ಜಿ.ಎಲ್. ಆಚಾರ್ಯ ಜ್ಯುವೆಲ್ಲರ್ಸ್‌ನಲ್ಲಿ‌ ವಜ್ರಾಭರಣಗಳ ಪ್ರದರ್ಶನ, ಮಾರಾಟ ‘ಗ್ಲೋ ಫೆಸ್ಟ್’ಗೆ ಚಾಲನೆ

0

ಪುತ್ತೂರು: ಪ್ರತಿಷ್ಠಿತ ಚಿನ್ನಾಭರಣಗಳ ಮಳಿಗೆ ಜಿ.ಎಲ್. ಆಚಾರ್ಯ ಜ್ಯುವೆಲ್ಲರ್ಸ್‌ನಲ್ಲಿ ಒಂದು ತಿಂಗಳ ಕಾಲ ನಡೆಯಲಿರುವ ವಜ್ರಾಭರಣಗಳ ಪ್ರದರ್ಶನ ಹಾಗೂ ಮಾರಾಟದ ‘ಗ್ಲೋ ಫೆಸ್ಟ್’ಗೆ ಡಿ.23ರಂದು ಚಾಲನೆ ನೀಡಲಾಯಿತು.ದರ್ಬೆ ಗಣೇಶ್ ಟ್ರೇಡರ‍್ಸ್‌ನ ಮ್ಹಾಲಕ ವಾಮನ್ ಪೈಯವರ ಪತ್ನಿ ಅನುರಾದ ವಾಮನ್ ಪೈ ದೀಪ ಬೆಳಗಿಸಿ ಉದ್ಘಾಟಿಸಿ ಗ್ಲೋ ಫೆಸ್ಟ್‌ಗೆ ಚಾಲನೆ ನೀಡಿದರು.


ಮುಖ್ಯ ಅತಿಥಿ ವಿವೇಕಾನಂದ ಸ್ನಾತಕೋತ್ತರ ಕಾಲೇಜಿನ ವಾಣಿಜ್ಯ ವಿಭಾಗದ ಮುಖ್ಯಸ್ಥೆ ಡಾ.ವಿಜಯ ಸರಸ್ವತಿ ಮಾತನಾಡಿ, ಮಹಿಳೆಯರಿಗೆ ಚಿನ್ನಾಭರಣಗಳಲ್ಲಿ ವ್ಯಾಮೋಹವಿದ್ದರೂ ಹೂಡಿಕೆ ದೃಷ್ಟಿಯಿಂದ ಬಹಳಷ್ಟು ಉಪಯುಕ್ತವಾಗಿದೆ. ಹೀಗಾಗಿ ಚಿನ್ನಾಭರಣಗಳ ಉದ್ಯಮಕ್ಕೆ ವಿಶೇಷ ಮಾನ್ಯತೆ ಇದೆ. ಪುತ್ತೂರಿನಲ್ಲಿ ಮನೆ ಮಾತಾಗಿರುವ ಚಿನ್ನಾಭರಣಗಳ ಮಳಿಗೆ ಹಲವು ವರ್ಷಗಳಿಂದ ಗ್ಲೋ ಫೆಸ್ಟ್ ಆಯೋಜಿಸುತ್ತಿದ್ದು ಹೆಸರಿನಂತೆ ಹೊಳಪಿನಿಂದ ಪ್ರಕಾಶ ಮಾನವಾಗಿ ಬೆಳೆಯಲಿ ಎಂದು ಶುಭ ಹಾರೈಸಿದರು.


ಸಂಸ್ಥೆಯ ಆಡಳಿತ ನಿರ್ದೇಶಕ ಬಲರಾಮ ಆಚಾರ್ಯ ಮಾತನಾಡಿ, ಮಳಿಗೆಯಲ್ಲಿ ಕಳೆದ 12 ವರ್ಷಗಳಿಂದ ಗ್ಲೋ ಫೆಸ್ಟ್‌ನ್ನು ಆಯೋಜಿಸಲಾಗುತ್ತಿದೆ. ವಜ್ರವೆಂದರೆ ದುಬಾರಿ ಎಂಬ ಮನೋಭಾವ ಎಲ್ಲರಲ್ಲಿಯೂ ಇದೆ. ಇದನ್ನು ಹೋಗಲಾಡಿಸಲು ಗ್ಲೋ ಫೆಸ್ಟ್ ಆಯೋಜಿಸಲಾಗಿದೆ. ಗ್ರಾಹಕರಿಗೆ ಸಣ್ಣ ಬಜೆಟ್‌ನಲ್ಲಿ ವಜ್ರಗಳು ಲಭ್ಯವಿದೆ. ಗುಣಮಟ್ಟದಲ್ಲಿ ಪ್ರಮಾಣಿಕೃತಗೊಂಡಿರುವ ವಜ್ರಾಭರಣಗಳು ಮಳಿಗೆಯಲ್ಲಿ ಲಭ್ಯವಿದೆ. ಗ್ಲೋ ಫೆಸ್ಟ್‌ನಲ್ಲಿ ಮಾರಾಟ ಹಾಗೂ ಪ್ರದರ್ಶನಗಳ ಜೊತೆಗೆ ಗ್ರಾಹಕರಿಗೆ ವಜ್ರಾಭರಣಗಳ ಬಗ್ಗೆ ಮಾಹಿತಿ ನೀಡಲಾಗುವುದು ಎಂದರು.

ದಕ್ಷ ಕನ್‌ಸ್ಟ್ರಕ್ಷನ್ ಮಾಲಕ ರವೀಂದ್ರರವರ ಪತ್ನಿ ಉಷಾ ರವೀಂದ್ರ, ಸ್ನೇಹ ಸಿಲ್ಕ್‌ನ ಮ್ಹಾಲಕ ಸತೀಶ್‌ರವರ ಪತ್ನಿ ಹರಿಣಿ ಸತೀಶ್, ಪಾಲುದಾರರಾದ ಸುಧನ್ವ ಆಚಾರ್ಯ, ಲಕ್ಷ್ಮೀಕಾಂತ ಆಚಾರ್ಯ, ವೇದಾ ಲಕ್ಷ್ಮೀಕಾಂತ ಆಚಾರ್ಯ, ಶೋ.ರೂಂ ಮ್ಯಾನೇಜರ್ ಪುರಂದರ, ಮಾರ್ಕೆಟಿಂಗ್ ಮ್ಯಾನೇಜರ್ ಕೀರ್ತನ್ ಉಪಸ್ಥಿತರಿದ್ದರು. ಸಿಬಂದಿ ಬಾರ್ಗವ್ ಸ್ವಾಗತಿಸಿ, ವಂದಿಸಿದರು. ಸಿಬಂದಿಗಳಾದ ವಿಜಯ, ವೀಣಾ, ಚಂದ್ರಿಕಾ ಹಾಗೂ ಪವಿತ್ರ ಅತಿಥಿಗಳನ್ನು ಹೂ ನೀಡಿ ಸ್ವಾಗತಿಸಿದರು.

LEAVE A REPLY

Please enter your comment!
Please enter your name here