ಉಪ್ಪಿನಂಗಡಿ: ಇಲ್ಲಿನ ಪದಾಳ ಶ್ರೀ ಸುಬ್ರಹ್ಮಣ್ಯ ದೇವಾಲಯದಲ್ಲಿ ಸೋಮವಾರ ಬೆಳಗ್ಗೆ 9.18ರಿಂದ10.18ರವರೆಗೆ ನಡೆದ ಮಕರ ಲಗ್ನ ಶುಭಮುಹೂರ್ತದಲ್ಲಿ ಶ್ರೀ ಸುಬ್ರಹ್ಮಣ್ಯ ದೇವರಿಗೆ ಕ್ಷೇತ್ರದ ತಂತ್ರಿಗಳಾದ ಬ್ರಹ್ಮಶ್ರೀ ಕೆಮ್ಮಿಂಜೆ ಕಾರ್ತಿಕ ತಂತ್ರಿಗಳ ನೇತೃತ್ವದಲ್ಲಿ ವೇದ ಮಂತ್ರಘೋಷಗಳೊಂದಿಗೆ ಅಷ್ಟಬಂಧ ಕ್ರಿಯೆ, ಬ್ರಹ್ಮಕಲಶಾಭಿಷೇಕ ನಡೆಯಿತು. ಸಾವಿರಾರು ಭಕ್ತರು ಈ ಪುಣ್ಯ ಕಾರ್ಯವನ್ನು ಕಣ್ತುಂಬಿಸಿಕೊಂಡರು.
ಬೆಳಗ್ಗೆ 5:30ರಿಂದ ದೇವಾಲಯದಲ್ಲಿ ಗಣಪತಿ ಹೋಮದೊಂದಿಗೆ ಆರಂಭಗೊಂಡ ವೈದಿಕ ಕಾರ್ಯಕ್ರಮಗಳ ಮಧ್ಯೆ ಕಲಶ ಗೋಪುರದಲ್ಲಿ ಪೂಜಿಸಲ್ಪಟ್ಟ ಕಲಶಗಳಿಂದ ಶ್ರೀ ದೇವರಿಗೆ ಬ್ರಹ್ಮಕಲಶದ ವಿಧಿ ವಿಧಾನಗಳು ನೆರವೇರಿದವು. ಮಧ್ಯಾಹ್ನ 12 ಗಂಟೆಗೆ ಮಹಾಪೂಜೆ, ವೈದಿಕ ಮಂತ್ರಾಕ್ಷತೆ, ಪ್ರಸಾದ ವಿತರಣೆಯಾಗಿ ಅನ್ನಸಂತರ್ಪಣೆ ನಡೆಯಿತು.
ರಾತ್ರಿ ಶ್ರೀ ದೇವರಿಗೆ ಮಹಾಪೂಜೆಯಾಗಿ, ದೇವರ ಬಲಿ ಹೊರಟು ಉತ್ಸವ, ವಸಂತ ಕಟ್ಟೆ ಪೂಜೆ, ದರ್ಶನ ಬಲಿ, ಬಟ್ಟಲು ಕಾಣಿಕೆ, ಪ್ರಸಾದ ವಿತರಣೆ ನಡೆದು ಪ್ರಸಾದ ಭೋಜನ ನಡೆಯಿತು.
ಎಡನೀರು ಮಠಾಧೀಶರ ಭೇಟಿ:
ಬ್ರಹ್ಮಕಲಶೋತ್ಸವದ ವಿಧಿ ವಿಧಾನಗಳು ನೆರವೇರುತ್ತಿದ್ದಂತೆಯೇ ಎಡನೀರು ಮಠಾಧೀಶ ಶ್ರೀ ಸಚ್ಚಿದಾನಂದ ಭಾರತಿ ಸ್ವಾಮೀಜಿಯವರು ದೇವಾಲಯಕ್ಕೆ ಆಗಮಿಸಿ ಶೀ ದೇವರ ಬ್ರಹ್ಮಕಲಶೋತ್ಸವವನ್ನು ಸಾಕ್ಷೀಕರಿಸಿದರು. ಈ ವೇಳೆ ಆಶೀರ್ವಚನ ನೀಡಿದ ಸ್ವಾಮೀಜಿಯವರು, ಶುದ್ದ ಭಕ್ತಿ ಸಮರ್ಪಣಾ ಭಾವ ಭಗವಂತನ ಒಲುಮೆ ಗಳಿಸಲು ಇರುವ ಏಕೈಕ ಮಾರ್ಗವಾಗಿದ್ದು, ಬ್ರಹ್ಮಕಲಶೋತ್ಸವದ ಕಾರಣದಿಂದ ಕ್ಷೇತ್ರದಲ್ಲಿ ದೇವರ ಸಾನಿಧ್ಯ ವೃದ್ಧಿಸಿ ಭಕ್ತ ಸಮುದಾಯದ ಸರ್ವತೋಮುಖ ಅಭಿವೃದ್ಧಿಯಾಗಲಿದೆ ಎಂದರು.
ಮಂಗಳೂರು ಲೋಕಸಭಾ ಕ್ಷೇತ್ರದ ಸಂಸದರಾದ ಕ್ಯಾ. ಬ್ರಿಜೇಶ್ ಚೌಟ, ವಿಧಾನ ಪರಿಷತ್ ಸದಸ್ಯರಾದ ಕಿಶೋರ್ ಕುಮಾರ್ ಬೊಟ್ಯಾಡಿ, ಮಂಗಳೂರು ಕೆಎಂಎಫ್‌ನ ಅಧ್ಯಕ್ಷರಾದ ಸುಚರಿತ ಶೆಟ್ಟಿ, ಹಿಂದೂ ಮುಖಂಡರಾದ ಮಹೇಶ್ ತಿಮರೋಡಿ ದೇವಾಲಯಕ್ಕೆ ಆಗಮಿಸಿ, ಪ್ರಾರ್ಥನೆ ಸಲ್ಲಿಸಿದರು.
ಈ ಸಂದರ್ಭ ದೇವಾಲಯದ ಆಡಳಿತ ಸಮಿತಿಯ ಅಧ್ಯಕ್ಷರಾದ ನಡುಸಾರು ಜಯರಾಮ ಭಟ್ಟ, ಪದಾಳ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಬ್ರಹ್ಮಕಲಶೋತ್ಸವ ಸಮಿತಿಯ ಅಧ್ಯಕ್ಷರಾದ ಜಗದೀಶ ರಾವ್ ಮಣಿಕ್ಕಳ, ಉಪಾಧ್ಯಕ್ಷರಾದ ಡಿ. ಚಂದಪ್ಪ ಮೂಲ್ಯ, ಡಾ. ರಾಜಾರಾಮ ಕೆ.ಬಿ., ಪ್ರತಾಪ್ ಯು. ಪೆರಿಯಡ್ಕ, ನಟೇಶ್ ಪೂಜಾರಿ ಪುಳಿತ್ತಡಿ, ಶ್ರೀಮತಿ ಉಷಾಚಂದ್ರ ಮುಳಿಯ, ಪ್ರಧಾನ ಕಾರ್ಯದರ್ಶಿ ಜಯಗೋವಿಂದ ಶರ್ಮಾ ಪದಾಳ, ಜೊತೆ ಕಾರ್ಯದರ್ಶಿಗಳಾದ ಲಕ್ಷ್ಮಣ ಗೌಡ ನೆಡ್ಚಿಲು, ಸುರೇಶ ಗೌಂಡತ್ತಿಗೆ, ಕೋಶಾಧಿಕಾರಿ ರಾಮಚಂದ್ರ ಮಣಿಯಾಣಿ ನೆಡ್ಚಿಲು, ಆಡಳಿತ ಸಮಿತಿಯ ಉಪಾಧ್ಯಕ್ಷರಾದ ಸುರೇಶ ಅತ್ರೆಮಜಲು, ಕಾರ್ಯದರ್ಶಿ ಕೇಶವ ರಂಗಾಜೆ, ಜೊತೆ ಕಾರ್ಯದರ್ಶಿ ರಾಮಣ್ಣ ಶೆಟ್ಟಿ ಬೊಳ್ಳಾವು, ಸದಸ್ಯರಾದ ಶಾಂಭವಿ ರೈ ಪುಳಿತ್ತಡಿ, ಹರೀಶ್ಚಂದ್ರ ಮೊಗ್ರಾಲ್ ಕುವೆಚ್ಚಾರು, ಬಿ. ಶಂಕರನಾರಾಯಣ ಭಟ್ ಬೊಳ್ಳಾವು, ಸದಾನಂದ ಶೆಟ್ಟಿ ಕಿಂಡೋವು, ಲೊಕೇಶ ಪೂಜಾರಿ ಬೆತ್ತೋಡಿ, ವಿಜಯಶಿಲ್ಪಿ ಕುಕ್ಕುಜೆ, ಜತ್ತಪ್ಪ ನಾಯ್ಕ ಬೊಳ್ಳಾವು, ನವೀನ್ ಕುಮಾರ್ ಕಲ್ಯಾಟೆ, ಅವನೀಶ್ ಪಿ. ಪೆರಿಯಡ್ಕ, ಪ್ರಮುಖರಾದ ಉಪ್ಪಿನಂಗಡಿ ಶ್ರೀ ಸಹಸ್ರಲಿಂಗೇಶ್ವರ- ಮಹಾಕಾಳಿ ವ್ಯವಸ್ಥಾಪನಾ ಸಮಿತಿಯ ಸದಸ್ಯರಾದ ಡಾ. ರಮ್ಯ ರಾಜಾರಾಮ್, ಕೃಷ್ಣರಾವ್ ಆರ್ತಿಲ, ವೆಂಕಪ್ಪ ಪೂಜಾರಿ ಮರುವೇಲು, ವ್ಯವಸ್ಥಾಪಕರಾದ ವೆಂಕಟೇಶ್ ರಾವ್, ಉಪ್ಪಿನಂಗಡಿ ಸಿಎ ಬ್ಯಾಂಕ್ ಅಧ್ಯಕ್ಷರಾದ ಕೆ.ವಿ. ಪ್ರಸಾದ, ಪ್ರಮುಖರಾದ ಕೈಲಾರು ರಾಜಗೋಪಾಲ ಭಟ್, ಜಗದೀಶ ಶೆಟ್ಟಿ, ಸಂದೀಪ್ ಕುಪ್ಪೆಟ್ಟಿ, ಸುಧಾಕರ ಶೆಟ್ಟಿ ಗಾಂಧಿಪಾರ್ಕ್, ವಿವಿಧ ಸಮಿತಿಯ ಪದಾಧಿಕಾರಿಗಳಾದ ಸುನೀಲ್ ಕುಮಾರ್ ದಡ್ಡು, ಧರ್ನಪ್ಪ ನಾಯ್ಕ, ಹರಿಪ್ರಸಾದ್ ಶೆಟ್ಟಿ, ಚಿದಾನಂದ ಪಂಚೇರು, ಆನಂದ ಕುಂಟಿನಿ, ಪ್ರಶಾಂತ್ ಪೆರಿಯಡ್ಕ, ವಿದ್ಯಾಧರ ಜೈನ್, ವಿಶ್ವನಾಥ ಶೆಟ್ಟಿ ಅಮ್ಟೂರು ಬಾರಿಕೆ, ಪ್ರಸನ್ನ ಪೆರಿಯಡ್ಕ, ರಾಜೇಶ್ ಕೊಡಂಗೆ, ರಕ್ಷಿತ್ ಪೆರಿಯಡ್ಕ, ಪುಷ್ಪವಲ್ಲಿ ಪೆರಿಯಡ್ಕ, ಶಿವಪ್ಪ ಷಣ್ಮುಖ ಪ್ರಸನ್ನ, ಬಾಲಕೃಷ್ಣ ಶರಣ್ಯ, ಸುರೇಶ್ ನಲಿಕೆಮಜಲು, ಸತೀಶ್ ನೆಡ್ಚಿಲ್, ಪ್ರಹ್ಲಾದ್ ಪೆರಿಯಡ್ಕ, ರಂಜಿತ್ ಪೆರಿಯಡ್ಕ, ಗೌತಮ್ ಪೆರಿಯಡ್ಕ, ಧನುಷ್ ಪೆರಿಯಡ್ಕ, ದುರ್ಗಾಕುಮಾರ್ ಪೆರಿಯಡ್ಕ, ಲೊಕೇಶ್ ಬೆತ್ತೋಡಿ, ರಾಮಚಂದ್ರ ಗೌಡ ನೆಡ್ಚಿಲು, ಹರಿಪ್ರಸಾದ್ ಭಟ್ ಕೂವೆಚ್ಚಾರು, ರಾಧಾಕೃಷ್ಣ ಭಟ್ ಬೊಳ್ಳಾವು, ಸುಜೀತ್ ಬೊಳ್ಳಾವು, ಕೃಷ್ಣಪ್ಪ ಗೌಡ ಬೊಳ್ಳಾವು, ಲೊಕೇಶ ನೆಕ್ಕರೆ, ಶೀನಪ್ಪ ಗೌಡ ಬೊಳ್ಳಾವು, ದೇವಪ್ಪ ಗೌಡ ಬೊಳ್ಳಾವು, ಲಿಖಿತ್ ರಂಗಾಜೆ, ಚಂದ್ರಶೇಖರ ಕೋಡಿ, ನೋಣಯ್ಯ ಗೌಡ ಬೊಳ್ಳಾವು, ಹೊನ್ನಪ್ಪ ಗೌಡ ಬೊಳ್ಳಾವು, ವಸಂತ ಗೌಡ ಬೊಳ್ಳಾವು, ನಾಗಾರ್ಜುನ ಪೆರಿಯಡ್ಕ, ಚಿನ್ಮಯ ಭಟ್ ಪದಾಳ, ಶ್ರೀನಿವಾಸ ಬೊಳ್ಳಾವು, ಕೃಷ್ಣಪ್ರಸಾದ್ ಬೊಳ್ಳಾವು, ಮಹಾಲಿಂಗ ಕಜೆಕ್ಕಾರು, ಭಾರತಿ ಕಜೆಕ್ಕಾರು, ವೀರಪ್ಪ ಗೌಡ ಪುಳಿತ್ತಡಿ, ವನಿತಾ ಆರ್ತಿಲ, ಜಯಂತಿ ರಂಗಾಜೆ, ಭವ್ಯ ನಿತಿನ್, ಕಮಲಾಕ್ಷಿ ಬೊಳ್ಳಾವು, ಸಂದೀಪ್ ನೆಡ್ಚಿಲು, ವಿಶ್ವನಾಥ ನಲಿಕೆಮಜಲು, ಶ್ರೀಮತಿ ವಿಜಯಲಕ್ಷ್ಮಿ ಪ್ರಶಾಂತ್ ಪೆರಿಯಡ್ಕ, ಶ್ರೀಲತಾ ಪ್ರತಾಪ್ ಪೆರಿಯಡ್ಕ, ಶೇಖರ ಗೌಂಡತ್ತಿಗೆ, ಹೇಮಲತಾ ಶೆಟ್ಟಿ ಕಜೆಕ್ಕಾರು, ಚಂದ್ರ ಕೆ. ಲಿಖಿತ್ ಟಯರ‍್ಸ್, ವನಿತಾ ನೆಡ್ಚಿಲು, ಬಾಬು ಗೌಡ ನೆಡ್ಚಿಲು, ಉದಯ ಅತ್ರೆಮಜಲು, ನಾರಾಯಣ ಭಟ್ ಪೆರಿಯಡ್ಕ ಮತ್ತಿತರರು ಉಪಸ್ಥಿತರಿದ್ದರು.
ಅಚ್ಚುಕಟ್ಟಾದ ವ್ಯವಸ್ಥೆ: ಶ್ಲಾಘನೆಗೆ ಪಾತ್ರವಾದ ಸ್ವಯಂಸೇವಕರು
ಆರು ದಿನಗಳ ಕಾಲ ನಡೆದ ಈ ಬ್ರಹ್ಮಕಲಶೋತ್ಸವ ಕಾರ್ಯಕ್ರಮದಲ್ಲಿ ಸ್ವಾಗತ ಸಮಿತಿಯಿಂದ ಹಿಡಿದು ವಾಹನ ಸಮಿತಿ, ಸ್ವಯಂ ಸೇವಕ ಸಮಿತಿ ಹೀಗೆ ಎಲ್ಲಾ ಸಮಿತಿಯವರು ಹಾಗೂ ಭಕ್ತರು ಹಗಲಿರುಳೆನ್ನದೆ ಶ್ರೀ ದೇವರ ಸೇವೆ ನಡೆಸಿದರು. ಮಕ್ಕಳಿಂದ ಹಿಡಿದು ವೃದ್ಧರವರೆಗೆ ಗಂಡು ಹೆಣ್ಣಿನ ಬೇಧವಿಲ್ಲದೆ ನಿಸ್ವಾರ್ಥ ದುಡಿಮೆಯ ಫಲವೇ ಸಹಸ್ರಾರು ಸಂಖ್ಯೆಯಲ್ಲಿ ಈ ಉತ್ಸವದಲ್ಲಿ ಭಕ್ತರು ಪಾಲ್ಗೊಂಡರು ಪ್ರತಿಯೊಂದು ಕಡೆಯಲ್ಲಿಯಲ್ಲಿಯೂ ಅಚ್ಚುಕಟ್ಟಿನ ವ್ಯವಸ್ಥೆ ಕಂಡು ಬಂತು. ಇದು ದೂರದೂರಿನಿಂದ ಆಗಮಿಸಿದ ಭಕ್ತರ ಮೆಚ್ಚುಗೆಗೂ ಪಾತ್ರವಾಯಿತು.
ನಿರಂತರ ಅನ್ನದಾಸೋಹ
ಬೆಳಗ್ಗೆ ಉಪಹಾರ, ಮಧ್ಯಾಹ್ನ ಅನ್ನಸಂತರ್ಪಣೆ, ಸಂಜೆ ಉಪಹಾರ ಹಾಗೂ ರಾತ್ರಿ ಪ್ರಸಾದ ಭೋಜನ ಆರು ದಿನಗಳ ಕಾಲವೂ ನಿರಂತರವಾಗಿ ನಡೆಯಿತು. ಇಲ್ಲಿಯೂ ಕೂಡಾ ಕಾಶಿ ಹಲ್ವದಿಂದ ಹಿಡಿದು ದಿನಕ್ಕೊಂದು ಬಗೆಯ ಭಕ್ಷಗಳೊಂದಿಗೆ ಭಕ್ತರಿಗೆ ಕಾರ್ತಿಕೇಯ ಅನ್ನಛತ್ರದಲ್ಲಿ ಭೋಜನ ಉಣಬಡಿಸಲಾಯಿತು. ಆ ದಿನದ ಊಟ- ಉಪಹಾರಗಳ ಮೆನುವನ್ನು ಅಂದು ಬೆಳಗ್ಗೆಯೇ ಅನ್ನಛತ್ರದಲ್ಲಿ ತೂಗುಹಾಕಲಾಗುತ್ತಿತ್ತು. ಇದರೊಂದಿಗೆ ಮಯೂರ ವೇದಿಕೆಯಲ್ಲಿ ನಡೆದ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಒಟ್ಟು 400ಕ್ಕಿಂತಲೂ ಅಧಿಕ ಕಲಾವಿದರು ಭಾಗವಹಿಸಿ ಕಾರ್ಯಕ್ರಮ ನೀಡುವ ಮೂಲಕ ಮನೋರಂಜನೆ ನೀಡಿದರು. ದಿ. ನಡುಸಾರು ಜಯರಾಮ ಭಟ್ಟ ವೇದಿಕೆಯಲ್ಲಿ ಬೆಳಗ್ಗೆ 7ರಿಂದ ಸಂಜೆ 5ರವರೆಗೆ ನಿರಂತರ ಆರು ದಿನಗಳ ಕಾಲವೂ ವಿವಿಧ ಕಡೆಗಳಿಂದ ಭಜನಾ ತಂಡಗಳು ಆಗಮಿಸಿ ಸೇವಾ ರೂಪದಲ್ಲಿ ಭಜನೆಯನ್ನು ನಡೆಸಿಕೊಟ್ಟರು.
ಸನ್ನಿಧಿಗೆ ಬಂದ ಸಹಸ್ರಾರು ಜನ
ಪದಾಳ ಶ್ರೀ ಸುಬ್ರಹ್ಮಣ್ಯ ಸನ್ನಿಧಿಗೆ ಬ್ರಹ್ಮಕಲಶದ ಈ ಸಮಯದಲ್ಲಿ ರಾಜ್ಯದ ವಿವಿಧ ಜಿಲ್ಲೆಗಳಿಂದಲ್ಲದೇ, ಹೊರ ರಾಜ್ಯದಿಂದಲೂ ಭಕ್ತರು ಆಗಮಿಸಿ, ಸಂತಾನ ಭಾಗ್ಯ ಪ್ರಧಾಯಕವೆಂದೇ ಖ್ಯಾತಿ ಪಡೆದ ಶ್ರೀ ಸುಬ್ರಹ್ಮಣ್ಯ ದೇವರಿಗೆ ನಮಿಸಿ, ಪುನೀತರಾದರು.
ಪ್ರತ್ಯಕ್ಷಗೊಂಡ ನಾಗ
ಈ ಹಿಂದಿನ ಬ್ರಹ್ಮಕಲಶೋತ್ಸವದ ಸಂದರ್ಭದಲ್ಲಿಯೂ ದೇವಾಲಯದ ಬಳಿಯ ನಾಗನ ಕಟ್ಟೆಯಲ್ಲಿ ನಾಗರ ಹಾವು ಪ್ರತ್ಯಕ್ಷಗೊಂಡಿದ್ದು, ಈ ಬಾರಿಯೂ ಪ್ರತ್ಯಕ್ಷಗೊಂಡು ಭಕುತರಿಗೆ ದರುಷನ ನೀಡುವ ಮೂಲಕ ಇಲ್ಲಿಯ ಸಾನಿಧ್ಯಶಕ್ತಿಯನ್ನು ತೋರಿಸಿತು.