ಜ.25ಕ್ಕೆ ಪುತ್ತೂರು ಕೋ ಓಪರೇಟೆವ್ ಟೌನ್ ಬ್ಯಾಂಕ್ ಚುನಾವಣೆ- ಸಹಕಾರ ಭಾರತಿಯ ಬಿಜೆಪಿ ಬೆಂಬಲಿತ ಅಭ್ಯರ್ಥಿಗಳು ಕಣಕ್ಕೆ

0

ಪುತ್ತೂರು: ಪುತ್ತೂರು ಕೋ ಓಪರೇಟಿವ್ ಟೌನ್ ಬ್ಯಾಂಕ್‌ನ ಆಡಳಿತ ಮಂಡಳಿ ನಿರ್ದೇಶಕರ ಆಯ್ಕೆಗೆ ಜ.25ರಂದು ನಡೆಯಲಿರುವ ಸಾಮಾನ್ಯ ಚುನಾವಣೆಗೆ ಸಂಬಂಧಿಸಿ ಸಹಕಾರ ಭಾರತಿಯ ಬಿಜೆಪಿ ಬೆಂಬಲಿತ ಅಭ್ಯರ್ಥಿಗಳು ಎಲ್ಲಾ ಸ್ಥಾನಗಳಲ್ಲೂ ಸ್ಪರ್ಧಿಸಲಿದ್ದಾರೆ.


ಜ.15ರಂದು ಬಿಜೆಪಿ ಕಚೇರಿಯಲ್ಲಿ ಮಾಜಿ ಶಾಸಕ ಸಂಜೀವ ಮಠಂದೂರು ಅವರು ಅಭ್ಯರ್ಥಿಗಳಿಗೆ ಮಾರ್ಗದರ್ಶನ ನೀಡಿದರು. ಅಭ್ಯರ್ಥಿಗಳಾದ ಟೌನ್ ಬ್ಯಾಂಕ್‌ನ ಈ ಹಿಂದಿನ ಅಧ್ಯಕ್ಷರಾಗಿದ್ದ ಕಿಶೋರ್ ಕೊಳತ್ತಾಯ, ರಾಮಚಂದ್ರ ಕಾಮತ್, ಚಂದ್ರಶೇಖರ್ ರಾವ್ ಬಪ್ಪಳಿಗೆ, ಕಿರಣ್ ಕುಮಾರ್ ರೈ, ಮಲ್ಲೇಶ್ ಕುಮಾರ್, ಗಣೆಶ್ ಕೌಕ್ರಾಡಿ, ಸೀಮಾ ಎಂ.ಎ, ಶ್ರೀಧರ ಗೌಡ ಕೆ, ಹರೀಶ್ ಬಿಜತ್ರೆ, ಶ್ರೀಧರ್ ಪಟ್ಲ ಕೆ, ಸುಜೀಂದ್ರ ಪ್ರಭು, ರಾಜು ಶೆಟ್ಟಿ, ವೀಣಾ ಅವರು ಚುನಾವಣೆ ಎದುರಿಸಲಿದ್ದಾರೆ.

ಬಿಜೆಪಿ ಕಚೇರಿಯಲ್ಲಿ ಹಿರಿಯರಾದ ಎಸ್ ಅಪ್ಪಯ್ಯ ಮಣಿಯಾಣಿ, ನಗರ ಮಂಡಲದ ಅಧ್ಯಕ್ಷ ಶಿವಕುಮಾರ್ ಪಿ.ಬಿ, ಪ್ರಧಾನ ಕಾರ್ಯದರ್ಶಿ ಅನಿಲ್ ತೆಂಕಿಲ, ಜಿಲ್ಲಾ ಕಾರ್ಯದರ್ಶಿ ವಿದ್ಯಾ ಗೌರಿ, ಶ್ರೀಧರ್ ಗೌಡ ಕಣಜಾಲು, ಮಣಿಕಂಠ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here