ಜ.19 :ಪೆರುವಾಜೆ ದೇವಾಲಯದಲ್ಲಿ “ಮಲ್ಲಿಗೆ ಶಯನೋತ್ಸವ”

0

ಭಕ್ತರಿಗೆ ಮಲ್ಲಿಗೆ ಸಮರ್ಪಣೆಗೆ ಅವಕಾಶ

ದೇವಾಲಯದ ಆವರಣದಲ್ಲೇ ಸಿಗಲಿದೆ ಮಲ್ಲಿಗೆ

  • ಪುತ್ತೂರು: ಇತಿಹಾಸ ಪ್ರಸಿದ್ಧ ಮಾಗಣೆ ಕ್ಷೇತ್ರ ಪೆರುವಾಜೆ ಶ್ರೀ ಜಲದುರ್ಗಾದೇವಿ ದೇವಾಲಯದ ವಾರ್ಷಿಕ ಜಾತ್ರೆ ಪ್ರಯುಕ್ತ ಬ್ರಹ್ಮರಥೋತ್ಸವ ಜ.19 ರಂದು ನಡೆಯಲಿದೆ.

ಇದೇ ದಿನ ರಾತ್ರಿ ಮಲ್ಲಿಗೆ ಶಯನೋತ್ಸವ ಎಂಬ ವಿಶಿಷ್ಟ ಸೇವೆ ಸಮರ್ಪಣೆಗೊಳ್ಳಲಿದೆ.‌ ಭಕ್ತರು ಮಲ್ಲಿಗೆ ಸಮರ್ಪಿಸಲು ಅವಕಾಶ ಇದ್ದು, ದೇವಾಲಯದ ವಠಾರದಲ್ಲಿ ಮಲ್ಲಿಗೆ ಪಡೆದುಕೊಳ್ಳಲು ವ್ಯವಸ್ಥೆ ಕಲ್ಪಿಸಲಾಗಿದೆ.

ಏನಿದು‌ ಶಯನೋತ್ಸವ..?
ಜ.19 ರಂದು ಶ್ರೀ ಕ್ಷೇತ್ರದಲ್ಲಿ ಜಲದುರ್ಗೆಗೆ ಶಯನೋತ್ಸವ ನಡೆಯಲಿದೆ. ಶಯನವೆಂದರೆ ಹಾಸಿಗೆ ಎಂದರ್ಥ. ಪೌರಾಣಿಕ ನಂಬಿಕೆಗಳ ಪ್ರಕಾರ ದುರ್ಗಾದೇವಿಯು ಮಲ್ಲಿಗೆ ಪ್ರಿಯಳು ಎಂಬ ಐತಿಹ್ಯವಿದೆ. ಇಷ್ಟಾರ್ಥ ಸಿದ್ದಿಗಾಗಿ ಭಕ್ತರು ಒಂದು ಚೆಂಡು ಮಲ್ಲಿಗೆಯನ್ನು ಶಯನೋತ್ಸವದ ಸಂದರ್ಭದಲ್ಲಿ ಶ್ರೀದೇವಿಗೆ ಸಮರ್ಪಿಸಿದರೆ ತನ್ನ ಮನದಲ್ಲಿರುವ ಅಭೀಷ್ಟ ನೆರವೇರುತ್ತದೆ ಎನ್ನುವ ಪ್ರತೀತಿಯಿದೆ. ಶಯನೋತ್ಸವಕ್ಕೆ ಸಮರ್ಪಿಸಿದ ಮಲ್ಲಿಗೆ ಹೂವಿನಲ್ಲಿ ಶ್ರೀದೇವಿಯು ಪವಡಿಸುತ್ತಾಳೆ ಎಂಬುವುದು ಭಕ್ತರ ನಂಬಿಕೆ. ಮಲ್ಲಿಗೆ ಸಮರ್ಪಣೆಯ ಪುಣ್ಯ ಕಾರ್ಯದಲ್ಲಿ ಭಕ್ತವೃಂದವು ಅತಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗಿಗಳಾಗಿ ಜಲದುರ್ಗೆಯ ಕೃಪೆಗೆ ಪಾತ್ರರಾಗುವ ಪುಣ್ಯ ಅವಕಾಶ ಭಕ್ತರ ಪಾಲಿಗೆ ದೊರೆತಿದೆ.




LEAVE A REPLY

Please enter your comment!
Please enter your name here