ಪುತ್ತೂರು: ಕರ್ನಾಟಕ ರಾಜ್ಯ ಡಾ. ಗಂಗೂಬಾಯಿ ಹಾನಗಲ್ ಸಂಗೀತ ಮತ್ತು ಪ್ರದರ್ಶಕ ಕಲೆಗಳ ವಿಶ್ವವಿದ್ಯಾಲಯ ಮೈಸೂರು ಇವರು ನಡೆಸಿದ ಭರತ ನಾಟ್ಯ ಜೂನಿಯರ್ ಗ್ರೇಡ್ ಪರೀಕ್ಷೆಯಲ್ಲಿ ಅನುಷಾ ಡಿಸ್ಟಿಂಕ್ಷನ್ನಲ್ಲಿ ತೇರ್ಗಡೆ ಹೊಂದಿದ್ದಾರೆ.
ಅನುಷಾ ಕುಂಬ್ರದ ಬೃಂದಾವನ ನಾಟ್ಯಾಲಯದ ಗುರುಗಳಾದ ನೃತ್ಯ ವಿದುಷಿ ರಶ್ಮಿ ದೀಲಿಪ್ ರೈ ಇವರ ಶಿಷ್ಯೆ. ಇವರು ಪ್ರಸ್ತುತ ಕೆಯ್ಯೂರಿನ ಕೆಪಿಎಸ್ ಶಾಲೆಯಲ್ಲಿ 8ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ.
ಈಕೆ ಕೆದಂಬಾಡಿ ಗ್ರಾಮದ ಕೊಡಿಯಡ್ಕ ನಿವಾಸಿ ಚಂದ್ರಶೇಖರ ಹಾಗೂ ಹೇಮಲತಾ ದಂಪತಿಯ ಪುತ್ರಿ.