ಬಂಟರ ಯಾನೆ ನಾಡವರ ಮಾತೃ ಸಂಘದ ಪುತ್ತೂರು ತಾಲೂಕು ಸಮಿತಿಯ ವಿಶೇಷ ಸಭೆ

0

ಬಂಟರ ಭವನ ಮತ್ತಷ್ಟು ಅಭಿವೃದ್ಧಿ- ಕುಂಬ್ರ ದುರ್ಗಾಪ್ರಸಾದ್ ರೈ

ಪುತ್ತೂರು: ಬಂಟರ ಯಾನೆ ನಾಡವರ ಮಾತೃ ಸಂಘದ ಪುತ್ತೂರು ತಾಲೂಕು ಸಮಿತಿಯ ವಿಶೇಷ ಸಭೆಯು ದ. 21 ರಂದು ಪುತ್ತೂರು ಎಂ. ಸುಂದರರಾಮ್ ಶೆಟ್ಟಿ ಸ್ಮಾರಕ ಬಂಟರಭವನದ ಕಚೇರಿಯಲ್ಲಿ ಜರಗಿತು.


ಅಧ್ಯಕ್ಷತೆ ವಹಿಸಿದ್ದ ಬಂಟರ ಯಾನೆ ನಾಡವರ ಮಾತೃ ಸಂಘದ ತಾಲೂಕು ಸಮಿತಿಯ ಸಂಚಾಲಕ ಕುಂಬ್ರ ದುರ್ಗಾಪ್ರಸಾದ್ ರೈಯವರು ಮಾತನಾಡಿ, ಮಾತೃ ಸಂಘದ ವತಿಯಿಂದ ಮುಂಬರುವ ದಿನಗಳಲ್ಲಿ ವಿಶೇಷ ಸಾಂಸ್ಕೃತಿಕ ಕಾರ್‍ಯಕ್ರಮಗಳನ್ನು ಹಮ್ಮಿಕೊಳ್ಳಲಾಗುವುದು. ಜೊತೆಗೆ ಬಂಟರ ಭವನವನ್ನು ಮತ್ತಷ್ಟು ಅಭಿವೃದ್ಧಿಗೊಳಿಸಲಾಗುವುದು ಎಂದರು. ಮಾತೃ ಸಂಘಕ್ಕೆ ಒಳ ಪಟ್ಟಿರುವ ಬಂಟರ ಭವನದ ವ್ಯಾಪ್ತಿಯ ಸ್ಥಳವನ್ನು ಸರ್ವೆ ಮಾಡಿಕೊಳ್ಳಲು, ಸರ್ವೆ ಇಲಾಖೆಗೆ ಬರೆದುಕೊಳ್ಳವುದು ಎಂದು ತೀರ್ಮಾನ ಮಾಡಲಾಗಿದೆ. ಕಂಬಳ ಕ್ರೀಡೆಗೆ ಅನುದಾನ ಒದಗಿಸಿದ ಶಾಸಕ ಅಶೋಕ್ ಕುಮಾರ್ ರೈ, ಮಂಗಳೂರು- ಪುತ್ತೂರು ರೈಲ್ವೆಯನ್ನು ಸುಬ್ರಹ್ಮಣ್ಯಕ್ಕೆ ವಿಸ್ತರಿಸುವಲ್ಲಿ ಶ್ರಮಿಸಿದ ಸಂಸದ ಬ್ರಿಜೇಶ್ ಚೌಟ ಹಾಗೂ ಪಂಚಾಯತ್ ರಾಜ್ ಕಾಯ್ದೆ ಬಗ್ಗೆ ಅಧಿವೇಶನದಲ್ಲಿ ವಿಶೇಷ ಗಮನ ಸೆಳೆದ ವಿಧಾನಪರಿಷತ್ ಸದಸ್ಯ ಮಂಜುನಾಥ ಭಂಡಾರಿಯವರಿಗೆ ಸಭೆಯಲ್ಲಿ ಅಭಿನಂದನೆ ಸಲ್ಲಿಸಲಾಯಿತು.

ಬಂಟರ ಭವನದ ಪಾಕಶಾಲೆಯನ್ನು ಅಧುನಿಕರಣಗೊಳಿಸುವ ಬಗ್ಗೆ ತೀರ್ಮಾನಗೊಳಿಸಲಾಯಿತು ಎಂದು ದುರ್ಗಾಪ್ರಸಾದ್ ರೈ ಹೇಳಿದರು.
ಬಂಟರ ಯಾನೆ ನಾಡವರ ಮಾತೃ ಸಂಘದ ಪುತ್ತೂರು ತಾಲೂಕು ಸಮಿತಿಯ ಸಹಸಂಚಾಲಕ ಸಾಜ ರಾಧಾಕೃಷ್ಣ ಆಳ್ವ, ನಿರ್ದೇಶಕರಾದ ಕಾವು ಹೇಮನಾಥ ಶೆಟ್ಟಿ, ದಯಾನಂದ ರೈ ಮನವಳಿಕೆಗುತ್ತು, ಜಯಪ್ರಕಾಶ್ ರೈ ನೂಜಿಬೈಲು, ಜೈರಾಜ್ ಭಂಡಾರಿ, ರಮೇಶ್ ರೈ ಸಾಂತ್ಯ, ನಿತ್ಯಾನಂದ ಶೆಟ್ಟಿ ಮನವಳಿಕೆ ಹಾಗೂ ವಾಣಿ ಎಸ್ ಶೆಟ್ಟಿ ನೆಲ್ಯಾಡಿ ಉಪಸ್ಥಿತರಿದ್ದರು.
ಬಂಟರ ಭವನದ ಕಚೇರಿ ವ್ಯವಸ್ಥಾಪಕ ರವಿಚಂದ್ರ ರೈ ಮತ್ತು ಭಾಸ್ಕರ್ ರೈ ಸಹಕರಿಸಿದರು.

LEAVE A REPLY

Please enter your comment!
Please enter your name here