ಪುತ್ತೂರು: ಸರ್ವೆ ಗ್ರಾಮದ ಎಲಿಯ ಶ್ರೀ ವಿಷ್ಣುಮೂರ್ತಿ ದೇವಸ್ಥಾನದ ವ್ಯವಸ್ಥಾಪನ ಸಮಿತಿಯ ಮುಂದಿನ ಮೂರು ವರ್ಷದ ಅವಧಿಗೆ ನೂತನ ಸದಸ್ಯರನ್ನು ನೇಮಕಗೊಳಿಸಿ ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮಾದಾಯ ದತ್ತಿಗಳ ಇಲಾಖೆಯ ಸಹಾಯಕ ಆಯುಕ್ತರು ಹಾಗೂ ಜಿಲ್ಲಾ ಧಾರ್ಮಿಕ ಪರಿಷತ್ನ ಸದಸ್ಯ ಕಾರ್ಯದರ್ಶಿ ಆದೇಶಿಸಿದ್ದಾರೆ.
ಪ್ರಧಾನ ಅರ್ಚಕ ನಾಗೇಶ ಕಣ್ಣಾರಾಯ ಎಲಿಯ, ಪ.ಜಾತಿಯಿಂದ ಗಣೇಶ ನೇರೋಳ್ತಡ್ಕ, ಮಹಿಳಾ ಸ್ಥಾನದಿಂದ ಸುನೀತ ರೈ ಸೊರಕೆ, ಯಶೋಧ ನೆಕ್ಕಿಲು, ಸಾಮಾನ್ಯದಿಂದ ಚಂದ್ರಶೇಖರ ಎನ್.ನೆಕ್ಕಿಲು, ಎಸ್.ಆನಂದ ರಾವ್ ನೆಕ್ಕಿಲು, ರಾಧಾಕೃಷ್ಣ ರೈ ಚಾವಡಿ, ಪ್ರವೀಣ್ ಪ್ರಭು ಕೆ ನೇರೋಳ್ತಡ್ಕ, ಉದಯ ಕುಮಾರ್ ರೈ ಬಾಕುಡರವರನ್ನು ಸಮಿತಿ ಸದಸ್ಯರನ್ನಾಗಿ ನೇಮಕಗೊಳಿಸಲಾಗಿದೆ.