ಪುತ್ತೂರು: ಅರಿಯಡ್ಕ ಗ್ರಾಮದ ಮಜ್ಜಾರಡ್ಕದಲ್ಲಿರುವ ಶ್ರೀ ವಿಷ್ಣುಮೂರ್ತಿ ದೈವಸ್ಥಾನದಲ್ಲಿ ನಡೆಯುವ ಶ್ರೀ ವಿಷ್ಣುಮೂರ್ತಿ ದೈವದ ಒತ್ತೆಕೋಲವು ಮಾ.9 ರಂದು ನಡೆಯಲಿದ್ದು ಇದರ ಆಮಂತ್ರಣ ಪತ್ರಿಕೆಯ ಬಿಡುಗಡೆ ಕಾರ್ಯಕ್ರಮವು ವಿಷ್ಣುಮೂರ್ತಿ ಸನ್ನಿಧಿಯಲ್ಲಿ ಜ.16 ರಂದು ನಡೆಯಿತು.
ಈ ಸಂದರ್ಭದಲ್ಲಿ ಸಮಿತಿಯ ಅಧ್ಯಕ್ಷರಾದ ಸತೀಶ್ಚಂದ್ರ ರೈ ಅರಿಯಡ್ಕ, ಉಪಾಧ್ಯಕ್ಷರಾದ ಎ.ಕೆ ಜಯರಾಮ ರೈ, ಪ್ರಧಾನ ಕಾರ್ಯದರ್ಶಿ ಸಾರ್ಥಕ್ ರೈ, ಕೋಶಾಧಿಕಾರಿ ನರಸಿಂಹ ಪೂಂಜಾ, ಸದಸ್ಯರಾದ ಮುರಳೀಧರ ರೈ ಬೆದ್ರುಮಾರ್, ರಾಜೇಶ್ ಮಣಿಯಾಣಿ, ಸುಬ್ರಹ್ಮಣ್ಯ ಭಟ್, ತಿಮ್ಮಪ್ಪ ಪೂಜಾರಿ, ಬಾಲಕೃಷ್ಣ ಗೌಡ, ನಾರಾಯಣ ಪಾಟಾಳಿ, ಮೋನಪ್ಪ ರೈ ಸೇರಿದಂತೆ ಹಲವರು ಉಪಸ್ಥಿತರಿದ್ದರು.