ಪುತ್ತೂರು: ಸವಣೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ 2025ರ ವಾರ್ಷಿಕ ಕ್ಯಾಲೆಂಡರ್ ಬಿಡುಗಡೆ ಸಮಾರಂಭ ಸಂಘದ ಬೆಳಂದೂರು ಶಾಖೆಯಲ್ಲಿ ಜರುಗಿತು. ಸಂಘದ ಅಧ್ಯಕ್ಷ ತಾರಾನಾಥ ಕಾಯರ್ಗ, ಉಪಾಧ್ಯಕ್ಷ ಚೇತನ್ ಕುಮಾರ್ ಕೋಡಿಬೈಲು, ನಿರ್ದೇಶಕರುಗಳಾದ ಉದಯ ರೈ ಮಾದೋಡಿ, ಗಣೇಶ್ ನಿಡ್ವಣ್ಣಾಯ ಕುಮಾರಮಂಗಲ, ಪ್ರಕಾಶ್ ರೈ ಸಾರಕರೆ, ಅಶ್ವಿನ್ ಎಲ್ ಶೆಟ್ಟಿ, ಶಿವಪ್ರಸಾದ್ ಎಂ. ಎಸ್ ಕಳುವಾಜೆ, ಜ್ಞಾನೇಶ್ವರಿ ಬರೆಪ್ಪಾಡಿ, ಸೀತಾಲಕ್ಷ್ಮೀ, ತಿಮ್ಮಪ್ಪ ಬನಾರಿ ಹಾಗೂ ಗಂಗಾಧರ ಪೆರಿಯಡ್ಕ ಉಪಸ್ಥಿತರಿದ್ದರು. ಸಂಘದ ಮುಖ್ಯಕಾರ್ಯನಿರ್ವಹಣಾಧಿಕಾರಿ ಚಂದ್ರಶೇಖರ್ ಪಿ ಸ್ವಾಗತಿಸಿ, ಬೆಳಂದೂರು ಶಾಖಾ ವ್ಯವಸ್ಥಾಪಕ ಪಕೀರ ವಂದಿಸಿದರು, ಸಂಸ್ಥೆಯ ಸಿಬ್ಬಂದಿಗಳು ಸಹಕರಿಸಿದರು.