ಕೆಮ್ಮಾಯಿ: ಚಿಕ್ಕಮುಡ್ನೂರು ಗ್ರಾಮದ ಕೆಮ್ಮಾಯಿ ಶ್ರೀ ಮಹಾವಿಷ್ಣುಮೂರ್ತಿ ದೇವಸ್ಥಾನದ ವಾರ್ಷಿಕ ಜಾತ್ರೆಯು ಫೆ.3 ಮತ್ತು ಫೆ.4 ರಂದು ನಡೆಯಲಿದ್ದು ಅದರ ಅಂಗವಾಗಿ ಡಿ.22ರಂದು ಶ್ರೀ ಮಹಾವಿಷ್ಣುಮೂರ್ತಿ ದೇವಸ್ಥಾನದಲ್ಲಿ ಆಡಳಿತ ಮೊಕ್ತೇಸರ ಶ್ರೀಪತಿ ಬೈಪಾಡಿತ್ತಾಯ ಹಾಗೂ ಅರ್ಚಕರಾದ ಸದಾಶಿವ ಹೊಳ್ಳರವರು ದೇವರಿಗೆ ವಿಶೇಷ ಪ್ರಾರ್ಥನೆ ಸಲ್ಲಿಸಿ ಆಮಂತ್ರಣ ಪತ್ರ ಬಿಡುಗಡೆಗೊಳಿಸಲಾಯಿತು.
ಈ ಸಂದರ್ಭದಲ್ಲಿ ಪರಮಪೂಜ್ಯ ಸಚ್ಚಿದಾನಂದ ಭಾರತೀ ಸ್ವಾಮೀಜಿ ಎಡನೀರು ಮಠರವರಿಂದ ದೇವಸ್ಥಾನದ ಸ್ವಾಗತ ಗೋಪುರ ಉದ್ಘಾಟನೆ ನಡೆಯಲಿದೆ.
ಕಾರ್ಯಕ್ರಮದಲ್ಲಿ ಶ್ರೀಧರ ಬೈಪಾಡಿತ್ತಾಯ, ನರೇಂದ್ರ ಪಡಿವಾಳ್ ಮೂಡಾಯೂರುಗುತ್ತು, ರಾಧಕೃಷ್ಣ ಹೆಗ್ಡೆ ಕೆಮ್ಮಾಯಿ, ಚಂದ್ರಶೇಖರ ಎಸ್ ಮೂಡಾಯುರು, ರಾಮಣ್ಣ ಗೌಡ ಬಡಾವು, ವಿಶ್ವನಾಥ ಪೂಜಾರಿ ಬಳಕ್ಕ, ಸತೀಶ್ ಬಲ್ಯಾಯ, ಕೆಮ್ಮಾಯಿ ವಿಷ್ಣುಯುವಕ ಮಂಡಳಿ ಅಧ್ಯಕ್ಷ ದಯಾನಂದ ಗೌಡ ಕೆಮ್ಮಾಯಿ, ಗೀತಾ ಕೆಮ್ಮಾಯಿ, ಅಯ್ಯಪ್ಪ ವ್ರತಧಾರಿಗಳು, ವಿಶ್ವನಾಥ ಗೌಡ ಏಕ, ವಿಷ್ಣುಮೂರ್ತಿ ಭಜನಾ ಮಂಡಳಿ ಸದಸ್ಯರು ಹಾಗೂ ವಿಷ್ಣು ಯುವಕ ಮಂಡಳಿ ಸದಸ್ಯರು ಮೊದಲಾದವರು ಉಪಸ್ಥಿತರಿದ್ದರು.