ಪುತ್ತೂರು: ಕ್ರಿಸ್ಮಸ್ ಹಬ್ಬದ ಸಂದೇಶವೇ ಸಹಬಾಳ್ವೆ, ಸಾಮರಸ್ಯ ಹಾಗೂ ಬಂಧುತ್ವ. ಎಲ್ಲಾ ಜಾತಿ-ಧರ್ಮದವರು ಒಗ್ಗೂಡಿ ಶಾಂತಿಯಿಂದ ಬದುಕಿದಾಗ ಕ್ರಿಸ್ಮಸ್ ಹಬ್ಬಕ್ಕೆ ನಿಜವಾದ ಅರ್ಥ ಬರುತ್ತದೆ. ಪೆರ್ನೆ ಸೈಂಟ್ ಫ್ರಾನ್ಸಿಸ್ ಚಾಪೆಲ್ ಸಮೀಪ ಸಚಿನ್ ಫೆರ್ನಾಂಡೀಸ್ ಹಾಗೂ ವಿನ್ಸೆಂಟ್ ಮಚಾದೋರವರು ಕ್ರಿಸ್ಮಸ್ ಹಬ್ಬದ ಪ್ರಯುಕ್ತ ಯೇಸುವಿನ ಜನನ ಸಾರುವ ಗೋದಲಿಯನ್ನು ನಿರ್ಮಿಸಿರುತ್ತಾರೆ.
ಸಚಿನ್ ಫೆರ್ನಾಂಡೀಸ್ ಹಾಗೂ ವಿನ್ಸೆಂಟ್ ಮಚಾದೋರವರೊಂದಿಗೆ ಸ್ಥಳೀಯರಾದ ಶಿವಪ್ಪ ನಾಯ್ಕ, ವಿನುತ್ ನಾಯಕ್, ಸುರೇಶ್ ಕಾರ್ಲ ಮತ್ತು ಪೆರ್ನೆ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ಸುನಿಲ್ ಪಿಂಟೊರವರು ಸುಂದರ ಗೋದಲಿ ನಿರ್ಮಾಣದಲ್ಲಿ ಕೈಜೋಡಿಸಿದ್ದು ನಿಜವಾದ ಬಂಧುತ್ವವನ್ನು ತೋರಿಸಿಕೊಟ್ಡಿದ್ದಾರೆ.