ತಿಂಗಳಾಡಿ ಶಾಲೆಯ ವಾರ್ಷಿಕೋತ್ಸವ – ಕೃಷ್ಣೇಗೌಡ ಮತ್ತು ಕಡಮಜಲು ವಿಪುಲ‌ ಎಸ್. ರೈಯವರಿಂದ ಇಂಟರ್‌ಲಾಕ್ ಸಮರ್ಪಣೆ

0

ಪುತ್ತೂರು: ದ.ಕ.ಜಿ.ಪಂ.ಉ.ಹಿರಿಯ ಪ್ರಾಥಮಿಕ ಶಾಲೆ‌ ತಿಂಗಳಾಡಿ ಇದರ ವಾರ್ಷಿಕೋತ್ಸವ ಮತ್ತು ಶಾಲೆಗೆ ಇಂಟರ್‌ಲಾಕ್ ಸಮರ್ಪಣೆ ಡಿ.24 ರಂದು ನಡೆಯಿತು.


ಕೆದಂಬಾಡಿ ಗ್ರಾ.ಪಂ. ಅಧ್ಯಕ್ಷೆ ಸುಜಾತಾ ದೀಪ ಬೆಳಗಿಸಿ ಉದ್ಘಾಟಿಸಿ ಮಾತನಾಡಿ ‘ಶಾಲೆ ಎನ್ನುವುದು ಜ್ಞಾನ ದೇಗುಲ, ವಿದ್ಯಾರ್ಥಿಗಳು ಉತ್ತಮ ವ್ಯಕ್ತಿಗಳಾಗಿ ರೂಪುಗಳ್ಳಲಿ’ ಎಂದು ಆಶಿಸಿದರು.

ಸಭಾಧ್ಯಕ್ಷತೆಯನ್ನು ಎಸ್‌ಡಿಎಂಸಿ ಅಧ್ಯಕ್ಷ ಹಮೀದ್ ಟಿ. ವಹಿಸಿದ್ದರು. ಮುಖ್ಯ ಅತಿಥಿಯಾಗಿದ್ದ, ಶಾಲೆಗೆ ಇಂಟರ್‌ಲಾಕ್ ಸಮರ್ಪಿಸಿದ ಕಡಮಜಲು ವಿಪುಲ ಎಸ್. ರೈಯವರ ತಂದೆ ಕಡಮಜಲು ಸುಭಾಸ್ ರೈ ರವರು ಮಾತನಾಡಿ ಶುಭ ಹಾರೈಸಿದರು.

ಇಂಟರ್‌ಲಾಕ್ ಸಮರ್ಪಿಸಿದ ಕಡಮಜಲು ವಿಪುಲ ಎಸ್. ರೈಯವರ ಪರವಾಗಿ ಅವರ ತಂದೆ‌ ಕಡಮಜಲು‌ ಸುಭಾಸ್ ರೈ ಮತ್ತು ನಿವೃತ್ತ ಶಿಕ್ಷಕ ಚೆನ್ನಹಳ್ಳಿ ಕೃಷ್ಣೇಗೌಡರನ್ನು ಶಾಲಾ ವತಿಯಿಂದ ಸನ್ಮಾನಿಸಲಾಯಿತು.

ಶಾಲೆಯ ನಿವೃತ್ತ ಶಿಕ್ಷಕ ಚೆನ್ನಹಳ್ಳಿ ಕೃಷ್ಣೇಗೌಡ, ಶಾಲೆಯ ಹಿರಿಯ ವಿದ್ಯಾರ್ಥಿ, ಉದ್ಯಮಿ ಮಿತ್ರಂಪಾಡಿ ಜಯರಾಮ ರೈ ಅಬುಧಾಬಿ, ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷ ಆನಂದ ರೈ ಮಠ, ಕೆದಂಬಾಡಿ ಗ್ರಾ.ಪಂ. ಉಪಾಧ್ಯಕ್ಷೆ ಜಯಲಕ್ಷ್ಮಿ ಬಲ್ಲಾಳ್, ಸದಸ್ಯರಾದ ವಿಠಲ ರೈ ಕೆದಂಬಾಡಿ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಮುಖ್ಯಗುರು ವಿಜಯ ಕೆ. ಸ್ವಾಗತಿಸಿ, ವಿದ್ಯಾರ್ಥಿಗಳು ಪ್ರಾರ್ಥಿಸಿದರು. ಜಿಪಿಟಿ ಶಿಕ್ಷಕಿ ಮಮತಾ ಶಾಲಾ ವರದಿ ಮಂಡಿಸಿದರು. ಶಿಕ್ಷಕಿಯರಾದ ರೇವತಿ ಶೃತಿ, ಚೈತ್ರಾ, ಮಮತಾ, ಎಸ್.ಡಿಎಂಸಿ ಸದಸ್ಯೆ ಸುಗುಣ, ಕುಸುಮ, ಆನಂದ ರೈ ಮಠ ಅತಿಥಿಗಳನ್ನು ಸ್ವಾಗತಿಸಿದರು. ಶಿಕ್ಷಕಿಯರಾದ ಶೃತಿ ಹಾಗೂ ಮಮತಾ ಕಾರ್ಯಕ್ರಮ ನಿರೂಪಿಸಿದರು.

75 ಸಾವಿರ ರೂ. ವೆಚ್ಚದ ಇಂಟರ್‌ಲಾಕ್ ಸಮರ್ಪಣೆ


ಶಾಲೆಯ ಪ್ರವೇಶದ್ವಾರದಿಂದ ಮೈದಾನಕ್ಕೆ ಪ್ರವೇಶಿಸುವ ರಸ್ತೆಗೆ ಸುಮಾರು 75 ಸಾವಿರ ರೂ. ವೆಚ್ಚದಲ್ಲಿ ಇಂಟರ್‌‌ಲಾಕ್ ಹಾಸಲಾಗಿದೆ. ನಿವೃತ್ತ ಶಿಕ್ಷಕ ಚೆನ್ನಹಳ್ಳಿ ಕೃಷ್ಣೇಗೌಡರವರು 25 ಸಾವಿರ ರೂ. ಹಾಗೂ ಅವರ ಶಿಷ್ಯ ಕಡಮಜಲು ವಿಪುಲ‌‌ ಎಸ್. ರೈಯವರು 50 ಸಾವಿರ ರೂ. ದೇಣಿಗೆಯಲ್ಲಿ ಇಂಟರ್‌ಲಾಕ್ ಹಾಸಲಾಗಿದ್ದು, ಅದರ ಸಮರ್ಪಣೆ‌ ಇದೇ ವೇಳೆ ನಡೆಯಿತು.

LEAVE A REPLY

Please enter your comment!
Please enter your name here