ಪುತ್ತೂರು: ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯಲ್ಲಿ 2024-25ನೇ ಸಾಲಿನ ಗಾನ-ನೃತ್ಯ-ಯಕ್ಷ ಸಂಭ್ರಮದ ಪೋಷಕರ ಸಭೆಯಲ್ಲಿ ಈ ವರ್ಷದ ಪದಾಧಿಕಾರಿಗಳ ಪದಗ್ರಹಣ
ಕಾರ್ಯಕ್ರಮ ನಡೆಯಿತು.
ಪ್ರಸಕ್ತ ಸಾಲಿನ ಅಧ್ಯಕ್ಷರಾಗಿ ಶೃತಿ ವಿಸ್ಮಿತ್, ಕಾರ್ಯದರ್ಶಿಗಳಾಗಿ ಹರೀಶ್ ಆಚಾರ್ಯ, ಉಪಕಾರ್ಯದರ್ಶಿಯಾಗಿ ಗುಲಾಬಿ ಆಯ್ಕೆಯಾದರು. ಉಳಿದಂತೆ 10 ಪೋಷಕರು ಸದಸ್ಯರಾಗಿ ಆಯ್ಕೆಗೊಂಡರು.
ಫೆ.2 ರಂದು ಗಾನ-ನೃತ್ಯ-ಯಕ್ಷ ಸಂಭ್ರಮ ಕಾರ್ಯಕ್ರಮ ನಡೆಯುವ ಬಗ್ಗೆ ಶಾಲಾ ಮುಖ್ಯಶಿಕ್ಷಕಿ ಆಶಾ ಬೆಳ್ಳಾರೆಯವರ ಸಮ್ಮುಖದಲ್ಲಿ ನಿರ್ಣಯಿಸಲಾಯಿತು.