ಹಿಂದೂ ಧರ್ಮ ಶಿಕ್ಷಣ ಗ್ರಾಮ ಸಮಿತಿ ರಚನೆ : ತಾಲೂಕಿನ ಪ್ರಥಮ ಗ್ರಾಮ ಸಮಿತಿಗೆ ಕೆದಂಬಾಡಿಯಲ್ಲಿ ಚಾಲನೆ

0

ಪುತ್ತೂರು: ಪುತ್ತೂರು ತಾಲೂಕಿನಲ್ಲಿ ಶಾಲಾ ಮಕ್ಕಳಿಗೆ 3 ಹಂತದಲ್ಲಿ ನೀಡಲು ಉದ್ದೇಶಿಸಿರುವ ಹಿಂದೂ ಧಾರ್ಮಿಕ ಶಿಕ್ಷಣ ಯೋಜನೆಯಲ್ಲಿ ಮಹತ್ವದ ಮೈಲುಗಲ್ಲು ಸ್ಥಾಪಿಸಲಾಗಿದೆ. ಪ್ರತೀ ಗ್ರಾಮದಲ್ಲಿ ರಚನೆಯಾಗಲಿರುವ ಗ್ರಾಮ ಸಮಿತಿಗೆ ಕೆದಂಬಾಡಿ ಗ್ರಾಮದಲ್ಲಿ ಚಾಲನೆ ನೀಡಲಾಗಿದ್ದು, ತಾಲೂಕಿನ ಪ್ರಥಮ ಸಮಿತಿ ಅಸ್ತಿತ್ವಕ್ಕೆ ಬಂದಿದೆ. ಮುಂದಿನ ದಿನಗಳಲ್ಲಿ ತಾಲೂಕಿನಾದ್ಯಂತ ಗ್ರಾಮ ಸಮಿತಿಗಳ ರಚನೆ ನಡೆಯಲಿದೆ.


ಶ್ರೀ ಆದಿ ಶಂಕರಾಚಾರ್ಯರಿಂದ ಸ್ಥಾಪಿತವಾದ ಶೃಂಗೇರಿ ಶ್ರೀ ಶಾರದಾ ಪೀಠದ ಜಗದ್ಗುರುಗಳಾದ ಶ್ರೀ ಭಾರತೀ ತೀರ್ಥ ಸ್ವಾಮೀಜಿ ಮತ್ತು ಶ್ರೀ ವಿಧುಶೇಖರ ಸ್ವಾಮೀಜಿ ಅವರ ಮಾರ್ಗದರ್ಶನದಲ್ಲಿ ನಡೆಯುವ ಹಿಂದೂ ಧಾರ್ಮಿಕ ಶಿಕ್ಷಣಕ್ಕೆ ಶೃಂಗೇರಿ ಮಠದಿಂದಲೇ ಪಠ್ಯ ಪುಸ್ತಕ ಮತ್ತು ಶಿಕ್ಷಕ ತರಬೇತಿ ಕಾರ್ಯ ನಡೆಯಲಿದ್ದು, ಇದನ್ನು ಅನುಷ್ಠಾನಗೊಳಿಸಲು ಪುತ್ತೂರು ತಾಲೂಕು ಮಟ್ಟದ ಮೇಲುಸ್ತುವಾರಿ ಸಮಿತಿ ರಚನೆಯಾಗುತ್ತಿದೆ. ಇದೇ ವೇಳೆ ಪ್ರತೀ ಗ್ರಾಮ ಮಟ್ಟದಲ್ಲೂ ಸಮಿತಿ ರಚನೆಗೆ ಚಾಲನೆ ನೀಡಲಾಗಿದೆ.


ಕೆದಂಬಾಡಿಯಲ್ಲಿ ಪ್ರಥಮ ಪ್ರಯೋಗ
ಕೆದಂಬಾಡಿ ಗ್ರಾಮದಲ್ಲಿ ತಾಲೂಕಿನ ಮೊದಲ ಗ್ರಾಮ ಸಮಿತಿ ಭಾನುವಾರ ರಚನೆಯಾಗಿದೆ. ತಿಂಗಳಾಡಿ ಶ್ರೀ ದೇವತಾ ಭಜನಾ ಮಂದಿರದಲ್ಲಿ ನಡೆದ ಧರ್ಮಾಭಿಮಾನಿಗಳ ಸಭೆಯಲ್ಲಿ ಗ್ರಾಮ ಸಮಿತಿ ರಚಿಸಿ ಹಿಂದೂ ಧಾರ್ಮಿಕ ಶಿಕ್ಷಣವನ್ನು ಗ್ರಾಮದ ಮಕ್ಕಳಿಗೆ ನೀಡಲು ನಿರ್ಧರಿಸಲಾಯಿತು.


ದೇವತಾ ಭಜನಾ ಮಂದಿರದ ಅಧ್ಯಕ್ಷರಾದ ಜಯರಾಮ ರೈ ಮಿತ್ರಂಪಾಡಿ ಅಧ್ಯಕ್ಷತೆ ವಹಿಸಿದ್ದರು. ಸೀತಾರಾಮ ರೈ ಕೆದಂಬಾಡಿಗುತ್ತು ಪ್ರಾಸ್ತಾವಿಕವಾಗಿ ಮಾತನಾಡಿ, ಹಿಂದೂ ಧರ್ಮದಲ್ಲಿ ಉದಾತ್ತ ಸಂಸ್ಕೃತಿ, ಆಚಾರ ವಿಚಾರ, ನಂಬಿಕೆ, ಪದ್ಧತಿ, ಧಾರ್ಮಿಕ ಅಂಶಗಳಿದ್ದರೂ, ಇವುಗಳನ್ನು ನಮ್ಮ ಮಕ್ಕಳಿಗೆ ವ್ಯವಸ್ಥಿತವಾಗಿ ಕಲಿಸುವ ಮಾಧ್ಯಮವಿಲ್ಲದ ಕಾರಣ ಹಿಂದೂ ಮಕ್ಕಳು ಆಧುನಿಕತೆಯ ಸೆಳೆತಕ್ಕೆ ಸಿಕ್ಕಿ ಧರ್ಮದಿಂದ ದೂರವಾಗುತ್ತಿದ್ದಾರೆ. ಇದರ ಪ್ರಯೋಜನ ಇತರರು ಪಡೆಯುವಂತಾಗಿದೆ. ಇದನ್ನು ತಪ್ಪಿಸಿ ಹಿಂದೂ ಮಕ್ಕಳನ್ನು ಸುಸಂಸ್ಕೃತರನಗ್ನಾಗಿ ಮಾಡುವುದೇ ಧಾರ್ಮಿಕ ಶಿಕ್ಷಣದ ಗುರಿ ಎಂದರು. ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳ ಮುಖ್ಯಸ್ಥರಾದ ಸುಬ್ರಹ್ಮಣ್ಯ ನಟ್ಟೋಜ ಮಾತನಾಡಿ, ಧಾರ್ಮಿಕ ಶಿಕ್ಷಣ ನೀಡಲು ಶೃಂಗೇರಿ ಮಠದ ಗುರುಗಳೇ ಮುಂದೆ ನಿಂತಿರುವುದು ನಮ್ಮ ಸೌಭಾಗ್ಯ. ಪ್ರತೀ ಗ್ರಾಮದಲ್ಲಿ ಅಗತ್ಯ ಶಿಕ್ಷಕರನ್ನು ನೇಮಿಸಿ, ವಾರದಲ್ಲಿ ಕನಿಷ್ಠ ಒಂದು ತರಗತಿ ನೀಡಬೇಕು. ಗ್ರಾಮಸ್ಥರ ದೇಣಿಗೆಯಿಂದಲೇ ಶಿಕ್ಷಕರಿಗೆ ಗೌರವಧನ ನೀಡಬಹುದಾಗಿದೆ. ಭವಿಷ್ಯದ ಹಿಂದೂ ಸಮಾಜವನ್ನು ಸುಸಂಸ್ಕೃತಗೊಳಿಸುವ ಯೋಜನೆ ಇದು ಎಂದರು.


ಅಧ್ಯಕ್ಷರಾಗಿ ತಾರಾ ಬಳ್ಳಾಲ್ ಆಯ್ಕೆ
ಹಿಂದೂ ಧಾರ್ಮಿಕ ಶಿಕ್ಷಣ ಯೋಜನೆ ಕೆದಂಬಾಡಿ ಗ್ರಾಮ ಸಮಿತಿ ಅಧ್ಯಕ್ಷರಾಗಿ ತಾರಾ ಬಳ್ಳಾಲ್ ಬೀಡು, ಪ್ರಧಾನ ಕಾರ್ಯದರ್ಶಿಯಾಗಿ ಸುರೇಶ್ ಕುಮಾರ್, ಜತೆ ಕಾರ್ಯದರ್ಶಿಯಾಗಿ ಸುಜಾತಾ ಮುಳಿಗದ್ದೆ, ಸಂಘಟನಾ ಕಾರ್ಯದರ್ಶಿಯಾಗಿ ಪ್ರವೀಣ್ ಶೆಟ್ಟಿ ಮಠ ಮತ್ತು ಸೂರ್ಯಪ್ರಸನ್ನ ರೈ, ಕೋಶಾಧಿಕಾರಿಯಾಗಿ ವರುಣ್, ಸಂಚಾಲಕರಾಗಿ ಸೀತಾರಾಮ ರೈ ಕೆದಂಬಾಡಿಗುತ್ತು, ಸಹ ಸಂಚಾಲಕರಾಗಿ ಮೋಹನ್ ಶೆಟ್ಟಿ ಮಜಲಮೂಲೆ, ಗಂಗಾಧರ ಮುಳಿಗದ್ದೆ, ಮಾಧ್ಯಮ ಸಂಚಾಲಕರಾಗಿ ಸುಧಾಕರ ಸುವರ್ಣ ತಿಂಗಳಾಡಿ, ಗೌರವಾಧ್ಯಕ್ಷರಾಗಿ ಉಂಡೆಮನೆ ಶ್ರೀಕೃಷ್ಣ ಭಟ್, ಮಿತ್ರಂಪಾಡಿ ಜಯರಾಮ ರೈ, ಸುಭಾಷ್ ರೈ ಕಡಮಜಲು, ರಾಮಯ್ಯ ರೈ ತಿಂಗಳಾಡಿ, ಕೃಷ್ಣ ಕುಮಾರ್ ರೈ ಕೆದಂಬಾಡಿ ಗುತ್ತು, ಗೌರವ ಸಲಹೆಗಾರರಾಗಿ ಮಾದೋಡಿ ಭಾಸ್ಕರ ರೈ ನಂಜೆ, ಭಾಸ್ಕರ ಬಳ್ಳಾಲ್ ಕೆದಂಬಾಡಿ ಬೀಡು, ಜಯಾನಂದ ರೈ ಮಿತ್ರಂಪಾಡಿ, ಉಮೇಶ್ ರೈ ಮಿತ್ತೋಡಿ, ಉಪಾಧ್ಯಕ್ಷರಾಗಿ ರಾಮಯ್ಯ ಗೌಡ ಗುತ್ತು, ಶಶಿಧರ ಗೌಡ ಮಿತ್ತೋಡಿ, ಇಳಾ ದೇವಿಚರಣ್, ಕುಸುಮ ಬಾಳಯ, ಸದಸ್ಯರಾಗಿ ಸತೀಶ್ ರೈ ಗುತ್ತು, ರಾಧಾಕೃಷ್ಣ ರೈ ಚಾವಡಿ, ಚಂದ್ರಾವತಿ ರೈ ಚಾವಡಿ, ಪ್ರಮೀಳಾ ಎಸ್. ರೈ ಎಂಡೆಸಾಗು, ಪ್ರಜ್ಞಾ ರವಿರಾಜ್ ರೈ ಗುತ್ತು, ಗಣೇಶ್ ಬಿ.ಜಿ. ಬಾಲಾಯ, ರೇಖಾ ರೈ ನಿಡ್ಯಾಣ, ಕಿರಣ್ ರಾಜ್ ಕೊಡುಂಗೋಣಿ, ಕಿಶೋರ್ ಗೌಡ ದರ್ಬೆ. ಅಣ್ಣು ಟಿ. ಗಾಂಧಿನಗರ ಆಯ್ಕೆಯಾದರು.

LEAVE A REPLY

Please enter your comment!
Please enter your name here