‘ಇಲ್ಲಗೊಂಜಿ ಗೇನೊದ ಬಂಡಾರ’ : ತುಳು ಅಕಾಡೆಮಿಯ ಮನೆ ಮನೆ ಗ್ರಂಥಾಲಯ ಅಭಿಯಾನಕ್ಕೆ ಪುತ್ತೂರಿನಲ್ಲಿ ಶನಿವಾರ ಚಾಲನೆ

0

ಮಂಗಳೂರು : ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯು ಮನೆ ಮನೆಯಲ್ಲಿ ತುಳು ಪುಸ್ತಕಗಳ ಗ್ರಂಥಾಲಯ ಆರಂಭಿಸುವ ಉದ್ದೇಶದಿಂದ ‘ಇಲ್ಲಗೊಂಜಿ ಗೇನೊದ ಬಂಡಾರ’ ಅಭಿಯಾನ ಆರಂಭಿಸಿದೆ.

ಈ ಅಭಿಯಾನಕ್ಕೆ ಶನಿವಾರ (ಜ.11) ಬೆಳಿಗ್ಗೆ 10.00 ಗಂಟೆಗೆ ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ ಅವರ ಪುತ್ತೂರಿನ ಕೋಡಿಂಬಾಡಿಯ ಮನೆಯಲ್ಲಿ‌ ಚಾಲನೆ ನೀಡಲಾಗುವುದು.

ತುಳು ಅಕಾಡೆಮಿ ಪ್ರಕಟಿಸಿರುವ ಕೃತಿಗಳು ಹಾಗೂ ಅಕಾಡೆಮಿಯ ಮಾರಾಟ ವಿಭಾಗದಲ್ಲಿರುವ ಇತರ ತುಳು ಕೃತಿಗಳನ್ನು ಈ ಸಂದರ್ಭದಲ್ಲಿ ಶಾಸಕರಿಗೆ ನಿಗದಿತ ದರಕ್ಕೆ ನೀಡಲಾಗುವುದು.

ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ತಾರಾನಾಥ್ ಗಟ್ಟಿ ಕಾಪಿಕಾಡ್ ಅವರು ಶಾಸಕ ಅಶೋಕ್ ಕುಮಾರ್ ರೈ ಅವರಿಗೆ ಪುಸ್ತಕ ಹಸ್ತಾಂತರಿಸುವರು.

‘ಇಲ್ಲಗೊಂಜಿ ಗೇನೊದ ಬಂಡಾರ’ (ಮನೆಗೊಂದು ಜ್ಞಾನ ಬಂಡಾರ) ಉದ್ಘಾಟನೆಯ ಸಂದರ್ಭದಲ್ಲಿ ಹಿರಿಯ ಸಾಹಿತಿ ನಾರಾಯಣ ರೈ ಕುಕ್ಕುವಳ್ಳಿ , ಪುತ್ತೂರು ಭೂ ನ್ಯಾಯ ಮಂಡಳಿ ಸದಸ್ಯರಾದ ಕೃಷ್ಞಪ್ರಸಾದ್ ಆಳ್ವ, ತುಳು ಅಕಾಡೆಮಿಯ ಸದಸ್ಯ ಕುಂಬ್ರ ದುರ್ಗಾ ಪ್ರಸಾದ್ ರೈ, ತುಳು ಅಕಾಡೆಮಿಯ ಮಾಜಿ ಸದಸ್ಯ ನಿರಂಜನ ರೈ ಮಠಂತಬೆಟ್ಟು ಭಾಗವಹಿಸುವರು.

LEAVE A REPLY

Please enter your comment!
Please enter your name here