ಪುತ್ತೂರು: ಮುಕ್ರಂಪಾಡಿ ನಂದಿವನದ ಗೃಹಪ್ರವೇಶ ಸಮಾರಂಭದಲ್ಲಿ ಪುತ್ತೂರು ವೈಷ್ಣವಿ ನಾಟ್ಯಾಲಯ ವಿದ್ಯಾರ್ಥಿಗಳಿಂದ ಭರತನಾಟ್ಯ ಮತ್ತು ನೃತ್ಯ ರೂಪಕ ಶ್ರೀರಾಮ ಪುನರಾಗಮನ ಜರುಗಿತು.
ನೃತ್ಯರೂಪಕದ ಸಾಹಿತ್ಯ ರಚನೆ ಡಾ. ರಾಜೇಶ್ ಬೆಜ್ಜಂಗಳ, ನೃತ್ಯ ನಿರ್ದೇಶನ ವಿದುಷಿ ಶ್ರೀಮತಿ ಯೋಗೀಶ್ವರಿ ಜಯಪ್ರಕಾಶ್, ರಾಗ ಸಂಯೋಜನೆ ಮತ್ತು ಹಾಡುಗಾರಿಕೆಯಲ್ಲಿ ವಿದ್ವಾನ್ ಬೆಳ್ಳಿ ಕೋತ್ ವಿಷ್ಣು ಭಟ್ ಹಾಗೂ ವಸಂತಕುಮಾರ್ ಗೋಸಡಾ, ಮೃದಂಗದಲ್ಲಿ ವಿದ್ವಾನ್ ಸುರೇಶ್ ಬಾಬು ಕಣ್ಣೂರು, ಕೊಳಲಿನಲ್ಲಿ ವಿದ್ವಾನ್ ರಾಹುಲ್ ಕಣ್ಣೂರು, ಕೀಬೋರ್ಡ್ ನಲ್ಲಿ ಬಾಬಣ್ಣ ಪುತ್ತೂರು, ರಿದಂನಲ್ಲಿ ಶಶಾಂಕ್ ಬಿ.ಸಿ ರೋಡ್, ಪ್ರಸಾಧನದಲ್ಲಿ ಶ್ರೀ ವಿಘ್ನೇಶ್ ವಿಶ್ವಕರ್ಮ ಭಾವನಾ ಕಲಾ ಆರ್ಟ್ಸ್ ಪುತ್ತೂರು ಸಹಕರಿಸಿದರು.