪಡೆಯಲು ಸಾಕಷ್ಟು ಪರಿಶ್ರಮದ ಅಗತ್ಯವಿದೆ. ವಿದ್ಯಾರ್ಥಿ ಜೀವನದಲ್ಲಿ ತಾವು ಪಡುವ ಪರಿಶ್ರಮ ಮುಂದಿನ ಜೀವನದಲ್ಲಿ ನಿಮಗೆ ಯಶಸ್ಸನ್ನು ಖಚಿತಪಡಿಸುತ್ತದೆ. ಆಗ ನಿಮ್ಮ ಯಶಸ್ಸನ್ನು ನೋಡಿ ನಿಮ್ಮ ಹೆತ್ತವರು ಮತ್ತು ಗುರುಗಳು ಸಂತೋಷ ಪಡುತ್ತಾರೆ. ಹಾಗಾಗಿ ತಾವೆಲ್ಲರೂ ಕಠಿಣ ಪರಿಶ್ರಮದಿಂದ ಜೀವನದ ಉನ್ನತಿಯನ್ನು ಸಾದಿಸಬೇಕು ಎಂದು ತಿಳಿಸಿದರು.


ಚರ್ಚ್ ಪಾಲನಾ ಸಮಿತಿಯ ಉಪಾಧ್ಯಕ್ಷರಾದ ಜೆರಾಲ್ಡ್. ಡಿ ಕೋಸ್ಟಾ, ರಕ್ಷಕ ಶಿಕ್ಷಕ ಸಂಘದ ಉಪಾಧ್ಯಕ್ಷರಾದ ಡಾ. ಶ್ರೀ ಪ್ರಕಾಶ್ ಬಿ. ಶುಭ ಹಾರೈಸಿದರು.
ಸಾಹಿತ್ಯಕ, ಸಾಂಸ್ಕೃತಿಕ, ಕ್ರೀಡೆ, ಎನ್.ಸಿ.ಸಿ ಮತ್ತು ರೋವರ್ಸ್ ರೇಂಜರ್ಸ್‌ನಲ್ಲಿ ಸಾಧನೆ ಮಾಡಿದ ವಿದ್ಯಾರ್ಥಿಗಳನ್ನು ಗೌರವಿಸಲಾಯಿತು. ಕಾಲೇಜು ವಾರ್ಷಿಕೋತ್ಸವದ ಪ್ರಯುಕ್ತ ನಡೆದ ವಿವಿಧ ಸ್ಪರ್ಧೆಗಳಲ್ಲಿ ಪ್ರಶಸ್ತಿ ಪಡೆದ ವಿದ್ಯಾರ್ಥಿಗಳನ್ನು ಅಭಿನಂದಿಸಲಾಯಿತು. 2023-24ನೇ ಸಾಲಿನ ಪ್ರಥಮ ಪಿಯುಸಿಯ ವಾರ್ಷಿಕ ಪರೀಕ್ಷೆಯಲ್ಲಿ ಪ್ರತಿ ವಿಷಯದಲ್ಲಿ ಅತಿ ಹೆಚ್ಚು ಅಂಕಗಳನ್ನು ಪಡೆದ ವಿದ್ಯಾರ್ಥಿಗಳಿಗೆ ದತ್ತಿನಿಧಿ ಬಹುಮಾನಗಳನ್ನು ನೀಡಲಾಯಿತು.

ವಿದ್ಯಾರ್ಥಿ ಸಂಘದ ನಿರ್ದೇಶಕ ಪ್ರಶಾಂತ್ ಭಟ್. ಪಿ, ಪಿಲೋಮಿನಾ ಮೊಂತೇರೋ ಹಾಗೂ ಕಾಲೇಜಿನ ಬೋಧಕ ಮತ್ತು ಬೋಧಕೇತರ ವರ್ಗದವರು, ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

ಉಪನ್ಯಾಸಕಿಯರಾದ ಜಯಲಕ್ಷ್ಮಿ, ಹರ್ಷಿತ್ ಕುಮಾರ್, ಪೂರ್ಣಿಮಾ, ನಿರಂಜನ್ ಹಾಗೂ ವಿಜಯ್ ಮ್ಯಾಕ್ಸಿಂ ಡಿಸೋಜ ವಿವಿಧ ಕಾರ್ಯಕ್ರಮ ನಿರ್ವಹಿಸಿದರು. ಅಧ್ಯಕ್ಷೆ ಅಂಕಿತ ಎಲ್. ಡಿ. ಅತಿಥಿಗಳನ್ನು ಪರಿಚಯಿಸಿದರು. ಪ್ರದರ್ಶನ ಕಲಾ ಸಂಘದ ನಿರ್ದೇಶಕರಾದ ಸುಮನಾ ರಾವ್‌ರವರ ನಿರ್ದೇಶನದಲ್ಲಿ ಪ್ರದರ್ಶನ ಕಲಾ ಸಂಘದ ವಿದ್ಯಾರ್ಥಿಗಳು ಪ್ರಾರ್ಥಿಸಿದರು. ವಿದ್ಯಾರ್ಥಿ ಸಂಘದ ಜೊತೆ ಕಾರ್ಯದರ್ಶಿ ಸೃಧನ್ ಕೆ. ಆಳ್ವ ಸ್ವಾಗತಿಸಿ ಕಾರ್ಯದರ್ಶಿ ಧ್ರುವ.ಜೆ. ಭಂಡಾರಿ ವಂದಿಸಿದರು. ಉಪನ್ಯಾಸಕಿ ವಿನೋಲಾ ಅಮಿತಾ ಲೋಬೋ ಕಾರ್ಯಕ್ರಮ ನಿರೂಪಿಸಿದರು. ಸಭಾ ಕಾರ್ಯಕ್ರಮದ ನಂತರ ಬೋಧಕ, ಬೋಧಕೇತರ ಸಿಬ್ಬಂದಿ ವರ್ಗ, ರಕ್ಷಕ ಶಿಕ್ಷಕ ಸಂಘದ ಸರ್ವ ಸದಸ್ಯರು ಹಾಗೂ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.

LEAVE A REPLY

Please enter your comment!
Please enter your name here