ಪುತ್ತೂರು: ಜ.10ರಂದು ಆರಂಭಗೊಂಡ ಈಶ್ವರಮಂಗಲ ಮಖಾಂ ಉರೂಸ್ ಜ.16ರಂದು ಸಮಾರೋಪಗೊಳ್ಳಲಿದೆ.
ಅಸ್ಸಯ್ಯದ್ ಝೈನುಲ್ ಆಬಿದೀನ್ ತಂಙಳ್ ಅಲ್ ಬುಖಾರಿ ಕುನ್ನುಂಗೈ ಉದ್ಘಾಟಿಸಲಿದ್ದು, ಈಶ್ವರಮಂಗಲ ಎಂಜೆಎಂ ಖತೀಬ್ ಅಸ್ಸಯ್ಯದ್ ಎನ್ಪಿಎಂ ಜಲಾಲುದ್ದೀನ್ ತಂಙಳ್ ಅಲ್ ಬುಖಾರಿ ದುವಾಶೀರ್ವಚನ ನೀಡಲಿದ್ದಾರೆ.
ಪ್ರಭಾಷಣಗಾರ ಶಫೀಕ್ ಬದ್ರಿ ಅಲ್ ಬಾಖವಿ ಮುಖ್ಯ ಪ್ರಭಾಷಣ ನಡೆಸಲಿದ್ದಾರೆ. ಹಲವು ಗಣ್ಯರು ಅತಿಥಿಗಳಾಗಿ ಭಾಗವಹಿಸಲಿದ್ದಾರೆ ಎಂದು ಸಂಘಟಕರು ತಿಳಿಸಿದ್ದಾರೆ.