ದೆಹಲಿಯಲ್ಲಿ ನಡೆಯುವ ಗಣರಾಜ್ಯೋತ್ಸವಕ್ಕೆ ಅನ್ವಿತಾ ಸಾವಿತ್ರಿ ಭಟ್

0

ಪುತ್ತೂರು: ಪುತ್ತೂರು ಮೂಲದ ಪ್ರಸ್ತುತ ಬೆಂಗಳೂರು ನಿವಾಸಿ, ರಾಜಾಜಿನಗರದ ಶ್ರೀವಾಣಿ ವಿದ್ಯಾಕೇಂದ್ರದ 9ನೆ ತರಗತಿಯ ವಿದ್ಯಾರ್ಥಿನಿ, ಎನ್.ಸಿ.ಸಿ ಕೆಡೆಟ್ ಸಾರ್ಜೆಂಟ್ ಅನ್ವಿತಾ ಸಾವಿತ್ರಿ ಭಟ್ ಅವರು ದೆಹಲಿಯಲ್ಲಿ ನಡೆಯುವ ಗಣರಾಜ್ಯೋತ್ಸವ ಶಿಬಿರದಲ್ಲಿ ಭಾಗವಹಿಸಲು ಆಯ್ಕೆಯಾಗಿದ್ದಾರೆ.


ಕಳೆದ ಸಪ್ಟೆಂಬರಿನಿಂದ ನಾಲ್ಕು ತಿಂಗಳುಗಳ ಕಾಲ ನಡೆದ 7 ಹಂತದ ಕಠಿಣ ಆಯ್ಕೆ ಶಿಬಿರಗಳಲ್ಲಿ ಸಾಂಸ್ಕೃತಿಕ (ಮ್ಯಾಂಡೋಲಿನ್ ವಾದನ ಮತ್ತು ಗಾಯನ) ವಿಭಾಗದಲ್ಲಿ ಆಯ್ಕೆಗೊಂಡು ಪ್ರಸ್ತುತ ಡಿಸೆಂಬರ್ 28ರಿಂದ ಜನವರಿ 31ರವರೆಗೆ ನಡೆಯುತ್ತಿರುವ ದೆಹಲಿ ಶಿಬಿರದಲ್ಲಿ ಭಾಗವಹಿಸುತ್ತಿದ್ದಾರೆ.ಈಗಾಗಲೇ ಉಪರಾಷ್ಟ್ರಪತಿಗಳ ಭೇಟಿ , ಭೂಸೇನಾ ಮುಖ್ಯಸ್ಥರ ಭೇಟಿ , ವಾಯುಸೇನಾ ಮುಖ್ಯಸ್ಥರ ಭೇಟಿಯಲ್ಲಿ ಪಾಲ್ಗೊಂಡಿದ್ದಾರೆ.


ಅಲ್ಲದೆ ದೆಹಲಿಯಲ್ಲಿ ನಡೆದ ಆಯ್ಕೆ ಪ್ರಕ್ರಿಯೆಯಲ್ಲಿ ಆಯ್ಕೆಗೊಂಡು ಜನವರಿ 27ರಂದು ನಡೆಯುವ ಪ್ರಧಾನ ಮಂತ್ರಿಗಳ ರ್ಯಾಲಿಯ ಪಥಸಂಚಲನದಲ್ಲಿ ಕೂಡ ಭಾಗವಹಿಸುತ್ತಿರುವುದು ಹೆಮ್ಮೆಯ ಸಂಗತಿ.
ಇವರು ಪುತ್ತೂರು ನೆಹರೂನಗರ ಚಿತ್ರಕೂಟ ನಿವಾಸಿಗಳಾದ ದಿ.ರಾಮ ಭಟ್ ಹಾಗು ಸಾವಿತ್ರಿ ಭಟ್ ಅವರ ಮೊಮ್ಮಗಳು ಮತ್ತು ಪ್ರಸ್ತುತ ಬೆಂಗಳೂರು ನಿವಾಸಿಗಳಾದ ಮುರಳಿಕೃಷ್ಣ ಕುಕ್ಕುಪುಣಿ ಹಾಗು ಡಾ. ಚೈತ್ರಲಕ್ಷ್ಮಿ ಕಮ್ಮಜೆ ಇವರ ಸುಪುತ್ರಿ.

LEAVE A REPLY

Please enter your comment!
Please enter your name here