ಶ್ರೀ ಸುಬ್ರಹ್ಮಣ್ಯ ಜ್ಞಾನ ದೇವರು: ಶ್ಯಾಮ ಭಟ್
ಉಪ್ಪಿನಂಗಡಿ: ಶಿವ ಪುತ್ರನಾದ ಶ್ರೀ ಸುಬ್ರಹ್ಮಣ್ಯನು ಗ್ರಾಮ ದೇವರು ಮಾತ್ರವಲ್ಲ. ಇಡೀ ರಾಷ್ಟ್ರದ ದೇವರಾಗಿದ್ದಾರಲ್ಲದೆ, ಜ್ಞಾನ ದೇವರು ಆಗಿದ್ದಾರೆ. ರಾಮ ಎಲ್ಲಿ ಹುಟ್ಟಿದ ಎಂಬ ಪ್ರಶ್ನೆ ಸುಪ್ರೀಂ ಕೋರ್ಟ್ನ ಮುಂದೆ ಬಂದಾಗ ಅದಕ್ಕೆ ಉತ್ತರ ಒದಗಿಸಿದ್ದು, ಅಗಸ್ತ್ಯ ಮುನಿಗಳು ಮತ್ತು ಶ್ರೀ ಸುಬ್ರಹ್ಮಣ್ಯನ ನಡುವೆ ನಡೆದ ಸಂವಾದದ ಬಗ್ಗೆ ಸ್ಕಂದ ಪುರಾಣದಲ್ಲಿ ಇರುವ ಉಲ್ಲೇಖದ ಬಗ್ಗೆ ಪ್ರಸ್ತಾಪಿಸಿ ಹಿರಿಯ ವಕೀಲರಾದ ಒಡಿಯೂರು ಶ್ಯಾಮ ಭಟ್ ಮಾತನಾಡಿದರು.
ಪದಾಳ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ನಡೆಯುತ್ತಿರುವ ಬ್ರಹ್ಮಕಲಶೋತ್ಸವ ಕಾರ್ಯಕ್ರಮದಲ್ಲಿ 5ನೇ ದಿನವಾದ ಡಿ.22ರಂದು ರಾತ್ರಿ ನಡೆದ ಧಾರ್ಮಿಕ ಸಭೆಯಲ್ಲಿ ಅವರು ಧಾರ್ಮಿಕ ಉಪನ್ಯಾಸ ನೀಡಿದರು.
ಈ ಪ್ರಪಂಚವು ಶಿವಶಕ್ತಿಯದ್ದಾಗಿದ್ದು, ಈತನ ಪುತ್ರನಾದ ಶ್ರೀ ಸುಬ್ರಹ್ಮಣ್ಯನು ಯೋಗ ಶಕ್ತಿಯ ಪ್ರತೀಕವಾಗಿದ್ದಾನೆ. ಭೂಮಿಯಲ್ಲಿ ಚೈತನ್ಯ ಮೂಡಿಸುವ ಅಗಸ್ತ್ಯ ಮುನಿಗಳ ಪ್ರಕ್ರಿಯೆಯಿಂದಾಗಿ ಅವರು ಹೋದಲೆಲ್ಲಾ ಶ್ರೀ ಸುಬ್ರಹ್ಮಣ್ಯನ ಸಾನಿಧ್ಯವನ್ನು ತುಂಬಿದ್ದಾರೆ. ಭೂಮಿಯಲ್ಲಿ ಕರ್ಮ ಮತ್ತು ಅಹಂಕಾರದಿಂದ ನಮ್ಮಲ್ಲಿ ಬಂದ ನಕರಾತ್ಮಕ ಶಕ್ತಿಯನ್ನು ನಾಶ ಮಾಡಲು ಬಂದವ ಶ್ರೀ ಸುಬ್ರಹ್ಮಣ್ಯ. ಅದೈತ್ವದ ಮೂಲ ದೇವರೇ ಶ್ರೀ ಸುಬ್ರಹ್ಮಣ್ಯ ಸ್ವಾಮಿಯು ಅಗಸ್ತ್ಯ ಮುನಿಯವರನ್ನು ಗುರುಗಳೆಂದು ಸ್ವೀಕರಿಸಿದ ಬಳಿಕ ಸಿದ್ಧ ಪರಂಪರೆಯ ಉದಯವೂ ಆಯಿತು ಎಂದ ಅವರು, ಹಿಂದೂ ಧರ್ಮವು ಸನಾತನ ಧರ್ಮವಾಗಿ ಜಗತ್ತಿಗೆ ಬೆಳಕು ನೀಡುತ್ತಿದ್ದು, ಇದರ ವಿರೋಧಿಗಳಲ್ಲಿರುವ ಕೆಟ್ಟ ಚಿಂತನೆಗಳನ್ನು ತೊಲಗಿಸಿ ಅವರಿಗೆ ಉತ್ತಮ ಚಿಂತನೆ ನೀಡುವ ಕೆಲಸವು ಶ್ರೀ ಸುಬ್ರಹ್ಮಣ್ಯ ದೇವರಿಂದಾಗಲಿ ಎಂದರು.
ನಿವೃತ್ತ ಆದಾಯ ತೆರಿಗೆ ಅಧಿಕಾರಿ ಕೆ.ಎ. ಚಂದ್ರಕುಮಾರ್ ಮಾತನಾಡಿ, ತಾನು ಆಡಿ ಬೆಳೆದ ಪರಿಸರದಲ್ಲಿ ಅಜೀರ್ಣಾವಸ್ಥೆಯಲ್ಲಿದ್ದ ದೇವಾಲಯವೊಂದು ಪುನರ್ನಿರ್ಮಾಣಗೊಂಡು ಊರಿಗೆ ಸುಭೀಕ್ಷೆಯನ್ನು ನೀಡಿದೆ. ಈಗ ಈ ದೇವಾಲಯದ ಬ್ರಹ್ಮಕಲಶೋತ್ಸವವಾಗುತ್ತಿರುವುದು ಖುಷಿಯ ವಿಚಾರ. ದೈವ- ದೇವರ ಆಶೀರ್ವಾದವಿದ್ದರೆ ಎಲ್ಲವೂ ಸಾಧ್ಯ ಎನ್ನುವುದಕ್ಕೆ ಕಷ್ಟದ ಜೀವನದಲ್ಲಿ ಬೆಳೆದು ಕೇಂದ್ರ ಸರಕಾರದ ಅಧಿಕಾರಿಯಾಗಿ ಉತ್ತಮ ಭವಿಷ್ಯ ರೂಪಿಸಿಕೊಂಡಿರುವ ನಾನೇ ಸಾಕ್ಷಿ ಎಂದರು.
ಕ್ಷೇತ್ರದ ತಂತ್ರಿಗಳಾದ ಬ್ರಹ್ಮಶ್ರೀ ಕೆಮ್ಮಿಂಜೆ ನಾಗೇಶ ತಂತ್ರಿಯವರು ಮಾತನಾಡಿ, ಪದಾಳದಲ್ಲಿ ಶ್ರೀ ದೇವರ ಸಾನಿಧ್ಯ ನಂದಾ ದೀಪದಂತೆ ಬೆಳಗಿ, ಎಲ್ಲರಿಗೂ ಸುಭೀಕ್ಷೆಯನ್ನು ಅನುಗ್ರಹಿಸಲಿ ಎಂದರು.
ಕುದ್ರೋಳಿ ಗೋಕರ್ಣನಾಥೇಶ್ವರ ಕ್ಷೇತ್ರದ ಕೋಶಾಧಿಕಾರಿ ಪದ್ಮರಾಜ್ ಆರ್. ಪೂಜಾರಿ ಮಾತನಾಡಿ, ನಂಬಿಕೆ, ಆಚರಣೆಗಳಿಗೆ ಭಾರತ ದೇಶದಲ್ಲಿ ಪ್ರಾಧಾನ್ಯತೆ ಇದ್ದು, ನಾವೆಲ್ಲಾ ದೇವರ ಮಕ್ಕಳಾಗಿದ್ದೇವೆ. ಆದ್ದರಿಂದ ಜಾತಿ- ಮತಗಳನ್ನು ಬಿಟ್ಟು ನಾವೆಲ್ಲಾ ಅನೋನ್ಯವಾಗಿ ಬಾಳೋಣ. ದೇವಾಲಯದ ಕೆಲಸವೆಂದರೆ ತೋರ್ಪಡಿಕೆಗಾಗಿ ಬೇಡ. ಸ್ವಾರ್ಥ, ಕಲ್ಮಶವಿಲ್ಲದೆ ಮಾಡುವ ಸೇವೆಯೇ ದೇವರಿಗೆ ಪ್ರಧಾನ ಎಂದರು.
ಕಾರ್ಯಕ್ರಮದಲ್ಲಿ ಕನಕ ಪ್ರಶಸ್ತಿ ಪುರಸ್ಕೃತ ಡಾ. ವಸಂತ ಕುಮಾರ ತಾಳ್ತಜೆ ಅವರನ್ನು ಸನ್ಮಾನಿಸಲಾಯಿತು. ವಿದ್ಯುತ್ ಮತ್ತು ಧ್ವನಿವರ್ಧಕ ಸಮಿತಿಯ ಸಂಚಾಲಕರಾದ ಜತ್ತಪ್ಪ ನಾಯ್ಕ ಬೊಳ್ಳಾವು ಅವರು ಬ್ರಹ್ಮಕಲಶೋತ್ಸವದಲ್ಲಿ ವಿದ್ಯುತ್ ದೀಪಾಲಂಕೃತಕ್ಕೆ ಹಗಲು ರಾತ್ರಿಯೆನ್ನದೆ ತನ್ನೊಂದಿಗೆ ಸಹಕರಿಸಿದವರಿಗೆ ತನ್ನ ವೈಯಕ್ತಿಕ ನೆಲೆಯಲ್ಲಿ ಸ್ಮರಣಿಕೆಯನ್ನು ನೀಡಿ ಗೌರವಿಸಿದರು.
ದೇವಾಲಯದ ಆಡಳಿತ ಸಮಿತಿಯ ಅಧ್ಯಕ್ಷ ಉದಯ ಶಂಕರ ಭಟ್ಟ ಅಧ್ಯಕ್ಷತೆ ವಹಿಸಿ ಮಾತನಾಡಿದರು. ವೇದಿಕೆಯಲ್ಲಿ ಬ್ರಹ್ಮಕಲಶೋತ್ಸವ ಸಮಿತಿಯ ಅಧ್ಯಕ್ಷರಾದ ಜಗದೀಶ ರಾವ್ ಮಣಿಕ್ಕಳ, ಬ್ರಹ್ಮಕಲಶೋತ್ಸವ ಸಮಿತಿಯ ಉಪಾಧ್ಯಕ್ಷ, ಮಹಾದಾನಿಯೂ ಆದ ನಟೇಶ್ ಪೂಜಾರಿ ಪುಳಿತ್ತಡಿ, ದೇವಾಲಯದ ಆಡಳಿತ ಮಂಡಳಿಯ ಕೋಶಾಧಿಕಾರಿ ರಾಮಚಂದ್ರ ಮಣಿಯಾಣಿ ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಪ್ರಮುಖರಾದ ಶ್ರೀಮತಿ ಪ್ರಮೀಳಾ ನಟೇಶ್ ಪೂಜಾರಿ, ಶಯನಾ ಜಯಾನಂದ್, ಕೈಲಾರು ರಾಜಗೋಪಾಲ ಭಟ್, ಪುರುಷೋತ್ತಮ ಪೂಜಾರಿ ಗೌಂಡತ್ತಿಗೆ, ಪದಾಳ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಬ್ರಹ್ಮಕಲಶೋತ್ಸವ ಸಮಿತಿಯ ಉಪಾಧ್ಯಕ್ಷರಾದ ಡಿ. ಚಂದಪ್ಪ ಮೂಲ್ಯ, ಡಾ. ರಾಜಾರಾಮ ಕೆ.ಬಿ., ಪ್ರತಾಪ ಯು. ಪೆರಿಯಡ್ಕ, ಉಷಾಚಂದ್ರ ಮುಳಿಯ, ಪ್ರಧಾನ ಕಾರ್ಯದರ್ಶಿ ಜಯಗೋವಿಂದ ಶರ್ಮಾ ಪದಾಳ, ಜೊತೆ ಕಾರ್ಯದರ್ಶಿಗಳಾದ ಲಕ್ಷ್ಮಣ ಗೌಡ ನೆಡ್ಚಿಲು, ಸುರೇಶ ಗೌಂಡತ್ತಿಗೆ, ಆಡಳಿತ ಸಮಿತಿಯ ಉಪಾಧ್ಯಕ್ಷರಾದ ಸುರೇಶ ಅತ್ರೆಮಜಲು, ಕಾರ್ಯದರ್ಶಿ ಕೇಶವ ರಂಗಾಜೆ, ಜೊತೆ ಕಾರ್ಯದರ್ಶಿ ರಾಮಣ್ಣ ಶೆಟ್ಟಿ ಬೊಳ್ಳಾವು, ಸದಸ್ಯರಾದ ಶಾಂಭವಿ ರೈ ಪುಳಿತ್ತಡಿ, ಹರೀಶ್ಚಂದ್ರ ಮೊಗ್ರಾಲ್ ಕುವೆಚ್ಚಾರು, ಬಿ. ಶಂಕರನಾರಾಯಣ ಭಟ್ ಬೊಳ್ಳಾವು, ಸದಾನಂದ ಶೆಟ್ಟಿ ಕಿಂಡೋವು, ಲೊಕೇಶ ಪೂಜಾರಿ ಬೆತ್ತೋಡಿ, ವಿಜಯಶಿಲ್ಪಿ ಕುಕ್ಕುಜೆ, ಜತ್ತಪ್ಪ ನಾಯ್ಕ ಬೊಳ್ಳಾವು, ನವೀನ್ ಕುಮಾರ್ ಕಲ್ಯಾಟೆ, ಅವನೀಶ್ ಪಿ., ವಿವಿಧ ಸಮಿತಿಯ ಸಂಚಾಲಕರಾದ ಧರ್ನಪ್ಪ ನಾಯ್ಕ ಬೊಳ್ಳಾವು, ಸುನೀಲ್ ಕುಮಾರ್ ದಡ್ಡು, ಜಯಂತ ಪೊರೋಳಿ, ಹರೀಶ್ವರ ಮೊಗ್ರಾಲ್, ಬಿ. ನಾರಾಯಣ ಭಟ್ ಪೆರಿಯಡ್ಕ, ಶಂಕರನಾರಾಯಣ ಭಟ್ ಬೊಳ್ಳಾವು, ಸತ್ಯನಾರಾಯಣ ಭಟ್ ರಂಗಾಜೆ, ಲೊಕೇಶ ಬೆತ್ತೋಡಿ, ಗಿರೀಶ್ ಆರ್ತಿಲ, ನಾಗಾರ್ಜುನ ಪೆರಿಯಡ್ಕ, ಮಹಾಲಿಂಗೇಶ್ವರ ಭಟ್ ಮಧುವನ, ಶ್ರೀರಾಮ ಭಟ್ ಪಾತಾಳ, ಮುಣ್ಣಿಕಾನ ವೆಂಕಟ್ರಮಣ ಭಟ್, ಶಿವರಾಜ ಭಟ್ ಕುಂಟಿನಿ, ಬಿ. ರಾಧಾಕೃಷ್ಣ ಭಟ್ ಬೊಳ್ಳಾವು, ಎನ್.ಪಿ. ಮಂಜುನಾಥ ಭಟ್ ಪೆರಿಯಡ್ಕ, ಕೃಷ್ಣಪ್ಪ ಗೌಡ ಬೊಳ್ಳಾವು, ಬಿ. ಜಗದೀಶ ಪರಕ್ಕಜೆ, ಈಶ್ವರ ನಾಯ್ಕ ಪೆರಿಯಡ್ಕ, ಹರಿಪ್ರಸಾದ್ ಶೆಟ್ಟಿ ಬೊಳ್ಳಾವು, ಪದ್ಮನಾಭ ಬಲ್ಯಾರಬೆಟ್ಟು, ಶೀನಪ್ಪ ಗೌಡ ಬೊಳ್ಳಾವು, ನೋಣಯ್ಯ ಗೌಡ ಬೊಳ್ಳಾವು, ಪ್ರಸನ್ನ ಪೆರಿಯಡ್ಕ, ವಸಂತ ಕುಂಟಿನಿ ಎಸ್.ಕೆ., ಶ್ರೀಮತಿ ಭವ್ಯ ನಿತಿನ್ ಬೊಳ್ಳಾವು, ಶೇಖರ ಪಂಚೇರು, ವಸಂತ ಕೋಟ್ಯಾನ್ ಕುಕ್ಕೆಶ್ರೀ, ಪುಷ್ಪವಲ್ಲಿ, ರಕ್ಷಿತ್ ಪೆರಿಯಡ್ಕ, ಶ್ರೀಧರ ಭಟ್ ನಿನ್ನಿಕಲ್ಲು ಪಾತಾಳ, ಹರಿಕಿರಣ್ ಕೊಲ ಪಾದಾಳ, ಗಣರಾಜ ಕುಂಬ್ಳೆ, ಹೊನ್ನಪ್ಪ ಗೌಡ ವರೆಕ್ಕ, ವಸಂತ ನಾಯ್ಕ ಬೊಳ್ಳಾವು, ಚಿದಾನಂದ ಪಂಚೇರು, ರಕ್ಷಿತ್ ಶೆಟ್ಟಿ ಕಜೆಕ್ಕಾರು, ಆನಂದ ಕುಂಟಿನಿ, ರಾಜೇಶ್ ಕೊಡಂಗೆ, ಮಹಾಲಿಂಗ ಕಜೆಕ್ಕಾರು, ನವೀನ್ ಪೆರಿಯಡ್ಕ, ಲಿಖಿತ್ ರಂಗಾಜೆ, ಪ್ರಹ್ಲಾದ್ ಪೆರಿಯಡ್ಕ, ಗೌತಮ್ ಪೆರಿಯಡ್ಕ, ಧನುಷ್ ಪೆರಿಯಡ್ಕ, ಶ್ರೀನಿವಾಸ ಬೊಳ್ಳಾವು, ಶ್ರೀನಿವಾಸ ಶೆಟ್ಟಿ ನೈಕುಳಿ ಮಠ, ಸುರೇಶ ನಲಿಕೆಮಜಲು, ಸತೀಶ್ ನೆಡ್ಚಿಲ್, ಚಂದ್ರಶೇಖರ ನಲಿಕೆಮಜಲು, ಆನಂದ ನೆಡ್ಚಿಲ್, ವಿಶ್ವನಾಥ ನಲಿಕೆಮಜಲು, ಚಂದ್ರಶೇಖರ ಕೋಡಿ, ಹರೀಶ್ ಪಟ್ಲ, ಪದ್ಮನಾಭ ಬಲ್ಯಾರಬೆಟ್ಟು, ದೇವಪ್ಪ ಗೌಡ ಬೊಳ್ಳಾವು, ಬಾಲಕೃಷ್ಣ ಶರಣ್ಯ, ಶ್ರೀಲತಾ ಪ್ರತಾಪ್ ಪೆರಿಯಡ್ಕ, ವಿಜಯಲಕ್ಷ್ಮೀ ಪ್ರಶಾಂತ್ ಪೆರಿಯಡ್ಕ, ವನಿತಾ ನೆಡ್ಚಿಲು, ಭಾರತಿ ಮಹಾಲಿಂಗ ಕಜೆಕ್ಕಾರು, ಶ್ರೀಮತಿ ಅಶ್ವಿನಿ ಕಂಪ, ಸುಜಾತ ಪೆರಿಯಡ್ಕ, ತೇಜಾವತಿ ಅಲ್ತಿಮಾರ್, ಗುಲಾಬಿ ಬೊಳ್ಳಾವು ಮತ್ತಿತರರು ಉಪಸ್ಥಿತರಿದ್ದರು.
ಕುಮಾರಿ ವಿಹಾ ಪ್ರಸನ್ನ ಪೆರಿಯಡ್ಕ ಪ್ರಾರ್ಥಿಸಿದರು. ಶಿಕ್ಷಕ ಶ್ರೀಧರ ಭಟ್ ಸ್ವಾಗತಿಸಿದರು. ಮೂರ್ತೆದಾರ ಸೇವಾ ಸಹಕಾರಿ ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶೇಖರ ಗೌಂಡತ್ತಿಗೆ ವಂದಿಸಿದರು. ಶಿಕ್ಷಕಿ ವಿಮಲಾ ತೇಜಾಕ್ಷಿ ಕಾರ್ಯಕ್ರಮ ನಿರೂಪಿಸಿದರು.
ಬಾಕ್ಸ್:
ಇಂದು ಶ್ರೀ ಸುಬ್ರಹ್ಮಣ್ಯ ದೇವರಿಗೆ ಅಷ್ಟಬಂಧ ಬ್ರಹ್ಮಕಲಶಾಭಿಷೇಕ
ಉಪ್ಪಿನಂಗಡಿ: ಇಲ್ಲಿನ ಪದಾಳ ಶ್ರೀ ಸುಬ್ರಹ್ಮಣ್ಯ ದೇವಾಲಯದಲ್ಲಿ ಡಿ.೨೩ರಂದು ಬೆಳಗ್ಗೆ ೯.೧೮ರಿಂದ೧೦.೧೮ರವರೆಗೆ ನಡೆಯುವ ಮಕರ ಲಗ್ನ ಶುಭಮುಹೂರ್ತದಲ್ಲಿ ಶ್ರೀ ಸುಬ್ರಹ್ಮಣ್ಯ ದೇವರಿಗೆ ಕ್ಷೇತ್ರದ ತಂತ್ರಿಗಳಾದ ಬ್ರಹ್ಮಶ್ರೀ ಕೆಮ್ಮಿಂಜೆ ನಾಗೇಶ ತಂತ್ರಿಗಳ ನೇತೃತ್ವದಲ್ಲಿ ಅಷ್ಟಬಂಧ ಕ್ರಿಯೆ, ಬ್ರಹ್ಮಕಲಶಾಭಿಷೇಕ ನಡೆಯಲಿದೆ.
ಬೆಳಗ್ಗೆ ೫:೩೦ರಿಂದ ದೇವಾಲಯದಲ್ಲಿ ಗಣಪತಿ ಹೋಮದೊಂದಿಗೆ ವೈದಿಕ ಕಾರ್ಯಕ್ರಮಗಳು ಆರಂಭಗೊಳ್ಳಲಿದ್ದು, ಮಧ್ಯಾಹ್ನ ೧೨ ಗಂಟೆಗೆ ಮಹಾಪೂಜೆ, ವೈದಿಕ ಮಂತ್ರಾಕ್ಷತೆ, ಪ್ರಸಾದ ವಿತರಣೆಯಾಗಿ ಅನ್ನಸಂತರ್ಪಣೆ ನಡೆಯಲಿದೆ. ರಾತ್ರಿ ಶ್ರೀ ದೇವರಿಗೆ ಮಹಾಪೂಜೆಯಾಗಿ, ದೇವರ ಬಲಿ ಹೊರಟು ಉತ್ಸವ, ವಸಂತ ಕಟ್ಟೆ ಪೂಜೆ, ದರ್ಶನ ಬಲಿ, ಬಟ್ಟಲು ಕಾಣಿಕೆ, ಪ್ರಸಾದ ವಿತರಣೆ ನಡೆದು ಪ್ರಸಾದ ಭೋಜನ ನಡೆಯಲಿದೆ.
ಭಜನಾ ಸೇವೆ: ಇಲ್ಲಿನ ದಿ. ನಡುಸಾರು ಜಯರಾಮ ಭಟ್ಟ ವೇದಿಕೆಯಲ್ಲಿ ಪೂರ್ವಾಹ್ನ ೭ರಿಂದ ಮಧ್ಯಾಹ್ನ ೧ರವರೆಗೆ ವಿವಿಧ ಭಜನಾ ತಂಡಗಳಿಂದ ಭಜನಾ ಸೇವೆ ನಡೆಯಲಿದೆ.
ಸಾಂಸ್ಕೃತಿಕ ಕಾರ್ಯಕ್ರಮ: ಇಲ್ಲಿನ ಮಯೂರ ಕಲಾ ವೇದಿಕೆಯಲ್ಲಿ ಮಧ್ಯಾಹ್ನ ೧೨ರಿಂದ ೨ರವರೆಗೆ ಡಾ. ಕೃಷ್ಣಪ್ರಸಾದ್ ಉಪ್ಪಿನಂಗಡಿ ಮತ್ತು ಬಳಗದಿಂದ ಸ್ಯಾಕ್ಸೋಫೋನ್ ವಾದನ ನಡೆಯಲಿದ್ದು, ಸಂಜೆ ೫ರಿಂದ ೬:೩೦ರವರೆಗೆ ಡಾ. ರಾಮಕೃಷ್ಣ ಭಟ್ ಗೋಳಿತ್ತೊಟ್ಟು ಅವರ ತಂಡದಿಂದ ಕೊಳಲು, ವಯೋಲಿನ್ ಜುಗಲ್ಬಂದಿ ನಡೆಯಲಿದೆ. ರಾತ್ರಿ ೯ರಿಂದ ಬಪ್ಪನಾಡು ಶ್ರೀ ದುರ್ಗಾಪರಮೇಶ್ವರಿ ಯಕ್ಷಗಾನ ಮಂಡಳಿ ಮುಲ್ಕಿ ಇವರಿಂದ ಯಕ್ಷಗಾನ ಬಯಲಾಟ ನಡೆಯಲಿದೆ.