ಪುತ್ತೂರು: ಪುತ್ತೂರು ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ದೇವರಮಾರು ಗದ್ದೆಯಲ್ಲಿ ಡಿ.28-29ರಂದು ಜರಗುವ ಶ್ರೀನಿವಾಸ ಕಲ್ಯಾಣೋತ್ಸವ ಮತ್ತು ಧರ್ಮಸಂಗಮ ಕಾರ್ಯಕ್ರಮಕ್ಕೆ ಸಂಬಂಧಿಸಿ ಪುತ್ತೂರು ಪೇಟೆಯಾದ್ಯಂತ ವರ್ತಕರಿಗೆ ಆಮಂತ್ರಣ ಪತ್ರ ವಿತರಣೆಯು ಡಿ.26ರಂದು ಸಂಜೆ ನಡೆಯಿತು.
ದರ್ಬೆಯಿಂದ ಆರಂಭಗೊಂಡ ಆಮಂತ್ರಣ ಪತ್ರ ವಿತರಣೆಯು ಬೊಳುವಾರು ತನಕ ನಡೆಯಿತು. ಶ್ರೀನಿವಾಸ ಕಲ್ಯಾಣೋತ್ಸವ ಸಮಿತಿಯ ಸಂಚಾಲಕ ಅರುಣ್ ಕುಮಾರ್ ಪುತ್ತಿಲ ಅವರು ಡಿ.27ರಂದು ನಡೆಯುವ ಹೊರೆಕಾಣಿಕೆ ಸಂದರ್ಭ ಹೊರೆಕಾಣಿಕೆ ಸಂಗ್ರಹಿಸುವ ವಾಹನಕ್ಕೆ ವರ್ತಕರು ಕಲ್ಯಾಣೋತ್ಸವ ಕಾರ್ಯಕ್ರಮಕ್ಕೆ ಸಾಹಿತ್ಯ ನೀಡುವಂತೆ ಮನವಿ ಮಾಡಿದರು. ಶ್ರೀನಿವಾಸ ಕಲ್ಯಾಣೋತ್ಸವ ಸಮಿತಿಯ ಅಧ್ಯಕ್ಷ ಶಿವಪ್ರಸಾದ್ ಇಜ್ಜಾವು, ಗೌರವಾಧ್ಯಕ್ಷ ಚಂದಪ್ಪ ಮೂಲ್ಯ, ಪ್ರಮುಖರಾದ ಉಮೇಶ್ ಕೋಡಿಬೈಲು, ಸುನೀಲ್ ಬೋರ್ಕರ್, ಮನೀಶ್ ಕುಲಾಲ್, ರವಿ ಕುಮಾರ್ ರೈ ಕೆದಂಬಾಡಿಮಠ, ಉಮೇಶ್ ಕೋಡಿಬೈಲು ಸಹಿತ ಹಲವಾರು ಮಂದಿ ಆಮಂತ್ರಣ ಪತ್ರ ವಿತರಣೆಯಲ್ಲಿ ಭಾಗವಹಿಸಿದರು.