ಪುತ್ತೂರು: ಮಂಗಳೂರಿನ ಕರಾವಳಿ ಉತ್ಸವದಲ್ಲಿ ಪುತ್ತೂರಿನ ನೃತ್ಯೋಪಾಸನಾ ಕಲಾ ಅಕಾಡೆಮಿ ಇದರ ಕಲಾವಿದರು ‘ನೃತ್ಯೋಹಂ’ ನೃತ್ಯ ಕಾರ್ಯಕ್ರಮವನ್ನು ದಿ.23ರಂದು ನಡೆಸಿಕೊಟ್ಟರು.
ನೃತ್ಯಗುರು ವಿದುಷಿ ಶಾಲಿನಿ ಆತ್ಮಭೂಷಣ್ ಮಾರ್ಗದರ್ಶನದಲ್ಲಿ ನೃತ್ಯ ಕಾರ್ಯಕ್ರಮ ನಡೆಯಿತು.
ಈ ಸಂದರ್ಭ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್, ಮಂಗಳೂರು ಮತ್ತು ಪುತ್ತೂರಿನ ಸಹಾಯಕ ಕಮಿಷನರ್ ಗಳಾದ ಹರ್ಷವರ್ಧನ ಹಾಗೂ ಜುಬಿನ್ ಮೊಹಪಾತ್ರ, ಮಂಗಳೂರು ತಹಶೀಲ್ದಾರ್ ಪ್ರಶಾಂತ್ ಪಾಟೀಲ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಉಪ ನಿರ್ದೇಶಕ ರಾಜೇಶ್, ಕರಾವಳಿ ಉತ್ಸವ ಸಮಿತಿಯ ಸದಸ್ಯರಾದ ಮಂಜುನಾಥ್ ನಿಸರ್ಗ, ವಿದ್ವಾನ್ ಶ್ರೀಧರ ಹೊಳ್ಳ ಮತ್ತಿತರರು ಕಲಾವಿದರನ್ನು ಗೌರವಿಸಿದರು.