ಕಾಣಿಯೂರು: ಕರ್ನಾಟಕ ರಾಜ್ಯ ಡಾ.ಗಂಗೂಬಾಯ್ ಹಾನಗಲ್ ಸಂಗೀತ ಮತ್ತು ಪ್ರದರ್ಶಕ ಕಲೆಗಳ ವಿಶ್ವವಿದ್ಯಾಲಯ ಮೈಸೂರು ಇವರು ನಡೆಸಿದ ಜೂನಿಯರ್ ಗ್ರೇಡ್ ಸಂಗೀತ ಪರೀಕ್ಷೆಯಲ್ಲಿ ಕಾಣಿಯೂರು ಪ್ರಗತಿ ವಿದ್ಯಾಸಂಸ್ಥೆಯ 6ನೇ ತರಗತಿ ವಿದ್ಯಾರ್ಥಿ ಧನುಷ್ ಕೆ ಡಿಸ್ಟಿಂಕ್ಷನ್ ನೊಂದಿಗೆ ತೇರ್ಗಡೆಯಾಗಿರುತ್ತಾರೆ.
ಪುತ್ತೂರಿನ ವಿದುಷಿ ಮಾಲಿನಿ ಕೃಷ್ಣಮೋಹನ್ ರವರ ಶಿಷ್ಯರಾದ ಇವರು ಕಡಬ ತಾಲೂಕಿನ ಚಾರ್ವಾಕದ ಕಾಸ್ಪಾಡಿ ಸತ್ಯನಾರಾಯಣ ಕಲ್ಲೂರಾಯ ಮತ್ತು ಕಲ್ಪನಾ ದಂಪತಿಗಳ ಪುತ್ರ.