ಪುತ್ತೂರು: ಕಳೆದು ಹೋದ ಮೊಬೈಲ್ ವೊಂದನ್ನು ಮಾಲಕರಿಗೆ ತಲುಪಿಸುವ ಮೂಲಕ ಮಾನವೀಯತೆ ಮೆರೆದ ಘಟನೆ ನಡೆದಿದೆ.
ಜ.6 ರಂದು ಪುತ್ತೂರು ಸರಕಾರಿ ಕಾಲೇಜಿನ ಉಪಪ್ರಾಂಶುಪಾಲರಾದ ಧರ್ಣಪ್ಪ ಗೌಡ ಅವರ ಮೊಬೈಲ್ ಪಡೀಲ್-ದರ್ಬೆ ಮಾರ್ಗ ಮಧ್ಯೆ ಕಳೆದು ಹೋಗಿದ್ದು, ಅವರು ತಕ್ಷಣ ಪುತ್ತೂರಿನ ಮಾರ್ಕ್ ಟೆಲಿಕಾಂ ಸಂಸ್ಥೆಯ ಮಾಲಕರಾದ ಶಶಿರಾಜ್ ರೈ ಅವರ ಬಳಿ ತಿಳಿಸಿದ್ದು, ಅವರು ರಿಟೇಲರ್ ಅಸೋಸಿಯೇಷನ್ ಗ್ರೂಪ್ ನಲ್ಲಿ ಈ ಬಗ್ಗೆ ವಿವರಣೆ ನೀಡಿದ್ದರು.
ಜ.7 ಮಾಷಲ್ ನಶಾತ್ ಎಂಬವರಿಗೆ ಮೊಬೈಲ್ ದೊರಕಿದ್ದು, ಅವರು ಮೊಬೈಲ್ ಅನ್ನು ಪುತ್ತೂರು ಎಂ.ಟಿ ರಸ್ತೆಯಲ್ಲಿರುವ ನ್ಯೂ ಸೆಲ್ ಸೈಟ್ ಸಂಸ್ಥೆಯ ಮಾಲಕ ಸಲ್ಮಾನ್ ಫಾರಿನ್ ಅವರಲ್ಲಿ ನೀಡಿದರು. ಬಳಿಕ ಮಾಲಕರಿಗೆ ಮೊಬೈಲ್ ಅನ್ನು ಹಸ್ತಾಂತರಿಸಿದರು. ಮೊಬೈಲ್ ರಿಟೈಲರ್ ಅಸೋಷಿಯೇಶನ್ ಮೂಲಕ ಕಳೆದು ಹೋದ ಮೊಬೈಲ್ ಕೈ ಸೇರಿದಂತಾಗಿದೆ.