ಪುತ್ತೂರು : ಪರ್ಪುಂಜದಲ್ಲಿ ವರ್ಷಂಪ್ರತಿ ಅಲ್ ಹಾಜ್ ಅಬೂನಜ ಉಸ್ತಾದರ ನೇತೃತ್ವದಲ್ಲಿ ಮತ್ತು ಅಧ್ಯಕ್ಷತೆಯಲ್ಲಿ ನಡೆಸಿಕೊಂಡು ಬರುತ್ತಿರುವ ಏರ್ವಾಡಿ ಮಜ್ಲಿಸ್ ಸಮಾರಂಭದ ಹದಿನೇಳನೇಯ ವಾರ್ಷಿಕೋತ್ಸವವು ಪರ್ಪುಂಜ ಅಬೂನಜ ಗೇಟ್ ವಠಾರದಲ್ಲಿ ಹಾಫಿಳ್ ಅಹಮದ್ ಹರ್ಷದ್ ಪರ್ಪುಂಜ ಇವರ ಖಿರಾಅತ್ ನೊಂದಿಗೆ ಬಹಳ ವಿಜೃಂಭಣೆಯಿಂದ ನಡೆಯಿತು.
ಮೈದಾನಿಮೂಲೆ ಮುಹ್ಯದ್ದೀನ್ ಜುಮಾ ಮಸೀದಿ ಖತೀಬ್ ಅಬೂಶಝ ಅಬ್ದುಲ್ ರಝಾಖ್ ಅಲ್ ಖಾಸಿಮಿ ಕೂರ್ನಡ್ಕ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಅಡ್ವಕೇಟ್ ದುರ್ಗಾಪ್ರಸಾದ್ ರೈ ಕುಂಬ್ರ, ಹುಸೈನ್ ದಾರಿಮಿ ರೆಂಜಲಾಡಿ, ಉಕ್ಕುಡ ಜುಮಾ ಮಸೀದಿ ಮುದರ್ರಿಸ್ ಹಾಫಿಳ್ ಶರೀಫ್ ಅಲ್ ಮಳಲಿ, ತಖೀಯುದ್ದೀನ್ ಮದನಿ ಮಾಡನ್ನೂರು ಹಾಗೂ ಇನ್ನಿತರರು ಕಾರ್ಯಕ್ರಮಕ್ಕೆ ಶುಭಹಾರೈಸಿದರು. ಖ್ಯಾತ ಭಾಷಣಕಾರ ರಫೀಖ್ ಸಖಾಫಿ ದೇಲಂಪಾಡಿ ಮುಖ್ಯ ಪ್ರಭಾಷಣವನ್ನು ಮಾಡಿದರು. ಅಲ್ ಹಾಜ್ ಅಬೂನಜ ಉಸ್ತಾದ್ ಪರ್ಪುಂಜ ಬೃಹತ್ ಏರ್ವಾಡಿ ಮಜ್ಲಿಸ್ ಗೆ ನೇತೃತ್ವ ನೀಡಿದರು ಹಾಗೂ ಅಸ್ಸಯ್ಯದ್ ಜ ಅಫರ್ ಸಾದಿಕ್ ತಂಙಳ್ ಕುಂಬೋಳ್ ಕೂಟು ಪ್ರಾರ್ಥನೆಯನ್ನು ಮಾಡಿದರು.
ಈ ಸಂಧರ್ಭದಲ್ಲಿ ಕುಟ್ಟಿನೋಪಿನಡ್ಕ ಸದಾಶಿವ ಭಜನ ಮಂದಿರ ಅಧ್ಯಕ್ಷ ರಮೇಶ್ ಆಳ್ವ ಕಲ್ಲಡ್ಕ, ಒಳಮೊಗ್ರು ಕಾಂಗ್ರೆಸ್ ವಲಯಧ್ಯಕ್ಷ ಅಶೋಕ್ ಪೂಜಾರಿ ಬೊಳ್ಳಾಡಿ, ಅಡ್ವಕೇಟ್ ದುರ್ಗಾಪ್ರಸಾದ್ ಕುಂಬ್ರ ಇವರನ್ನು ಸನ್ಮಾನಿಸಿ ಗೌರವಿಸಲಾಯಿತು.
ಮುಖ್ಯ ಅತಿಥಿಗಳಾಗಿ ಯೂಸುಫ್ ಹಾಜಿ ಕೈಕಾರ, ಫಾರೂಖ್ ಮದನಿ ಮದಕ, ಅಶ್ರಫ್ ಸಖಾಫಿ, ಬೋಳಿಯಾರ್ ಜುಮಾ ಮಸೀದಿ ಅಧ್ಯಕ್ಷರು ಶರೀಫ್ ಬೋಳಿಯಾರ್, ಒಳಮೊಗ್ರು ಗ್ರಾಮ ಪಂಚಾಯತ್ ಉಪಾಧ್ಯಕ್ಷರು ಅಶ್ರಫ್ ಉಜ್ರೋಡಿ, ಉದ್ಯಮಿ ಅಬ್ದುಲ್ಲಾ ಪಿ.ಎಸ್. ಕಾಸರಗೋಡು, ರೋಯಲ್ ಗ್ರೂಪ್ ಉದ್ಯಮಿ ಹಂಝಾರ್ ಮುಳಿಯಡ್ಕ, ಹಿರಿಯ ಮಾನವ ಸಂಪನ್ಮೂಲ ವ್ಯವಸ್ಥಾಪಕ ಬಶೀರ್ ಹರ್ಲಡ್ಕ, ಕಬೀರ್ ಎಮ್ ಮೈದಾನಿಮೂಲೆ, ಕರೀಮ್ ಮಂಗಳೂರು, ಯೂಸುಫ್ ಮೈದಾನಿಮೂಲೆ, ರವೂಫ್ ಅಲ್ ಹಾಶಿಮಿ ಮೈದಾನಿಮೂಲೆ, ಅಶ್ರೀದ್ ಪರ್ಪುಂಜ ಮತ್ತಿತರರು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಕಾರ್ಯಕ್ರಮವನ್ನು ರಫೀಕ್ ಇಮ್ದಾದಿ ಅಲ್ ಬದವಿ ಸ್ವಾಗತಿಸಿ, ಸಲಾಮ್ ಮದನಿ ಅಳಿಕೆ ನಿರೂಪಿಸಿದರು. ಹಾಫಿಳ್ ಅಹಮದ್ ಹರ್ಷದ್ ವಂದಿಸಿದರು.