ಪುತ್ತೂರು: ಪುತ್ತೂರಿನ ನೃತ್ಯೋಪಾಸನಾ ಕಲಾ ಅಕಾಡೆಮಿ ಇದರ ಕಲಾತಂಡದಿಂದ ಮುಕ್ರಂಪಾಡಿಯ ನಂದಿವನದಲ್ಲಿ ಶನಿವಾರ ‘ನೃತ್ಯೋಹಂ’ ನೃತ್ಯ ವೈವಿಧ್ಯ ನಡೆಯಿತು.
ನೃತ್ಯಗುರು ವಿದುಷಿ ಶಾಲಿನಿ ಆತ್ಮಭೂಷಣ್ ನಿರ್ದೇಶನದಲ್ಲಿ ಕಲಾ ಅಕಾಡೆಮಿಯ ತಂಡ ನೃತ್ಯ ಪ್ರದರ್ಶನ ನೀಡಿತು.
ನಟವಾಂಗದಲ್ಲಿ ನೃತ್ಯ ಗುರು ವಿದುಷಿ ಶಾಲಿನಿ ಆತ್ಮಭೂಷಣ್, ವಿದ್ವಾನ್ ಸ್ವರಾಗ್ ಮಾಹೆ ಹಾಡುಗಾರಿಕೆ, ವಿದ್ವಾನ್ ರಾಜನ್ ಪಯ್ಯನ್ನೂರು ಮೃದಂಗ, ವಾಯಲಿನ್ ನಲ್ಲಿ ಗಣರಾಜ ಕಾರ್ಲೆ ಸಾಥ್ ನೀಡಿದರು. ಕೊನೆತೋಟ ನಾರಾಯಣಿ ಅಮ್ಮ ಕಲಾವಿದರನ್ನು ಗೌರವಿಸಿದರು.