ಪುತ್ತೂರು: ವೈದ್ಯಕೀಯ ಸೇವೆಯಲ್ಲಿ ಸಾಮಾಜಿಕ ಜಾಗೃತಿ ಮೂಡಿಸುವ ಕಾರ್ಯಕ್ಕಾಗಿ ಐಎಂಎ ಪುತ್ತೂರಿನ ಸಹಯೋಗದಲ್ಲಿ ಜನಪ್ರಿಯ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯ ವತಿಯಿಂದ ಪುತ್ತೂರು ಚೇತನಾ ಆಸ್ಪತ್ರೆಯ ಹಿರಿಯ ವೈದ್ಯ ಡಾ.ಜೆ.ಸಿ ಅಡಿಗ, ಮಧುಮೇಹ ತಜ್ಞ ಡಾ.ನಝೀರ್ ಅಹ್ಮದ್ ಅವರಿಗೆ ‘ಜನಪ್ರಿಯ ವೈದ್ಯಕೀಯ ಸೇವಾ ರತ್ನ’ ಪ್ರಶಸ್ತಿ ಪ್ರದಾನ ಮಾಡಲಾಗಿದೆ.
ಪುತ್ತೂರಿನ ದರ್ಬೆ ಶಂಕರಿ ಗೋಪಾಲ್ ಕೃಷ್ಣ ಆರ್ಕೇಡ್ ನಲ್ಲಿ ಜನಪ್ರಿಯ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ಮತ್ತು ಭಾರತೀಯ ವೈದ್ಯಕೀಯ ಸಂಘ ಪುತ್ತೂರು ಘಟಕದ ವತಿಯಿಂದ ವೈದ್ಯರಿಗೆ ಉಪನ್ಯಾಸ ಕಾರ್ಯಕ್ರಮದಲ್ಲಿ ಈ ಪ್ರಶಸ್ತಿಯನ್ನು ಪ್ರದಾನ ಮಾಡಿ ಗೌರವಿಸಲಾಯಿತು.ಭಾರತೀಯ ವೈದ್ಯಕೀಯ ಸಂಘ ಪುತ್ತೂರು ಘಟಕದ ಅಧ್ಯಕ್ಷ ಡಾ. ನರಸಿಂಹ ಶರ್ಮಾ ಕಾನಾವು ಅಧ್ಯಕ್ಷತೆ ವಹಿಸಿಕೊಂಡಿದ್ದರು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಜನಪ್ರಿಯ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯ ಮುಖ್ಯಸ್ಥ ಡಾ. ಅಬ್ದುಲ್ ಬಶೀರ್ ವಿ.ಕೆ, ಜನಪ್ರಿಯ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯ ಸಿಇಒ ಮತ್ತು ನಿರ್ದೇಶಕ ಡಾ. ಕಿರಾಶ್ ಪರ್ತಿಪ್ಪಾಡಿ, ಐಎಂಎ ಪುತ್ತೂರು ಘಟಕದ ಕೋಶಾಧಿಕಾರಿ ಡಾ. ಅಶೋಕ್ ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಜನಪ್ರಿಯ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯ ಡಾ. ಅವಿನಾಶ್ ಜೆ, ಸ್ತ್ರೀ ರೋಗ ತಜ್ಞ ಡಾ. ಫಾತಿಮಾ ಇಸ್ಮತ್, ಮಕ್ಕಳ ತಜ್ಞ ಡಾ. ಅನೂಪ್ ಇತಿಹಾಸ್ ವಿವಿಧ ವಿಚಾರಗಳಲ್ಲಿ ಉಪನ್ಯಾಸವನ್ನು ನೀಡಿದರು. ಜನಪ್ರಿಯ ಆಸ್ಪತ್ರೆಯ ಡಾ. ಹಸನ್ ಮುಬಾರಕ್ ಮತ್ತು ನಿರ್ದೇಶಕರಾದ ಡಾ. ಶಫಾಕ್ ಮೊಹಮ್ಮದ್ ಉಪಸ್ಥಿತರಿದ್ದರು.