ಕುವೆಂಪು ಜನ್ಮದಿನದ ಪ್ರಯುಕ್ತ “ಕನ್ನಡವೇ ಸತ್ಯ” ಕಾರ್ಯಕ್ರಮ

0

ಕವಿಗಳು ಸಾಹಿತ್ಯದ ವಿವಿಧ ಪ್ರಕಾರಗಳನ್ನು ಅಧ್ಯಯನ ಮಾಡಬೇಕು- ಶಾಂತಾ ಪುತ್ತೂರು

ಮಂಗಳೂರು: ಕುವೆಂಪುರವರ ಕೃತಿಗಳಲ್ಲಿ ಪರಿಸರ ಸೌಂದರ್ಯ ಕಾಣುತ್ತದೆ. ಹಾಗೆಯೇ ಪರಿಸರ ನಮ್ಮ ಕವನಗಳಿಗೆ ಸ್ಪೂರ್ತಿಯಾಗಬೇಕು. ಕುವೆಂಪುರವರು ಕಾದಂಬರಿಗಳು, ಕವನಸಂಕಲನ ,ವಿಮರ್ಶಾ ಸಂಕಲನ ,ಮಕ್ಕಳ ಪುಸ್ತಕಗಳು, ನಾಟಕಗಳು, ಆತ್ಮಕಥನ, ಶ್ರೀ ರಾಮಾಯಣ ದರ್ಶನಂ ಹೀಗೆ ಸಾಹಿತ್ಯದ ವಿವಿಧ ಪ್ರಕಾರಗಳನ್ನು ಬರೆಯುವುದರ ಮೂಲಕ ಕನ್ನಡ ಸಾಹಿತ್ಯ ಸಂಪತ್ತನ್ನು ಸಮೃದ್ಧಿಗೊಳಿಸಿದ್ದಾರೆ ಎಂದು ಸರಕಾರಿ ಪ್ರೌಢಶಾಲೆ ಕಬಕದ ಶಿಕ್ಷಕಿ ಶಾಂತಾ ಪುತ್ತೂರು ಹೇಳಿದರು.

ಅವರು ಕರ್ನಾಟಕ ಸಾಮಾಜಿಕ ಸಾಂಸ್ಕೃತಿಕ ಅಭಿವೃದ್ಧಿ ಪ್ರತಿಷ್ಠಾನ ಮಂಗಳೂರಿನ ಪುರಭವನದ ಎದುರಿನ ರಾಜಾಜಿ ಪಾರ್ಕಿನಲ್ಲಿ ಕುವೆಂಪು ಜನ್ಮದಿನದ ಪ್ರಯುಕ್ತ ಇತ್ತೀಚಿಗೆ ನಡೆದ “ಕನ್ನಡವೇ ಸತ್ಯ” ಕಾರ್ಯಕ್ರಮದಲ್ಲಿ ಶಾಂತಾ ಪುತ್ತೂರು ಕವಿಗೋಷ್ಠಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಕವಿಯಾದವನು ಸಾಹಿತ್ಯದ ವಿವಿಧ ಪ್ರಕಾರಗಳನ್ನು ಓದುವುದರೊಂದಿಗೆ ಬರೆಯುವುದನ್ನು ಅಭ್ಯಸಿಸಬೇಕು .ಸಂಪಾದಿಸಿದ ಜ್ಞಾನವನ್ನು ಸಾಹಿತ್ಯದ ಮೂಲಕ ಪ್ರಸಾರ ಮಾಡಬೇಕು ಎಂದರು.

ಕವಿಗೋಷ್ಠಿಯಲ್ಲಿ ಅನುರಾಧ ರಾಜೀವ ಸುರತ್ಕಲ್, ದೀಪಾ ಚಿಲಿಂಬಿ, ಅನಿತಾ ಶೆಣೈ,ಎಂ ಎಸ್. ವೆಂಕಟೇಶ ಗಟ್ಟಿ ವೀಣಾ ರಾವ್ ವಾಮಂಜೂರು, ಅನಾರ್ಕಲಿ ಸಲೀಂ ,ವ.ಉಮೇಶ್ ಕಾರಂತ್ ಮಂಗಳೂರು, ಬದ್ರುದ್ದೀನ್ ಕೂಳೂರು ಸುಖಲತಾ ಶೆಟ್ಟಿ ಪಚ್ಚನಾಡಿ, ಜುಲಿಯೆಟ್ ಪೆರ್ನಾಂಡಿಸ್ ,ನಿಶಾನ್ ಅಂಚನ್ ,ಜಯಾನಂದ ಪೆರಾಜೆ ಸ್ವರಚಿತ ಕವನ ವಾಚಿಸಿದರು.

ಶಿಕ್ಷಕಿ ಕುಸುಮ ಕೆ.ಆರ್ ಕಾರ್ಯಕ್ರಮ ಉದ್ಘಾಟಿಸಿದರು. ಕರ್ನಾಟಕ ಸಾಮಾಜಿಕ ಸಾಂಸ್ಕೃತಿಕ ಅಭಿವೃದ್ದಿ ಪ್ರತಿಷ್ಠಾನದ ಅಧ್ಯಕ್ಷೆ ರಾಣಿ ಪುಷ್ಪಲತಾದೇವಿ ಸಭಾಧ್ಯಕ್ಷತೆ ವಹಿಸಿದ್ದರು. ನಾಗೇಂದ್ರ, ಶಾಂತಾ ಕುಂಟಿನಿ, ಗಂಗಾಧರ ಗಾಂಧಿ ಮುಖ್ಯ ಅತಿಥಿಗಳಾಗಿದ್ದರು.

ವಿಶ್ವ ದಾಖಲೆ ನಿರ್ಮಿಸಿದ NSCDF ಅಧ್ಯಕ್ಷರಾದ ಗಂಗಾಧರ್ ಗಾಂಧಿ ಹಾಗೂ KSSAP ಅಧ್ಯಕ್ಷರಾದ ರಾಣಿ ಪುಷ್ಪಲತಾ ದೇವಿ ಬಳಗದವರಿಂದ ಸಂಗೀತ ರಸಸಂಜೆ ಕಾರ್ಯಕ್ರಮ ನಡೆಯಿತು. ಮಂಗಳೂರಿನ ವೈದ್ಯ ಬರಹಗಾರ ಡಾ.ಸುರೇಶ್ ನೆಗಳಗುಳಿ ಹೊಸಗನ್ನಡ ಪತ್ರಿಕೆ ಲೋಕಾರ್ಪಣೆ ಮಾಡಿದರು. ಹಿರಿಯ ಸಾಹಿತಿ ಪತ್ರಕರ್ತ ಜಯಾನಂದ ಪೆರಾಜೆ ಶುಭಾಶಯ ಮಾತುಗಳನ್ನಾಡಿದರು. ದೀಪಾ ಚಿಲಿಂಬಿ ಕಾರ್ಯಕ್ರಮ ನಿರೂಪಿಸಿದರು.

LEAVE A REPLY

Please enter your comment!
Please enter your name here