ವಿಟ್ಲ: ಬೈಂದೂರಿನಲ್ಲಿ ನಡೆದ ಅಂತರ್ರಾಷ್ಟೀಯ ಮಟ್ಟದ ಓಪನ್ ಕರಾಟೆ ಚಾಂಪಿಯನ್ ಶಿಪ್ -2025 ಸ್ಪರ್ಧೆಯಲ್ಲಿ ಕಂಬಳಬೆಟ್ಟು ಜನಪ್ರಿಯ ಸೆಂಟ್ರಲ್ ಶಾಲೆಯ 5ನೇ ತರಗತಿ ವಿದ್ಯಾರ್ಥಿ ಮೊಹಮ್ಮದ್ ಅಮೀನ್ ಕುಮಿಟೆಯಲ್ಲಿ ದ್ವಿತೀಯ ಹಾಗೂ ಕಟಾದಲ್ಲಿ ತೃತೀಯ ಸ್ಥಾನ ಪಡೆದಿರುತ್ತಾರೆ.
ಮೊಹಮ್ಮದ್ ಅಮೀನ್ ಕಬಕದ ಉದ್ಯಮಿ ಮೊಹಮ್ಮದ್ ಅರ್ಷಾದ್ ಕೆ ಎಸ್ ಹಾಗೂ ಉಬೈದಾ ಬಾನು ದಂಪತಿಯ ಪುತ್ರರಾಗಿದ್ದಾರೆ. ಇವರಿಗೆ ವಿಟ್ಲದ ಕರಾಟೆ ಶಿಕ್ಷಕರಾದ ಸೆನ್ಸಾಯಿ ಮಾಧವ ಅಳಿಕೆ, ಸಹಶಿಕ್ಷಕರಾದ ದಿಲೀಪ್, ಸುರೇಶ್, ರೋಹಿತ್ ಎಸ್ ಏನ್, ನಿಖಿಲ್ ಕೆ ಟಿ, ಪವನ್, ಭವಿಷ್, ಸುದೀನ್ ಆಚಾರ್ಯರವರು ತರಬೇತಿ ನೀಡಿದ್ದಾರೆ.