ಬೆಟ್ಟಂಪಾಡಿ ಬಿಜೆಪಿ ಶಕ್ತಿ ಕೇಂದ್ರದಿಂದ ಆಯುಷ್ಮಾನ್ ಕಾರ್ಡ್ ವಿತರಣೆ – ಕೇಂದ್ರ ಸರ್ಕಾರದ ಯೋಜನೆಗಳ ಮಾಹಿತಿ, ಮನ್ ಕಿ ಬಾತ್ ವೀಕ್ಷಣೆ

0

ಪುತ್ತೂರು: ಬೆಟ್ಟಂಪಾಡಿ ಬಿಜೆಪಿ ಶಕ್ತಿ ಕೇಂದ್ರದ ವತಿಯಿಂದ ಕೇಂದ್ರ ಸರ್ಕಾರದ ಜನಸಾಮಾನ್ಯರಿಗೆ ಉಚಿತ ಚಿಕಿತ್ಸೆ ಯೋಜನೆಯ ಆಯುಷ್ಮಾನ್ ಭಾರತ್ ಕಾರ್ಡ್ ವಿತರಣೆ, ಕೇಂದ್ರ ಸರ್ಕಾರದ ಎಲ್ಲಾ ಯೋಜನೆಗಳ ಸಂಪೂರ್ಣ ಮಾಹಿತಿ ಹಾಗೂ ಪ್ರಧಾನ ಮಂತ್ರಿಯವರ ಮನ್ ಕಿ ಬಾತ್ ವೀಕ್ಷಣೆ ಕಾರ್ಯಕ್ರಮ ಬೆಟ್ಟಂಪಾಡಿ ಗ್ರಾಮ ಪಂಚಾಯತ್ ಸಮುದಾಯ ಭವನದಲ್ಲಿ ನಡೆಯಿತು.

ಸಂಪನ್ಮೂಲ ವ್ಯಕ್ತಿಯಾಗಿ ಗೀತಾರವರು ಕೇಂದ್ರ ಸರಕಾರದ ಎಲ್ಲಾ ಯೋಜನೆಗಳ ಮಾಹಿತಿ ನೀಡಿ ಸೌಲಭ್ಯ ಪಡೆದುಕೊಳ್ಳುವಂತೆ ತಿಳಿಸಿದರು. ಒಟ್ಟು 56 ಮಂದಿಗೆ ಆಯುಸ್ಮಾನ್ ಕಾರ್ಡ್ ಮಾಡಿ ವಿತರಿಸಲಾಯಿತು. ಪ್ರಧಾನಿ ನರೇಂದ್ರ ಮೋದಿಯವರ ಮನ್ ಕಿ ಬಾತ್ ಕಾರ್ಯಕ್ರಮವನ್ನು ಎಲ್‌ಇಡಿ ಪರದೆಯ ಮೂಲಕ ವೀಕ್ಷಣೆ ಮಾಡಲಾಯಿತು.

ಬಿಜೆಪಿ ಗ್ರಾಮಾಂತರ ಮಂಡಲ ಅಧ್ಯಕ್ಷ ದಯಾನಂದ ಉಜಿರೆಮಾರ್, ಆರ್ಯಾಪು ಮಹಾಶಕ್ತಿ ಕೇಂದ್ರದ ಕಾರ್ಯದರ್ಶಿ ನಾಗೇಶ್, ಬೆಟ್ಟಂಪಾಡಿ ಗ್ರಾಮ ಪಂಚಾಯತ್ ಅಧ್ಯಕ್ಷೆ ವಿದ್ಯಾಶ್ರೀ ಸರಳಿಕಾನ, ಉಪಾಧ್ಯಕ್ಷ ಮಹೇಶ್ ಕೊರ್ಮಂಡ, ಬೆಟ್ಟಂಪಾಡಿ ಶಕ್ತಿಕೇಂದ್ರದ ಅಧ್ಯಕ್ಷ ಸಂದೀಪ್ ರೈ ಬಾಜುವಲ್ಲಿ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಬೆಟ್ಟಂಪಾಡಿ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ಸುಂದರ್ ನಾಯಕ್ ಬಾಳೆಗುಳಿ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು. ಚಂದ್ರಹಾಸ್ ಮೂರೂರ್ ವಂದಿಸಿದರು. ಬೆಟ್ಟಂಪಾಡಿ ಶಕ್ತಿಕೇಂದ್ರದ ಮಾಜಿ ಅಧ್ಯಕ್ಷ ಜಗನಾಥ ಶೆಟ್ಟಿ ಕೊಮ್ಮಾಂಡ, ಬೂತ್ ಅಧ್ಯಕ್ಷರುಗಳಾದ ಪ್ರಕಾಶ್ ರೈ ಬೈಲಾಡಿ, ಮನೋಜ್ ಕುಮಾರ್ ರೈ ಮೂರ್ಕಾಜೆ, ಶಾಂತರಾಮ ಗೌಡ ಮಿತ್ತಡ್ಕ, ಪುಷ್ಪರಾಜ್ ಶೆಟ್ಟಿ, ಕಾರ್ಯದರ್ಶಿಗಳಾದ ಉಚಿತ್ ಕುಮಾರ್, ಶ್ರೀಕುಮಾರ್ ಭಟ್, ಪ್ರಭಾಕರ್ ರೈ ಬಾಜುವಳ್ಳಿ ಅಚ್ಚುತ ಭಟ್ ಕಕ್ಕೂರು, ಪುರಂದರ ಕುಲಾಲ್, ಪಂಚಾಯತ್ ಸದಸ್ಯರಾದ ಪಾರ್ವತಿ ಲಿಂಗಪ್ಪ ಗೌಡ, ಗಂಗಾಧರ ಗೌಡ, ಉಮಾವತಿ ಸುಬ್ಬಪ್ಪ ಮಣಿಯಾನಿ ಗುಮ್ಮಟೆಗದ್ದೆ, ವಿನೋದ್ ಕುಮಾರ್ ರೈ ಗುತ್ತು, ಬಿಜೆಪಿ ಕಾರ್ಯಕರ್ತರಾದ ಧನ್ಯಕುಮಾರ್ ಬಾಳೆಹಿತ್ಲು, ಸತೀಶ್ ಗೌಡ ಪಾರ ಸೇರಿದಂತೆ ಬೂತ್ ಸಮಿತಿ ಸದಸ್ಯರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here