ಜ.19: ರೋಟರಿ ಪುತ್ತೂರಿನಿಂದ ಕ್ರಿಸ್ಮಸ್, ಹೊಸ ವರ್ಷಾಚರಣೆ, ಡೈಮಂಡ್ ಜ್ಯುಬಿಲಿ ಉದ್ಘಾಟನೆ

0

ಪುತ್ತೂರು: ಅಂತರ್ರಾಷ್ಟ್ರೀಯ ರೋಟರಿ ಜಿಲ್ಲೆ 3181, ವಲಯ ಐದರ ರೋಟರಿ ಕ್ಲಬ್ ಪುತ್ತೂರು ನಿಂದ ಕ್ರಿಸ್ಮಸ್, ಹೊಸ ವರ್ಷಾಚರಣೆ ಹಾಗೂ ಕ್ಲಬ್ ನ ವಜ್ರಮಹೋತ್ಸವ ವರ್ಷ (ಡೈಮಂಡ್ ಜ್ಯುಬಿಲಿ)ದ ಉದ್ಘಾಟನೆಯು ಜ.19 ರಂದು ಬೊಳ್ವಾರು ಮಹಾವೀರ ವೆಂಚರ್ಸ್ ನ ಹವಾನಿಯಂತ್ರಿತ ಸಭಾಂಗಣದಲ್ಲಿ ಸಂಜೆ ಜರಗಲಿದೆ.

ರೋಟರಿ ಜಿಲ್ಲಾ ಗವರ್ನರ್ ವಿಕ್ರಂ ದತ್ತ ವಜ್ರಮಹೋತ್ಸವ ವರ್ಷವನ್ನು ಉದ್ಘಾಟಿಸಲಿದ್ದಾರೆ. ಗೌರವ ಅತಿಥಿಗಳಾಗಿ ಉಪ್ಪಿನಂಗಡಿ ಜೊಸ್ಸೀಸ್ ಆಯುರ್ವೇದ ಆಸ್ಪತ್ರೆಯ ವೈದ್ಯ ಡಾ.ಸುಪ್ರೀತ್ ಜೋಯಲ್ ಲೋಬೊ, ರೋಟರಿ ವಲಯ ಐದರ ಅಸಿಸ್ಟೆಂಟ್ ಗವರ್ನರ್ ಡಾ.ಹರ್ಷಕುಮಾರ್ ರೈರವರು ಭಾಗವಹಿಸಲಿದ್ದಾರೆ ಎಂದು ಕ್ಲಬ್ ಅಧ್ಯಕ್ಷ ಡಾ.ಶ್ರೀಪತಿ ರಾವ್, ಕಾರ್ಯದರ್ಶಿ ದಾಮೋದರ್ ಕೆ.ಎ, ಡೈಮಂಡ್ ಜ್ಯುಬಿಲಿ ಚೇರ್ಮನ್ ಬಲರಾಮ ಆಚಾರ್ಯ, ಸಂಯೋಜಕ ಪಿಡಿಜಿ, ಡಾ.ಭಾಸ್ಕರ್ ಎಸ್, ನಿಯೋಜಿತ ಅಧ್ಯಕ್ಷ ಡಾ.ಶ್ರೀಪ್ರಕಾಶ್ ಬಿ, ಕಾರ್ಯದರ್ಶಿ ಸುಬ್ಬಪ್ಪ ಕೈಕಂಬ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here