ಪುತ್ತೂರು: ಪುಣ್ಚಪ್ಪಾಡಿ ಗ್ರಾಮದ ಕಲಾಯಿ ಎಂಬಲ್ಲಿ ಶೋಭಾ ಮತ್ತು ಸದಾನಂದ ಆಳ್ವ ಕಲಾಯಿರವರು ನೂತನವಾಗಿ ನಿರ್ಮಿಸಿರುವ ಮನೆ ” ಅಮ್ಮ ನಿಲಯ” ಇದರ ಗೃಹ ಪ್ರವೇಶ ಜ. 19 ರಂದು ಜರಗಿತು.
ವೇದಮೂರ್ತಿ ಬ್ರಹ್ಮಶ್ರೀ ರಾಘವೇಂದ್ರ ಅಸ್ರಣ್ಣರ ನೇತ್ರತ್ವದಲ್ಲಿ ಶ್ರೀ ಗಣಪತಿ ಹೋಮ ಮತ್ತು ಶ್ರೀ ಸತ್ಯನಾರಾಯಣ ಪೂಜೆ ನಡೆಯಿತು. ಬಳಿಕ ಸಹ ಭೋಜನ ನೆರವೇರಿತು. ಶೋಭಾ ಮತ್ತು ಸದಾನಂದ ಆಳ್ವ ಕಲಾಯಿ ಮತ್ತು ಬಂಧುಗಳು ಅತಿಥಿಗಳನ್ನು ಸ್ವಾಗತಿಸಿದರು. ಸಮಾರಂಭದಲ್ಲಿ ಜನಪ್ರತಿನಿಧಿಗಳು, ವಿವಿಧ ಸಂಘಸಂಸ್ಥೆಗಳ ಮುಖಂಡರುಗಳು, ಬಂಧುಗಳು, ಊರ-ಪರವೂರ ಹಿತೈಷಿಗಳು ಭಾಗವಹಿಸಿದರು.