ಬಡಗನ್ನೂರು:ದೈವ ಸಂಕಲ್ಪದಿಂದ ನಿರ್ಮಾಣವಾದ ಕಾರಣಿಕ ಕ್ಷೇತ್ರದ ಜಾತ್ರೋತ್ಸವ ನಾಡಹಬ್ಬವಾಗಿ ಮೂಡಿಬರಲಿ ಎಂದು ಮಂಗಳೂರು ಲೋಕಸಭಾ ಕ್ಷೇತ್ರದ ಮಾಜಿ ಸಂಸದ ನಳಿನ್ ಕುಮಾರ್ ಕಟೀಲು ಹೇಳಿದರು.
ಅವರು ಮಾ.1 ರಿಂದ 5 ರ ತನಕ ನಡೆಯುವ ದೇಯಿ ಬೈದೆತಿ ಕೋಟಿ ಚೆನ್ನಯ ಮೂಲಸ್ಥಾನ ಕ್ಷೇತ್ರಾಡಳಿತ ಸಮಿತಿ ಶ್ರೀ ಕ್ಷೇತ್ರ ಗೆಜ್ಜೆಗಿರಿ ,ಇದರ ವರ್ಷಾವಧಿ ಜಾತ್ರಾ ಮಹೋತ್ಸವ ಆಮಂತ್ರಣ ಪತ್ರಿಕೆ ಬಿಡುಗಡೆಗೊಳಿಸಿ, ಮಾತನಾಡಿದರು.
ಶ್ರೀ ಕ್ಷೇತ್ರ ಗೆಜ್ಜೆಗಿರಿ ದೈವ ಸಂಕಲ್ಪದಿಂದ ನಿರ್ಮಾಣವಾದ ಕಾರಣಿಕ ಕ್ಷೇತ್ರ.ಇಲ್ಲಿನ ಬ್ರಹ್ಮಕಲಶ ಒಂದು ಇತಿಹಾಸ ನಿರ್ಮಾಣ ಮಾಡಿದೆ ಅದೆ ರೀತಿ ಪುರಾತನ ಇತಿಹಾಸ ಹೊಂದಿರುವ ದೈವಸ್ಥಾನದ ಮಡಿಲು ಸೇವೆ ಸಂಕಲ್ಪದ ಹೊಸ ಯೋಜನೆ ಮತ್ತು ಯೋಚನೆ ಮೂಲಕ ಮತ್ತೊಮ್ಮೆ ಇತಿಹಾಸ ನಿರ್ಮಾಣ ಆಗಲಿ. ಮದ್ದು ಕೊಟ್ಟು ದೈವತ್ವ ಪಡೆದ ಕ್ಷೇತ್ರ ಇದಾಗಿದೆ. ಇಲ್ಲಿನ ಜಾತ್ರೆಯು ತುಳುನಾಡಿನ ನಾಡಹಬ್ಬವಾಗಿ ಜನಮಾನಸದಲ್ಲಿ ಉಳಿಯುವಂತಾಗಲಿ. ನಮ್ಮ ಸಹಕಾರ ಸದಾ ಇದೆ ಎಂದು ಹೇಳಿ ಶುಭ ಹಾರೈಸಿದರು.
ಪುತ್ತೂರು ವಿಧಾನ ಸಭಾ ಕ್ಷೇತ್ರದ ಮಾಜಿ ಶಾಸಕ ಸಂಜೀವ ಮಠಂದೂರು ಮಾತನಾಡಿ, ನಾಗರಾಧನೆ ಮತ್ತು ಭೂತರಾಧನೆಯೊಂದಿಗೆ ಕೋಟಿ ಚೆನ್ನಯರು ಸೇರುತ್ತಾರೆ. ಕೋಟಿ ಚೆನ್ನರು ಇಲ್ಲದ ತುಳುನಾಡು ಇಲ್ಲ ದೇವಿಬೈದೇತಿ ಅಂಶವುಳ್ಳ ಕೋಟಿ ಚೆನ್ನಯರ ಕ್ಷೇತ್ರದ ಜಾತ್ರೆಯು ಒಂದು ಸಮುದಾಯದ ಜಾತ್ರೆಯಾಗದೆ ತುಳುನಾಡಿನ ಇಡೀ ಸಮಾಜದ ಜಾತ್ರೆಯಾಗಬೇಕು ಮತ್ತು ಹಿಂದೂ ಸಮಾಜದ ಜಾತ್ರೆಯಾಗಿ ಪರಿವರ್ತನೆಯಾಗಬೇಕು. ಮಡಿಲು ಕಾರ್ಯಕ್ರಮ ಮೂಲಕ ಮತ್ತೊಮ್ಮೆ ಶ್ರದ್ಧೆ ಭಕ್ತಿ ಮೂಲಕ ಜನರನ್ನು ಆಕರ್ಷಿಸಿಸುವಂತ ಕೆಲಸ ಆಗಲಿ ಎಂದರು.
ಯುಗ ಪುರುಷರ ಪ್ರೇರಣೆಯಿಂದ ಕ್ಷೇತ್ರ ಅಭಿವೃದ್ಧಿ ಸಾಧ್ಯ: ಹೇಮನಾಥ ಶೆಟ್ಟಿ
ಕ್ಷೇತ್ರದಲ್ಲಿ ನಡೆಯುವ ಮುಂದಿನ ಜಾತ್ರೋತ್ಸವ ಒಂದು ವಿಶಿಷ್ಟ ರೀತಿಯಲ್ಲಿ ನಡೆಯುವ ನಿಟ್ಟಿನಲ್ಲಿ ಮಹಿಳೆಯರಿಗೆ ಮಡಿಲ ಸೇವೆ ಹೊಸ ಯೋಚನೆ ಯೋಜನೆ ಯಶಸ್ವಿಯಾಗಿ ನಡೆಯುದಕ್ಕೆ ಮನುಷ್ಯ ಪ್ರಯತ್ನ ಮತ್ತು ದೈವ, ದೇವರ ಪ್ರೇರಣೆಯಿಂದ ಸಾಧ್ಯ ಎಂದು ಹೇಳಿದರು.
ಗೌರವಾಧ್ಯಕ್ಷ ಪೀತಾಂಬರ ಹೆರಾಜೆ ಮಾತನಾಡಿ, ಗೆಜ್ಜೆಗಿರಿ ಜಾತ್ರೆ ತುಳುನಾಡಿನ ಜಾತ್ರೆ ಇದು ವಿಶಿಷ್ಟ ರೀತಿಯಲ್ಲಿ ಯಶಸ್ವಿಯಾಗಿ ನಡೆಯಲಿ, ಕ್ಷೇತ್ರದಲ್ಲಿ ಹಲವಾರು ಪವಾಡಗಳು ನಡೆದಿದೆ ಇಲ್ಲಿ ರಾಜರಾಜೇಶ್ವರಿ ವಂಶದಲ್ಲಿ ಐತಿಹಾಸಿಕ ಶಕ್ತಿ ದೇವಿ ಸ್ವರೂಪಿ ತಾಯಿ ದೆಯಿಬೈದೆತಿ ಕ್ಷೇತ್ರವಾದುದರಿಂದ ಇಲ್ಲಿ ಮಡಿಲಕ್ಕಿ ವಿಶಿಷ್ಟ ಸೇವೆ ಅಗತ್ಯ ಈ ಉತ್ತರ ಕನ್ನಡ ಜಿಲ್ಲೆ ಹೊರತುಪಡಿಸಿ ಉಳಿದ ಯಾವ ಭಾಗದಲ್ಲೂ ಈ ಸೇವೆ ಇಲ್ಲ. ಇದೊಂದು ವಿಶಿಷ್ಟ ರೀತಿಯ ಸೇವೆ ಇದು ಯಾವುದೇ ಜಾತಿಗೆ ಸೀಮಿತವಾಗಿಲ್ಲ ಎಲ್ಲರಿಗೂ ಈ ಸೇವೆಯ ಸಲ್ಲಿಸಲು ಅವಕಾಶವಿದೆ ಎಂದು ಹೇಳಿದರು.
ವಿಶ್ವ ಹಿಂದೂ ಪರಿಷತ್ ಜಿಲ್ಲಾಧ್ಯಕ್ಷ ಶರಣ್ ಪಂಪ್ವೆಲ್,ಬಿಜೆಪಿ ಜಿಲ್ಸಾಧ್ಯಕ್ಷ ಸತೀಶ್ ಕುಂಪಲ,ಯುವವಾಹಿನಿ ಕೇಂದ್ರ ಸಮಿತಿ ಉಪಾಧ್ಯಕ್ಷೆ ವಿದ್ಯಾ ರಾಕೇಶ್ ಸಂದರ್ಭೋಚಿತ ಮಾತನಾಡಿ ಶುಭ ಹಾರೈಸಿದರು.
ಸಭೆಯು ಗೆಜ್ಜೆಗಿರಿ ಕ್ಷೇತ್ರಾಢಳಿತ ಸಮಿತಿ ಅಧ್ಯಕ್ಷ ರವಿ ಪೂಜಾರಿ ಚಿಲಿಂಬಿ ರವರ ಅಧ್ಯಕ್ಷತೆಯಲ್ಲಿ ಜ.14 ರಂದು ಶ್ರೀ ಕ್ಷೇತ್ರದಲ್ಲಿ ನಡೆಯಿತು.ವೇದಿಕೆಯಲ್ಲಿ ಗೌರವಾಧ್ಯಕ್ಷ ಜಯಂತ್ ನಡುಬೈಲು,ಮೊಕ್ತೇಸರ ಶ್ರೀಧರ ಪೂಜಾರಿ ಗೆಜ್ಜೆಗಿರಿ, ಉಪಾಧ್ಯಕ್ಷ ದೀಪಕ ಕೋಟ್ಯಾನ್ ಗುರುಪುರ, ಕೋಶಾಧಿಕಾರಿ ಮೋಹನ್ ದಾಸ್ ಬಂಗೇರ ವಾಮಂಜೂರು, ಸಚಿನ್ ರೈ ಪಾಪೆಮಜಲು ಉಪಸ್ಥಿತರಿದ್ದರು.
ಸಭೆಯಲ್ಲಿ ಚಂದ್ರಶೇಖರ್ ಉಚ್ಚಿಲ್, ನವೀನ್ ಸುವರ್ಣ ಸಜಿಪ, ನಾರಾಯಣ ಮಚ್ಚಿನ, ರಾಜೇಂದ್ರ ಚಿಲಿಂಬಿ, ಹರೀಶ್ ಕೆ ಪೂಜಾರಿ,ನಾಗೇಶ್ ಬೈಕಂಪಾಡಿ ಹಾಗೂ ವಿವಿಧ ಸಂಘ ಸಂಸ್ಥೆಗಳ ಅಧ್ಯಕ್ಷರು ಮತ್ತು ಊರಿನವರು ಉಪಸ್ಥಿತರಿದ್ದರು.ಕ್ಷೇತ್ರಾಢಳಿತ ಸಮಿತಿ ಕಾರ್ಯದರ್ಶಿ ಡಾ. ರಾಜಾರಾಂ ಉಪ್ಪಿನಂಗಡಿ,ಸ್ವಾಗತಿಸಿ ವಂದಿಸಿದರು. ಉಪಾಧ್ಯಕ್ಷ ಉಲ್ಲಾಸ್ ಕೋಟ್ಯಾನ್ ಕಾರ್ಯಕ್ರಮ ನಿರೂಪಿಸಿದರು