





ವಿಟ್ಲ: ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನದ ಶ್ರೀ ಗುರುದೇವಾನಂದ ಸ್ವಾಮೀಜಿಯವರ ಮಾರ್ಗದರ್ಶಣದಲ್ಲಿ ಫೆ.6 ಹಾಗೂ ಫೆ.7ರಂದು ನಡೆಯಲಿರುವ ಶ್ರೀ ಸಂಸ್ಥಾನದ ವಾರ್ಷಿಕ ಉತ್ಸವವಾದ ತುಳುನಾಡ ಜಾತ್ರೆ- ಶ್ರೀ ಒಡಿಯೂರುರಥೋತ್ಸವದ ಪೂರ್ವಭಾವಿಯಾಗಿ ಡಿ.31ರಂದು ಅಪರಾಹ್ನ 2.30ಕ್ಕೆ ಶ್ರೀ ಗುರುದೇವಾನಂದ ಸ್ವಾಮೀಜಿಯವರ ದಿವ್ಯ ಉಪಸ್ಥಿತಿಯಲ್ಲಿ ಸಂಸ್ಥಾನದ ಶ್ರೀ ಗುರುದೇವ ಜ್ಞಾನ ಮಂದಿರದಲ್ಲಿ ಸಮಾಲೋಚನಾ ಸಭೆ ನಡೆಯಲಿದೆ. ಗುರುಬಂಧುಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಸಲಹೆ ಸೂಚನೆಗಳನ್ನು ನೀಡಬೇಕೆಂದು ಸಂಸ್ಥಾನದ ಕಾರ್ಯನಿರ್ವಾಹಕರ ಪ್ರಕಟಣೆ ತಿಳಿಸಿದೆ.











