ಪುತ್ತೂರು: ಶ್ರೀ ದೇವಿಯ ಮಹಾತ್ಮೆಯನ್ನು ಸಾರುವ ಕಟೀಲು ಮೇಳದವರು ಆಡಿ ತೋರಿಸಿದ ಪೌರಾಣಿಕ ಯಕ್ಷಗಾನ ಬಯಲಾಟ ಶ್ರೀ ದೇವಿ ಮಹಾತ್ಮೆ’ ಡಿ.21ರಂದು ಅರಿಯಡ್ಕ ಗ್ರಾಮದ ಕೌಡಿಚ್ಚಾರು ಸಮೀಪದ ಕುತ್ಯಾದಿ ಶ್ರೀಕಾರಂ ಮನೆಯಲ್ಲಿ ವಿಜೃಂಭಣೆಯಿಂದ ಜರಗಿತು. ಬೆಳಿಗ್ಗೆ ಶ್ರೀ ಗಣಪತಿ ಹೋಮ, ಬಳಿಕ ಶ್ರೀ ಸತ್ಯನಾರಾಯಣ ಪೂಜೆ ನಡೆದು ಪ್ರಸಾದ ವಿತರಣೆ ಬಳಿಕ ಭಕ್ತಾಧಿಗಳಿಗೆ ಅನ್ನಸಂತರ್ಪಣೆ ನಡೆಯಿತು.
ಸಂಜೆ ಕಟೀಲು ಶ್ರೀ ದುರ್ಗಾಪರಮೇಶ್ವರಿ ಪ್ರಸಾದಿತ ದಶಾವತಾರ ಯಕ್ಷಗಾನ ಮಂಡಳಿ ಇದರ ಸಹಯೋಗದೊಂದಿಗೆಶ್ರೀ ದೇವಿ ಮಹಾತ್ಮೆ’ ಎಂಬ ಪೌರಾಣಿಕ ಯಕ್ಷಗಾನ ಬಯಲಾಟ ಪ್ರದರ್ಶನಗೊಂಡಿತು. ಆರಂಭದಲ್ಲಿ ಶ್ರೀ ದೇವಿಯ ಚೌಕಿ ಪೂಜೆ ನಡೆದು ಭಕ್ತಾಧಿಗಳಿಗೆ ಅನ್ನಸಂತರ್ಪಣೆ ನಡೆಯಿತು. ನೂರಾರು ಮಂದಿ ಭಕ್ತರು ಅನ್ನಪ್ರಸಾದ ಸ್ವೀಕರಿಸಿ ಶ್ರೀ ದೇವಿ ಮಹಾತ್ಮೆ ಯಕ್ಷಗಾನವನ್ನು ನೋಡಿ ಸಂಭ್ರಮಿಸಿದರು.
ವಿಜೃಂಭಣೆಯ ಶ್ರೀ ದೈವಗಳ ನೇಮೋತ್ಸವ
ಡಿ.22ರಂದು ರಾತ್ರಿ ಶ್ರೀ ದೈವಗಳ ವಿಜೃಂಭಣೆಯ ನೇಮೋತ್ಸವ ನಡೆಯಿತು. ಶ್ರೀ ಕಲ್ಲುರ್ಟಿ ಮತ್ತು ಶ್ರೀ ಕೊರಗಜ್ಜ ದೈವಗಳ ನೇಮೋತ್ಸವವು ಜರಗಿತು. ನೇಮೋತ್ಸವದ ಬಳಿಕ ಭಕ್ತಾಧಿಗಳಿಗೆ ಪ್ರಸಾದ ವಿತರಣೆ ಬಳಿಕ ಅನ್ನಸಂತರ್ಪಣೆ ನಡೆಯಿತು. ನೂರಾರು ಭಕ್ತಾಧಿಗಳು ಶ್ರೀ ದೈವಗಳ ಗಂಧ ಪ್ರಸಾದ, ಅನ್ನಪ್ರಸಾದ ಸ್ವೀಕರಿಸಿದರು. ಶ್ರೀಕಾರಂ ಕುತ್ಯಾಡಿ ಮನೆಯ ತಿಮ್ಮಪ್ಪ ಭಂಡಾರಿ, ಮೋಹಿನಿ ಭಂಡಾರಿ, ಅಜಿತ್ ಭಂಡಾರಿ, ರಮ್ಯ ಅಜಿತ್ ಭಂಡಾರಿ,ಶಾರದಾ ನವೀನ್ ಭಂಡಾರಿ, ಅಕ್ಷತಾ ಶರತ್ ಭಂಡಾರಿ, ನಿತಿನ್ ಭಂಡಾರಿರವರು ಭಕ್ತಾಧಿಗಳನ್ನು ಸ್ವಾಗತಿಸಿ,ಸತ್ಕರಿಸಿದರು.