ಪುತ್ತೂರು: ಕಬಕ ಶ್ರೀ ಅಡ್ಯಲಾಯ ಮತ್ತು ಪರಿವಾರ ದೈವಗಳ ವಾರ್ಷಿಕ ನೇಮೋತ್ಸವದ ಪ್ರಯುಕ್ತ ಡಿ.21ರಂದು ಗೊನೆಮುಹೂರ್ತ ನಡೆಯಿತು. ಡಿ.28ರಂದು ವಾರ್ಷಿಕ ನೇಮೋತ್ಸವ ನಡೆಯಲಿದೆ.
ಅರ್ಚಕರಾದ ವೇ। ಮೂ। ಶ್ರೀಧರ ಭಟ್ ಕಬಕರವರು ಧಾರ್ಮಿಕ ವಿಧಿವಿಧಾನ ನೆರವೇರಿಸಿದರು. ಈ ಸಂದರ್ಭದಲ್ಲಿ ಅಡ್ಯಲಾಯ ಮತ್ತು ಪರಿವಾರ ದೈವಗಳ ಸೇವಾ
ಸಮಿತಿಯ ಅಧ್ಯಕ್ಷರಾದ ಸತೀಶ್ ರೈ ಡಿಂಬ್ರಿಗುತ್ತು, ಪ್ರಧಾನ ಕಾರ್ಯದರ್ಶಿಗಳಾದ ಲೋಕೇಶ್ ಶೆಟ್ಟಿ ಕಲ್ಲಂದಡ್ಕ, ಕೃಷ್ಣ ಭಟ್ ಬೈಪದವು, ಉಪಾಧ್ಯಕ್ಷರುಗಳಾದ ಗೋಪಾಲಕೃಷ್ಣ ರೈ, ಜಿನ್ನಪ್ಪ ಪೂಜಾರಿ ಮುರ, ಜತೆ ಕಾರ್ಯದರ್ಶಿ ರವೀಂದ್ರ ಮೇಲಾಂಟ, ದಿನೇಶ್ ಶ್ರೀ ಶಾಂತಿ, ನಾಗೇಶ್ ಪಿ. ಜಯರಾಮ ನೆಕ್ಕರೆ, ರಾಜ ವಿದ್ಯಾಪುರ, ನವೀನ ಭಟ್, ರಾಮಚಂದ್ರ ಭಟ್ ಸಬ್ಬಣಕೋಡಿ ಬಾಬು ಗೌಡ ನೆಕ್ಕರೆ ಮೊದಲಾದವರು ಉಪಸ್ಥಿತರಿದ್ದರು.