ಪಟ್ಟೆ ವಿದ್ಯಾಸಂಸ್ಥೆಗಳ ಪ್ರತಿಭಾ ಪುರಸ್ಕಾರ,ಬಿಳ್ಕೋಡುಗೆ,ಅಭಿನಂದನಾ ಕಾರ್ಯಕ್ರಮ

0

ಬಡಗನ್ನೂರು: ಶ್ರೀ ಕೃಷ್ಣ ಹಿರಿಯ ಪ್ರಾಥಮಿಕ ಶಾಲೆ ಪಟ್ಟೆ ಮತ್ತು ಪ್ರತಿಭಾ ಪ್ರೌಢಶಾಲೆ ಪಟ್ಟೆ ಇದರ 2೦23 2024 ಸಾಲಿನ  ಪ್ರತಿಭಾ ಪುರಸ್ಕಾರ ಹಾಗೂ ದ್ವಿತೀಯ ದರ್ಜೆ ಸಹಾಯಕ ವಿಠಲ ಎಂ  ರವರಿಗೆ ಬೀಳ್ಕೊಡುಗೆ ಸಮಾರಂಭವು ಜ.7 ರಂದು ಪಟ್ಟೆ ವಿದ್ಯಾಸಂಸ್ಥೆಗಳ ಡಾ| ಬಾಲಕೃಷ್ಣ ಭಟ್ ರಂಗಮಂದಿರಲ್ಲಿ ನಡೆಯಿತು.

ಕಾರ್ಯಕ್ರಮವನ್ನು ವಿದ್ಯಾ ಸಂಸ್ಥೆಗಳ ಸಂಚಾಲಕ ನಾರಾಯಣ ಭಟ್ ಉದ್ಘಾಟಿಸಿ ಮಾತನಾಡಿ, ಸಂಸ್ಥೆಯು ಎಲ್ಲಾ ಮೂಲಭೂತ ಸೌಕರ್ಯಗಳ ಪೂರೈಸುವ ಮೂಲಕ ಪಾಠ ಮತ್ತು ಪಠ್ಯೇತರ ಚಟುವಟಿಕೆಗಳಿಗೆ ಜೊತೆಗೆ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡುವುದು ನಮ್ಮ ಉದ್ದೇಶವಾಗದೆ ಎಂದು ಹೇಳಿ ಶುಭ ಹಾರೈಸಿದರು.

ಬಡಗನ್ನೂರು ಗ್ರಾ.ಪಂ ಅಧ್ಯಕ್ಷೆ ಪುಷ್ಷಲತಾ ದೇವಕಜೆ ಮಾತನಾಡಿ, ಶಾಲಾ ವಾರ್ಷಿಕೋತ್ಸವ ಅಂದರೆ ಮಕ್ಕಳಿಗೆ ಸಂಭ್ರಮ ದಿನ ಮಕ್ಕಳ ಪ್ರತಿಭೆಯನ್ನು ಗುರುತಿಸಿ ಅನಾವರಣಗೊಳಿಸುವ ವೇದಿಕೆ ಇದಾಗಿದೆ.ಗುಣಮಟ್ಟದ ಶಿಕ್ಷಣ ಜೊತೆಗೆ ಕ್ರೀಡಾ ಕ್ಷೇತ್ರದಲ್ಲಿ ಮಕ್ಕಳನ್ನು ಪಳಗಿಸಿ ರಾಜ್ಯ ಮತ್ತು ರಾಷ್ಟ್ರ ಮಟ್ಟದ ಕ್ರೀಡಾಕೂಟದಲ್ಲಿ ಭಾಗವಹಿಸಿದ ಹೆಗ್ಗಳಿಕೆ ಪಾತ್ರವಾಗಿದೆ. ಗುಂಡು ಎಸೆತ ಸ್ಪರ್ಧೆಯಲ್ಲಿ ಸತತ ಎರಡು ಬಾರಿ ರಾಷ್ಟ್ರಮಟ್ಟದ ಕ್ರೀಡಾ ಕೂಟದಲ್ಲಿ ಭಾಗವಹಿಸಿ ಅಭಿನಂದಿಸಲ್ಪಟ್ಟ ತನುಶ್ರೀ ರೈ ಬಡಕ್ಕಾಯೂರು ಹಾಗೂ ಕರ್ತವ್ಯದಿಂದ ನಿವೃತ್ತಿ ಹೊಂದುತ್ತಿರುವ  ವಿಠಲ ಸುವರ್ಣರವರವರಿಗೆ ಶುಭ ಹಾರೈಸಿದರು.

ಪುತ್ತೂರು ಕ್ಷೇತ್ರ ಶಿಕ್ಷಣಾಧಿಕಾರಿ ಕಛೇರಿ ಬಿ.ಆರ್.ಪಿ  ರತ್ನಕುಮಾರಿ ಮಾತನಾಡಿ, ಗ್ರಾಮೀಣ ಪ್ರದೇಶಗಳಲ್ಲಿ ಒಂದು ಶಿಕ್ಷಣ ಸಂಸ್ಥೆಯನ್ನು ನಡೆಸುವುದು ಸುಲಭದ ಕೆಲಸವಲ್ಲ. ಸರ್ಕಾರಿ ಶಾಲೆಗೆ ಸರ್ಕಾರದಿಂದ ಅನುದಾನ ಬರುತ್ತಿರುತ್ತದೆ. ಶಿಕ್ಷಕರ ನೇಮಕಾತಿ ಮತ್ತು ಅರ್ಥಿಕ ವ್ಯವಸ್ಥೆ ಮಾಡುತ್ತಿದೆ ಆದರೆ ಖಾಸಗಿ ಶಾಲೆಗಳಲ್ಲಿ ಸಂಚಾಲಕರು ಮತ್ತು ಆಡಳಿತ ಮಂಡಳಿಯ ಉತ್ಸಾಹದಿಂದ ನಡೆಯುತ್ತವೆ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ  ಮೌಲ್ಯಯುತ ಶಿಕ್ಷಣದ ಜತೆಗೆ ಕ್ರೀಡಾ ಕ್ಷೇತ್ರಕ್ಕೆ ಹೆಚ್ಚು ಪ್ರೋತ್ಸಾಹ ನೀಡಿ ಗ್ರಾಮೀಣ ಪ್ರದೇಶದ ಬಡ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡುತ್ತಿರುವ ಉದ್ದೇಶದಿಂದ  ಈ ಸಂಸ್ಥೆಗೆ ಮಕ್ಕಳ ಸಂಖ್ಯೆ ಹೆಚ್ಚಳಕ್ಕೆ ಕಾರಣವಾಗಿದೆ. ಒಟ್ಟಿನಲ್ಲಿ ಈ ಸಂಸ್ಥೆಯ ಅಡಳಿತ ಮಂಡಳಿ ಮತ್ತು ಶಿಕ್ಷಕ ವೃಂದದ ಹೊಂದಾಣಿಕೆಯಿಂದ ನಡೆಯುವುದರಿಂದ ಇದು ಸಾಧ್ಯ ಎಂದರು.

ಕುಂಬ್ರ ಕ್ಲಸ್ಟರ್ ಸಂಪನ್ಮೂಲ ಅಧಿಕಾರಿ ಶಶಿಕಲಾ ಮಾತನಾಡಿ ಶುಭ ಹಾರೈಸಿದರು.ಪಟ್ಟೆ ವಿದ್ಯಾಸಂಸ್ಥೆಗಳ ಅಧ್ಯಕ್ಷ ವೇಣುಗೋಪಾಲ್  ಭಟ್ ಪಿ ರವರ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ನಮ್ಮ ಸಂಸ್ಥೆ ಅನುದಾನ ರಹಿತವಾಗಿರವ ಸಂದರ್ಭದಲ್ಲಿ ಸಮಾರು 5 ವರ್ಷಗಳ ಕಾಲ ಮುಖ್ಯ ಶಿಕ್ಷಕರಾಗಿ ಸೇವೆ ಸಲ್ಲಿಸಿದರು. ಅನುದಾನಿತ ಶಾಲಾ ಬಳಿಕ 2007 ರಿಂದ ದ್ವಿತೀಯ ದರ್ಜೆ ಸಹಾಯಕರಾಗಿ ಸುದೀರ್ಘ 25 ವರ್ಷಗಳ ಕಾಲ ಕರ್ತವ್ಯ ನಿರ್ವಹಿಸಿ ಎಲ್ಲರ ಪ್ರೀತಿಗೆ ಪಾತ್ರರಾಗಿದ್ದ ವಿಠಲ ಸುವರ್ಣ ರವರು  ನ.30  ನಿವೃತ್ತಿ ಹೊಂದಿದರು.  ಇವರ ಬಿಳ್ಕೋಡುಗೆ ಔಚಿತ್ಯ ಪೂರ್ಣವಾಗಿ ಮಾಡುವ ನಿಟ್ಟಿನಲ್ಲಿ ಪ್ರತಿಭಾ ಪುರಸ ಎಲ್ಲರ ಸಮೂಹದಲ್ಲಿ ಅಯೋಜಿಸಲಾಗಿದೆ. ಮಕ್ಕಳಲ್ಲಿರುವ ಪ್ರತಿಭೆಯನ್ನು ಗುರುತಿಸಿ ಪ್ರೋತ್ಸಾಹ ಮಾಡುವ ನಿಟ್ಟಿನಲ್ಲಿ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಆಯೋಜಿಸಲಾಗುತ್ತದೆ. ಮಕ್ಕಳು ಸಾಧನೆ ಮಾಡಬೇಕಾದರೆ  ಆ ಸಂಸ್ಥೆಯಲ್ಲಿ ಎಲ್ಲಾ ಮೂಲಭೂತ ಸೌಕರ್ಯ ಇರಬೇಕಾಗುತ್ತದೆ. ಗ್ರಾಮೀಣ ಪ್ರದೇಶದ ನಮ್ಮ ಸಂಸ್ಥೆಯಲ್ಲಿ ಕ್ರೀಡೆ ಸಂಬಂಧಿಸಿದಂತೆ ವಿಶಾಲವಾದ ಮೈದಾನವಿದೆ ಓದಲು ಗ್ರಂಥಾಲಯ , ವಾಚನಾಲಯ  ಸೌಲಭ್ಯಗಳ ಮೂಲಕ ಎಲ್ಲಾ ಮೂಲಭೂತ ಸೌಲಭ್ಯಗಳನ್ನು ಹೊಂದಿದೆ. ಅದರೆ ಆಂಗ್ಲ ಮಾಧ್ಯಮ ವ್ಯಾಮೋಹದಿಂದ ಮಕ್ಕಳ ದಾಖಲಾತಿ ಕಡಿಮೆಯಾಗುತ್ತಿದೆ. ದಾಖಾಲಾತಿ ನಿಯಮದಿಂದ ಶಿಕ್ಷಕ  ಒಂದು ಹುದ್ದೆ ಕೈತಪ್ಪಿಹೋದ ಬಗ್ಗೆ ಮನದಾಳದ ಮಾತನಾಡಿದರು.  

ವೇದಿಕೆಯಲ್ಲಿ ವಿದ್ಯಾ ಸಂಸ್ಥೆಗಳ ನಿರ್ದೇಶಕರಾದ  ಶಿವಪ್ರಸಾದ್ ಪಿ ,ನಹುಷ ಪಿ ವಿ  ಶಿರೀಷ್ ಪಿ ಬಿ . ಪ್ರತಿಭಾ ಪ್ರೌಢಶಾಲಾ ಎಸ್ ಡಿ ಎಂ ಸಿ ಅಧ್ಯಕ್ಷ  ಲಿಂಗಪ್ಪ ಗೌಡ ಮೋಡಿಕೆ, ಶ್ರೀಕೃಷ್ಣ ಹಿ.ಪ್ರಾ.ಶಾಲಾ ಎಸ್ ಡಿ ಎಂ ಸಿ ಅಧ್ಯಕ್ಷ  ಕೇಶವ ಪ್ರಸಾದ್ ನೀಲಗಿರಿ ಉಪಸ್ಥಿತರಿದ್ದರು.

ಕಾರ್ಯಕ್ರಮ ದಲ್ಲಿ ಮಾತ ಅರ್ಥ್ ಮೊರ್ಸ್ ಮಾಲಕ  ಮೋಹನ್ಸ್ ದಾಸ್ ರೈ ಕುಂಬ್ರ, ಕುಂಬ್ರ, ತುಷಾ ಡ್ರೆಸ್ಸ್ ಮಾಲಕ ಸುರೇಶ್ ಕುಮಾರ್ ಕುಂಬ್ರ, ಕ್ಲಸ್ಟರ್ ನಿವೃತ್ತ ಸಂಪನ್ಮೂಲ ವ್ಯಕ್ತಿ ವೈ.ಕೆ ನಾಯ್ಕ, ಪಡುಮಲೆ ಹಿ. ಪ್ರಾ.ಶಾಲಾ ನಿವೃತ್ತ ಮುಖ್ಯ ಶಿಕ್ಷಕ ನಾರಾಯಣ ಪಾಟಾಳಿ ಪಟ್ಟೆ, ಶ್ರೀಕೃಷ್ಣ ಹಿ.ಪ್ರಾ.ಶಾಲಾ ನಿವೃತ್ತ ಮುಖ್ಯ ಶಿಕ್ಷಕರಾದ ರಾಜಗೋಪಾಲ್ ಭಟ್, ಯಮೂನ ವೈ.ಕೆ ನಾಯ್ಕ, ಪೆರ್ಲಂಪ್ಪಾಡಿ ಷಣ್ಮುಖ ಸುಬ್ರಮಣ್ಯ ಶಾಲಾ ನಿವೃತ್ತ ಶಿಕ್ಷಕ ವಿಷ್ಣು ಭಟ್ ನೆಕ್ಕರೆ  ಹಾಗೂ ಸಂಸ್ಥೆಗಳ ಶಾಲಾಭಿವೃದ್ಧಿ ಸಮಿತಿ ಸದಸ್ಯರು ಮಕ್ಕಳ ಪೋಷಕರು ಅಂಗನವಾಡಿ ಕಾರ್ಯಕರ್ತರು  ಅಕ್ಷರದಾಸೋಹ ಸಿಬ್ಬಂದಿಗಳು, ಶ್ರೀಕೃಷ್ಣ ಯುವಕ ಮಂಡಲ ಸದಸ್ಯರು ಮತ್ತು ಮಕ್ಕಳು ಮತ್ತು ಊರಿನವರು ಉಪಸ್ಥಿತರಿದ್ದರು.

ಗೌರವ ಶಿಕ್ಷಕಿ ಪುಷ್ಪಲತಾ, ಜ್ಞಾನದೀಪ ಶಿಕ್ಷಕಿ ಮಮತ  ಹಿ. ಪ್ರಾ.ಶಾಲಾ ಬಹುಮಾನ ಪಟ್ಟಿ ವಾಚಿಸಿದರು. ಶ್ರೀಕೃಷ್ಣ ಹಿ.ಪ್ರಾ.ಶಾಲಾ ಮುಖ್ಯ ಶಿಕ್ಷಕ ರಾಜಗೋಪಾಲ್ ಭಟ್ ಹಿರಿಯ ಪ್ರಾಥಮಿಕ ಶಾಲಾ ವರದಿ ವಾಚಿಸಿದರು.ಆಂಗ್ಲ ಭಾಷಾ ಶಿಕ್ಷಕಿ  ಶೈಲೇಶ್ರೀ ಪ್ರೌಢಶಾಲಾ ಬಹುಮಾನ ಪಟ್ಟಿಯನ್ನು ವಾಚಿಸಿದರು.ಪ್ರೌಢಶಾಲಾ ಸಹ  ಶಿಕ್ಷಕಿ  ಭವಿತಾ ಅಭಿನಂದನಾ ಭಾಷಣವನ್ನು ಮಾಡಿದರು.ಹಿಂದಿ ಭಾಷಾ ಶಿಕ್ಷಕಿ ಜಯಶ್ರೀ ಅಭಿನಂದನಾ ಪತ್ರ ವಾಚಿಸಿದರು. ಪ್ರತಿಭಾ ಪ್ರೌಢಶಾಲಾ ಮುಖ್ಯ ಶಿಕ್ಷಕಿ ಸುಮನ ಪ್ರೌಢ ಶಾಲಾ ವಾರ್ಷಿಕ ವರದಿ ವಾಚಿಸಿದರು.ಪ್ರತಿಭಾ ಪ್ರೌಢಶಾಲಾ ಸಹ ಶಿಕ್ಷಕಿ ಪ್ರಿಯಾ ಕುಮಾರಿ ಸ್ವಾಗತಿಸಿದರು.ಶ್ರೀಕೃಷ್ಣ ಹಿ.ಪ್ರಾ.ಶಾಲಾ ಸಹ ಶಿಕ್ಷಕ ರಾಮಚಂದ್ರಪ್ಪ ವಂದಿಸಿದರು. ಪ್ರೌಢಶಾಲಾ ಸಹ ಶಿಕ್ಷಕ ವಿಶ್ವನಾಥ ಗೌಡ ಕಾರ್ಯಕ್ರಮ ನಿರೂಪಿಸಿದರು.

ಬೀಳ್ಕೊಡುಗೆ
ಸಂಸ್ಥೆಯಲ್ಲಿ ಸುದೀರ್ಘ 25 ವರ್ಷಗಳ ಕಾಲ ಕರ್ತವ್ಯ ನಿರ್ವಹಿಸಿ ನ.30 ರಂದು ನಿವೃತ್ತಿ ಹೊಂದಿರುವ ದ್ವಿತೀಯ ದರ್ಜೆ ಸಹಾಯಕ ವಿಠಲ ಎಂ ರವರಿಗೆ ಬೀಳ್ಕೊಡುಗೆ ಕಾರ್ಯಕ್ರಮ ನಡೆಯಿತು. ಸಂಸ್ಥೆಯ ಆಡಳಿತ ಮಂಡಳಿ ಅಧ್ಯಕ್ಷ ವೇಣುಗೋಪಾಲ ಭಟ್ ಪಿ, ಹಾಗೂ ಸಂಚಾಲಕ ನಾರಾಯಣ ಭಟ್ ಬಿ ರವರುಗಳು ವಿಠಲ ಸುವರ್ಣ ದಂಪತಿಗಳನ್ನು ಅಭಿನಂದಿಸಿದರು. 

ಅಭಿನಂದನಾ ಕಾರ್ಯಕ್ರಮ
ಪ್ರತಿಭಾ ಪ್ರೌಢಶಾಲಾ ದೈ.ಶಿ.ಶಿಕ್ಷಕ   ಮೋನಪ್ಪ ಎಂ.ಹಾಗೂ ರಾಷ್ಟ್ರಮಟ್ಟದ ಕ್ರೀಡಾಪಟು  ಕುಮಾರಿ ತನುಶ್ರೀ ರೈ ಅಭಿನಂದಿಸಲಾಯಿತು ಹಾಗೂ  2023-24ನೇ ಸಾಲಿನ ಎಸ್.ಎಸ್.ಎಲ್.ಸಿ. ಯಲ್ಲಿ ವಿಶಿಷ್ಟ ಶ್ರೇಣಿಯಲ್ಲಿ ಉತ್ತೀರ್ಣರಾದ ವಿದ್ಯಾರ್ಥಿಗಳನ್ನು ಗೌರವಿಸಲಾಯಿತು. 

ವಿಠಲ ಸುವರ್ಣರವರು ಮಾತನಾಡಿ, ನನ್ನ ಜೀವನ ಸಾರ್ಥಕವಾಗಿದೆ.1989 ರಲ್ಲಿ ಅನುದಾನ ರಹಿತ ಶಾಲೆಯಾಗಿತ್ತು. 1989ರಲ್ಲಿ ಸಮಾಜ ವಿಜ್ಞಾನ ಭಾಷಾ ಶಿಕ್ಷಕನಾಗಿ ಸೇರ್ಪಡೆಗೊಂಡು 2೦01 ರಿಂದ 2007ರ ತನಕ ಮುಖ್ಯ ಶಿಕ್ಷಕನಾಗಿ ಕರ್ತವ್ಯ ನಿರ್ವಹಿಸಿ ದ್ವಿತೀಯ ದರ್ಜೆ ಸಹಾಯಕ ಅನುದಾನಿತವಾದ ನಂತರ ನ.30 ರವರಿಗೆ ಪ್ರಾಮಾಣಿಕವಾಗಿ ಕೆಲಸ ಮಾಡಿ ನಿವೃತ್ತಿ ಹೊಂದಿದ್ದೇನೆ ಎಂಬುದು ಸಂತೋಷ ತಂದಿದೆ.ದ್ವಿತೀಯ ದರ್ಜೆ ಸಹಾಯಕನಾಗಿ ಕರ್ತವ್ಯ ನಿರ್ಹಿಸುವ ಸಂದರ್ಭದಲ್ಲೂ ತರಗತಿಯಲ್ಲಿ ಶಿಕ್ಷಕರು ಇಲ್ಲದೆ ಇರುವ ಸಮಯದಲ್ಲಿ ನಾನು ಕಲಿತ ವಿದ್ಯೆಯನ್ನು ಮಕ್ಕಳಿಗೆ ಹೇಳಿಕೊಡುವುದು ಮತ್ತು  ಮಕ್ಕಳೊಂದಿಗೆ ಬೆರಯುವುದು ನನಗೆ ಬಹಳ ಸಂತೋಷಕರ ವಿಚಾರ, ಈ ವಿದ್ಯಾಸಂಸ್ಥೆ  ನನಗೆ ಅನ್ನ ನೀಡಿದ ಸಂಸ್ಥೆ ಇದಾಗಿದ್ದು ಜೀವನದ ಕೊನೆಯ ತನಕ ಚಿರಋಣಿಯಾಗಿರುತ್ತೇನೆ ಎಂದು ಹೇಳಿದರು.

ಪಟ್ಟೆ ವಿದ್ಯಾಸಂಸ್ಥೆಗಳ ದೈಹಿಕ ಶಿಕ್ಷಣ ಶಿಕ್ಷಕ ಮೋನಪ್ಪ ಎಂ ರವರು ಅಭಿನಂದನೆ ಸ್ವೀಕರಿಸಿ ಮಾತನಾಡಿ, ಗ್ರಾಮೀಣ ಪ್ರದೇಶದ ಮಕ್ಕಳ ಸಾಧನೆ ಪಟ್ಟಣ ಪ್ರದೇಶದ ಶಾಲೆಗಿಂತ ಕಡಿಮೆ ಅಲ್ಲ.ನಮ್ಮ ಹೆಮ್ಮೆಯ ವಿದ್ಯಾರ್ಥಿನಿ ತನುಶ್ರೀ ರೈ ಸತತ ಎರಡು ಬಾರಿ ರಾಷ್ಟ್ರಮಟ್ಟದಲ್ಲಿ ಸ್ಪರ್ಧಿಸಿದ ಹೆಗ್ಗಳಿಕೆ ನಮ್ಮದಾಗಿದೆ.ಆಕೆಯನ್ನು ಗೌರವಿಸುವುದು ಇತರರಿಗೆ ಸ್ಫೂರ್ತಿದಾಯ ಮತ್ತು ನನನ್ನು ಅಭಿನಂದನೆ ಮಾಡಿರುವುದು ನನಗೆ ಜವಾಬ್ದಾರಿ ಹೆಚ್ಚು ಮಾಡಿದಾಗಿದೆ ಎಂದು ಹೇಳಿದರು.

LEAVE A REPLY

Please enter your comment!
Please enter your name here