ಬೊಳುವಾರು ಆಂಜನೇಯ ಮಂತ್ರಾಲಯದಲ್ಲಿ ಪಾಕ್ಷಿಕ ಯಕ್ಷಗಾನ ಕೂಟ

0

ಪುತ್ತೂರು: ಬೊಳುವಾರು ಆಂಜನೇಯ ಮಂತ್ರಾಲಯದಲ್ಲಿ ಬೊಳುವಾರು ಶ್ರೀ ಆಂಜನೇಯ ಯಕ್ಷಗಾನ ಕಲಾ ಸಂಘದ ವತಿಯಿಂದ ಪಾಕ್ಷಿಕ ಕೂಟವು ಜ.4ರಂದು ” ಅಂಗದ ಸಂಧಾನ” ತಾಳಮದ್ದಳೆಯೊಂದಿಗೆ ನಡೆಯಿತು.


ಹಿಮ್ಮೇಳದಲ್ಲಿ ಕುಸುಮಾಕರ ಆಚಾರ್ಯ ಹಳೆನೇರೆಂಕಿ, ಕುಮಾರಿ ಕೃತಿಕಾ ಖಂಡೇರಿ, ಜಯಪ್ರಕಾಶ್ ನಾಕೂರು , ಟಿ.ಡಿ.ಗೋಪಾಲಕೃಷ್ಣ ಭಟ್ ,ಕುಮಾರಿ ಶರಣ್ಯ ವಿಟ್ಲ ಸಹಕರಿಸಿದರು. ಮುಮ್ಮೇಳದಲ್ಲಿ ಶ್ರೀ ರಾಮ ( ವಿ.ಕೆ.ಶರ್ಮ ಅಳಿಕೆ ) ಅಂಗದ ( ಭಾಸ್ಕರ್ ಬಾರ್ಯ ) ಪ್ರಹಸ್ತ ( ಗುಡ್ಡಪ್ಪ ಬಲ್ಯ ) ಸಹಕರಿಸಿದರು. ಟಿ ರಂಗನಾಥ ರಾವ್ ಸ್ವಾಗತಿಸಿ, ರಾಜ್ ಗೋಪಾಲ್ ಭಟ್ ಬನ್ನೂರು ವಂದಿಸಿದರು.

LEAVE A REPLY

Please enter your comment!
Please enter your name here