





ನಿಡ್ಪಳ್ಳಿ: ಡಾ.ಡಿ. ವೀರೇಂದ್ರ ಹೆಗ್ಗಡೆಯವರ ಹುಟ್ಟುಹಬ್ಬದ ಪ್ರಯುಕ್ತ ಸಜಿಪನಡು ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ನ.25ರಂದು ದೇವರಿಗೆ ವಿಶೇಷ ರಂಗಪೂಜೆ ನಡೆಸಲಾಯಿತು.



ಸಜಿಪ ಮಾಗಣೆ ತಂತ್ರಿಗಳಾದ ಶ್ರೀ ಸುಬ್ರಹ್ಮಣ್ಯ ಭಟ್ ಪೂಜಾ ವಿಧಿ-ವಿಧಾನವನ್ನು ನಡೆಸಿ ಶುಭ ಹಾರೈಸಿದರು. ದೇವಸ್ಥಾನದ ಆಡಳಿತ ಸಮಿತಿ ಅಧ್ಯಕ್ಷ ಮುಳ್ಳಿಂಜ ವೆಂಕಟೇಶ್ ಭಟ್, ಅಭಿವೃದ್ಧಿ ಸಮಿತಿ ಅಧ್ಯಕ್ಷ ಕಂಚಿಲ ರಾಧಾಕೃಷ್ಣ ಆಳ್ವ, ಅರ್ಚಕರಾದ ಗಣಪತಿ ಭಟ್, ರಾಮಕೃಷ್ಣ ಭಟ್, ಒಕ್ಕೂಟ ಅಧ್ಯಕ್ಷೆ ಹೇಮಾವತಿ ರಾಮಚಂದ್ರ, ಗೀತಾ ಭಾಸ್ಕರ್, ಕೋದಂಟಿ ಹರಿ ಪ್ರಸಾದ್ ರೈ, ನವೀನ್ ಚಂದ್ರ, ಸತ್ಯ ಸೇನವ ಕಣಂತೂರು, ಪರಮೇಶ್ವರ್ ಸಪಲ್ಯ, ರಾಮ ಸ್ವಾಮಿ, ಸೋಮನಾಥ್ ಆವೆ, ಕೇಶವ ಮಡಿವಾಳ, ಪಾದೆ ಶೇಖರ್, ಬಾಬು ಪೂಜಾರಿ, ರೇವತಿ ನಾಗೇಶ್, ಭಾಸ್ಕರ್ ಅಮೀನ್, ಕಿಶನ್ ಸೇನವ, ಪ್ರವೀಣ್ ಆಳ್ವ ಮೈಯಲ, ಮನೋರಂಜನ್ ಶೇಖ, ಕಂಚಿಲ ವೆಂಕಟೇಶ್, ಕೆ.ಟಿ.ಸುಧಾಕರ್,ಭಾಸ್ಕರ್ ಇರಾ, ವಿನೋದ್ ಪಜೀರ್, ಗ್ರಾಮಾಭಿವೃದ್ದಿ ಯೋಜನೆಯ ವಿಟ್ಲ ತಾಲೂಕು ವಿಕ್ಷಣಾಧಿಕಾರಿ ಕವಿತಾ ವಸಂತ ಪೆರಾಜೆ, ಮುಡಿಪು ವಲಯದ ಮೇಲ್ವಿಚಾರಕಿ ಪ್ರೇಮಲತಾ, ಸವಿತಾ ನಾರಾಯಣ, ಸೇವಾ ಪ್ರತಿನಿಧಿ ಹೇಮಾಲತಾ ಕುರ್ನಾಡ್, ಅಮಿತಾ ಸುರೇಂದ್ರ, ಮಮತಾಕೃಷ್ಣ, ಕವಿತಾ ಪುರುಷೋತ್ತಮ್, ಕಲ್ಲಾಡಿ ಜಯ ಪ್ರಕಾಶ್ ಕಾಜವ, ಗಣೇಶ ಕಲ್ಲಡ್ಕ, ಶ್ರೀ ಕ್ಷೇತ್ರ ಧರ್ಮಸ್ಥಳ ಭಕ್ತ ವೃಂದ ಬಳಗ, ದೇವಸ್ಥಾನದ ಕಾರ್ಯಕರ್ತರು ಭಾಗವಹಿಸಿದರು.





ದೇವಸ್ಥಾನದ ಭಕ್ತ ವೃಂದ, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ ಸಂಘದ ಸದಸ್ಯರು, ಕಾರ್ಯಕರ್ತರು ಅನ್ನದಾನದ ಪ್ರಾಯೋಜಕತ್ವ ವಹಿಸಿದ್ದರು.








