ರಾಮಕುಂಜ: ಕಡಬ ತಾಲೂಕು ಕೊಯಿಲ ಗ್ರಾಮದ ಬರೆಮೇಲು ಶ್ರೀ ಶಿರಾಡಿ ಮತ್ತು ಪರಿವಾರ ದೈವಗಳ ದೈವಸ್ಥಾನದಲ್ಲಿ ಜ.7ರಿಂದ 9ರ ತನಕ ಗ್ರಾಮ ದೈವ ಶ್ರೀ ಶಿರಾಡಿ, ಪಂಜುರ್ಲಿ ಮತ್ತು ಮೊಗೇರ ದೈವಗಳ ಪುನ: ಪ್ರತಿಷ್ಠಾ ಬ್ರಹ್ಮಕಲಶ ಮತ್ತು ನೇಮೋತ್ಸವ ನಡೆಯಲಿದ್ದು ಆ ಪ್ರಯುಕ್ತ ಜ.7ರಂದು ಬೆಳಿಗ್ಗೆ ಗ್ರಾಮದ ಭಕ್ತರಿಂದ ಹೊರೆಕಾಣಿಕೆ ಸಮರ್ಪಣೆ ನಡೆಯಿತು.
ವಳಕಡಮ ಭಜನಾ ಮಂದಿರ, ಕೊನೆಮಜಲು ಭಜನಾ ಮಂದಿರ, ಆನೆಗುಂಡಿ ದುಗಲಾಯ ದೈವಸ್ಥಾನ, ಶಾಖೆಪುರ ಮೈದಾನದಲ್ಲಿ ಹೊರೆ ಕಾಣಿಕೆ ಒಟ್ಟುಸೇರಿಸಿ ದೈವಸ್ಥಾನಕ್ಕೆ ತರಲಾಯಿತು. ಗ್ರಾಮದ ಭಕ್ತರು ಅಡಿಕೆ, ತೆಂಗಿನಕಾಯಿ, ಸೀಯಾಳ, ಬಾಳೆಗೊನೆ, ಅಕ್ಕಿ, ತರಕಾರಿ ಸಹಿತ ವಿವಿಧ ವಸ್ತುಗಳನ್ನು ತಂದು ದೈವಸ್ಥಾನಕ್ಕೆ ಸಮರ್ಪಿಸಿದರು. ದೈವಸ್ಥಾನದಲ್ಲಿ ಹೊರೆಕಾಣಿಕೆ ಸಂಗ್ರಹಿಸಿ ಪ್ರಾರ್ಥನೆ ನೆರವೇರಿಸಿ ಆರತಿ ಬೆಳಗಲಾಯಿತು.
ದೈವಸ್ಥಾನದ ಆಡಳಿತ ಸಮಿತಿ ಗೌರವಾಧ್ಯಕ್ಷರಾದ ಕೆ.ಶ್ರೀನಿವಾಸ ರಾವ್, ವೀರಪ್ಪ ದಾಸಯ್ಯ ಪಾಣಿಗ, ಅಧ್ಯಕ್ಷರಾದ ಶೀನಪ್ಪ ಗೌಡ ವಳಕಡಮ, ಕಾರ್ಯದರ್ಶಿ ವಿನಯಕುಮಾರ್ ರೈ ಕೊಯಿಲಪಟ್ಟೆ, ಜೊತೆ ಕಾರ್ಯದರ್ಶಿ ಉಮೇಶ ನೂಜಿಮಾರು, ಉಪಾಧ್ಯಕ್ಷರಾದ ಕುಶಾಲಪ್ಪ ಬರೆಮೇಲು, ಕೋಶಾಧಿಕಾರಿ ಚೇತನ್ ಆನೆಗುಂಡಿ, ಕಾರ್ಯಕಾರಿ ಸಮಿತಿ ಸದಸ್ಯರಾದ ಯತೀಶ್ ಪುತ್ಯೆ, ಶಿವರಾಮ ಭಟ್ ಕೊಯಿಲತೋಟ, ಬೆಳಿಯಪ್ಪ ಮುಂಡೈಮಾರ್, ದಿನೇಶ ಊರಾಜೆ, ವಿಶ್ವನಾಥ ಪೆರ್ಲ, ಸೀತಾರಾಮ ವಳಕಡಮ, ರಮೇಶ ಪೆರ್ಲ, ಜಗನ್ನಾಥ ಶೆಟ್ಟಿ ಕಾರೆಗುಡ್ಡೆ, ಸುಂದರ ಮರುವದಗುರಿ, ಬಾಲಕೃಷ್ಣ ಬೇಂಗದಪಡ್ಪು, ಕೇಶವ ಪುತ್ಯೆ, ದಯಾನಂದ ದಾಸ್ ಪಾಣಿಗ, ಕುಂಞಣ್ಣ ಗೌಡ ಪುಣಿಕ್ಕೆತ್ತಡಿ, ಲಕ್ಷ್ಮಣ ಆನೆಗುಂಡಿ, ತಾರಾನಾಥ ನಡುಗುಡ್ಡೆ, ನೇಮೋತ್ಸವ ನಿರ್ವಹಣೆ ಸಮಿತಿ ಸಂಚಾಲಕ ಯದುಶ್ರೀ ಆನೆಗುಂಡಿ, ಕಾರ್ಯಾಲಯ ಸಮಿತಿ ಸಂಚಾಲಕ ಶಾಂತರಾಮ ಬೇಂಗದಪಡ್ಪು, ಹೊರೆಕಾಣಿಕೆ ಸಮಿತಿ ಸಂಚಾಲಕ ಶಶಿ ಪುತ್ಯೆ, ಸಹಸಂಚಾಲಕ ಕೊರಗಪ್ಪ ಮುಂಡ್ಯೆಮಾರ್ ಸಹಿತ ವಿವಿಧ ಉಪಸಮಿತಿಗಳ ಸಂಚಾಲಕರು, ಸಹಸಂಚಾಲಕರು, ಸದಸ್ಯರು, ಗ್ರಾಮಸ್ಥರು ಉಪಸ್ಥಿತರಿದ್ದರು.