ಪುತ್ತೂರು: ಕೆದಿಲ ಗ್ರಾಮದ ವಾಲ್ತಾಜೆ ನಿವಾಸಿ, ಜಾತಕ ತಜ್ಞರು, ಯಕ್ಷಗಾನ ಅರ್ಥದಾರಿ, ದಿ| ಎನ್.ವಿ. ಕೃಷ್ಣರಾವ್ರವರ ಪತ್ನಿ ಸರಸ್ವತಿ (86 ವ.) ದ. 13ರಂದು ನಿಧನರಾದರು.
ಇವರು ಕೆದಿಲ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯ ನಿವೃತ್ತ ಮುಖ್ಯೋಪಾಧ್ಯಾಯಿನಿಯಾಗಿದ್ದು ಈ ಶಾಲೆಯ ಪ್ರಥಮ ಶಿಕ್ಷಕಿಯಾಗಿದ್ದರು.
ಇವರು ಸಂಗೀತ, ನಾಟಕ, ರಂಗಗೀತೆಗಳಿಗೆ ರಾಗ ಸಂಯೋಜಕಿಯಾಗಿ, ಉತ್ತಮ ಕಸೂತಿ ತಜ್ಞೆಯಾಗಿಯೂ, ಜನ ಮೆಚ್ಚಿದ ಶಿಕ್ಷಕಿಯಾಗಿದ್ದರು.
ಮೃತರು ಪುತ್ರ ಪುಣಚ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯಗುರು ರಾಮಚಂದ್ರ ರಾವ್ ವಿ., ಪುತ್ರಿಯರಾದ ಭಾರತಿ, ಮಾಲತಿ ಮತ್ತು ನಳಿನಿಯವರನ್ನು ಅಗಲಿದ್ದಾರೆ.