ಪುತ್ತೂರು: ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ಆರೆಲ್ತಡಿಯಲ್ಲಿ ಇಕೋ ಕ್ಲಬ್ ಕಾರ್ಯಕ್ರಮದಡಿ ಶ್ರಮದಾನ ಕಾರ್ಯಕ್ರಮ ನಡೆಯಿತು.
ಈ ಕಾರ್ಯಕ್ರಮದಲ್ಲಿ ಶಾಲಾ ಎಸ್.ಡಿ.ಎಂ.ಸಿ. ಅಧ್ಯಕ್ಷರಾದ ಚಂದ್ರಶೇಖರ ಪಟ್ಟೆ, ಉಪಾಧ್ಯಕ್ಷರಾದ ಬದ್ರುನಿಸ ಹಾಗೂ ಎಸ್.ಡಿ.ಎಂ.ಸಿ ಸದಸ್ಯರಾದ ಅನುರಾಧ ಆರೆಲ್ತಡಿ, ಅಸ್ಮಾ ಪಟ್ಟೆ, ಸಮೀಮ ಪಾರೆ, ಅವ್ವಮ್ಮ ಆರೆಲ್ತಡಿ, ಸುನಿತಾ ಪಟ್ಟೆ, ವನಜಾಕ್ಷಿ ಕೆಡೆಂಜಿಮಾರು, ಮಮತಾ ಆರೆಲ್ತಾಡಿ, ಪೋಷಕರಾದ ನೇತ್ರವಾತಿ ಕೆಡೆಂಜಿಮಾರು, ಕಮಲಾಕ್ಷಿ ಆರೆಲ್ತಡಿ, ಅವಿನ್ ಕೆಡೆಂಜಿ, ಗೀತಾ ಕುದ್ಮನಮಜಲು, ವಸಂತಿ ಕೆಡೆಂಜಿ ಮುಂತಾದವರು ಭಾಗವಹಿಸಿದರು.
ಇಕೋ ಕಲ್ಬ್ ಕಾರ್ಯಕ್ರಮದಲ್ಲಿ ಶಾಲಾ ಪರಿಸರ ಸ್ವಚ್ಛತೆ ಹಾಗೂ ತೆಂಗಿನ ಗಿಡಗಳನ್ನು ನೆಡಲಾಯಿತು. ಶಾಲಾ ಮುಖ್ಯಗುರು ಶ್ರೀಕಾಂತ್ ಕಂಬಳಕೋಡಿ ಸ್ವಾಗತಿಸಿ, ಧನ್ಯವಾದಗೈದರು. ಶಿಕ್ಷಕಿಯರಾದ ರಮ್ಯ.ರೈ.ಕೆ ಹಾಗೂ ದಿವ್ಯ ಪೆರುವಾಜೆ ಸಹಕರಿಸಿದರು.