40 ವರ್ಷಗಳ ಬಳಿಕ ಇಡ್ಕಿದು ಸೇವಾ ಸಹಕಾರಿ ಸಂಘದ ಆಡಳಿತ ಮಂಡಳಿ ಚುನಾವಣೆ

0

12 ಸ್ಥಾನಗಳಲ್ಲಿಯೂ ಬಿಜೆಪಿ ಬೆಂಬಲಿತ ಸಹಕಾರ ಭಾರತಿ ಅಭ್ಯರ್ಥಿಗಳ ಜಯಭೇರಿ

ವಿಟ್ಲ: ಇಡ್ಕಿದು ಸೇವಾ ಸಹಕಾರಿ ಸಂಘದ ಆಡಳಿತ ಮಂಡಳಿಗೆ ಮುಂದಿನ 5 ವರ್ಷಗಳ ಅವಧಿಗೆ ನಿರ್ದೇಶಕರ ಆಯ್ಕೆಗಾಗಿ ಜ.19ರಂದು ಸಂಘದ ವಠಾರದಲ್ಲಿ ಚುನಾವಣೆ ನಡೆಯಿತು. 4 ಮಂದಿ ಅವಿರೋಧ ಆಯ್ಕೆ ಸೇರಿದಂತೆ 12 ಸ್ಥಾನಗಳಲ್ಲಿಯೂ ಬಿಜೆಪಿ ಬೆಂಬಲಿತ ಸಹಕಾರ ಭಾರತಿಯ ಅಭ್ಯರ್ಥಿಗಳೂ ಜಯಭೇರಿ ಭಾರಿಸಿದ್ದಾರೆ.


ಆರಂಭದಲ್ಲೇ ಸಹಕಾರ ಭಾರತಿಯ ನಾಲ್ವರು ಅಭ್ಯರ್ಥಿಗಳು ಅವಿರೋಧವಾಗಿ ಆಯ್ಕೆಗೊಂಡಿದ್ದರು. ಉಳಿದ ಎಂಟು ಸ್ಥಾನಗಳಿಗೆ ಚುನಾವಣೆ ನಡೆದಿದ್ದು ಎಲ್ಲಾ ಎಂಟು ಸ್ಥಾನಗಳಲ್ಲಿಯೂ ಸಹಕಾರಿ ಭಾರತಿ ಅಭ್ಯರ್ಥಿಗಳು ಭಾರೀ ಮತಗಳ ಅಂತರದಲ್ಲಿ ಗೆಲುವು ಸಾಧಿಸಿದ್ದಾರೆ.


ಸಾಮಾನ್ಯ ಸ್ಥಾನದಿಂದ ಸಹಕಾರ ಭಾರತಿ ಅಭ್ಯರ್ಥಿಗಳಾದ ಸಂಘದ ಹಾಲಿ ಅಧ್ಯಕ್ಷ ಸುಧಾಕರ ಶೆಟ್ಟಿ ಬೀಡಿನಮಜಲು, ಹಾಲಿ ಉಪಾಧ್ಯಕ್ಷರಾದ ರಾಮ್ ಭಟ್ ಕೆ., ಚಂದ್ರಹಾಸ, ಜಯಂತ, ಹೃಷಿಕೇಶ್ ಕೆ.ಎಸ್.,ಹಿಂದುಳಿದ ವರ್ಗ ’ಎ’ ಸ್ಥಾನದಿಂದ ನವೀನ್ ಕೆ.ಪಿ., ಮಹಿಳಾ ಮೀಸಲು ಕ್ಷೇತ್ರದಿಂದ ವಿದ್ಯಾ ವಿ., ಪದ್ಮಾವತಿ ಗೆಲವು ಸಾಧಿಸಿದ್ದಾರೆ. ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳಾಗಿದ್ದ ಹಿಂದುಳಿದ ವರ್ಗ ’ಎ’ ಸ್ಥಾನದಿಂದ ಮೋಹನ್, ಸಾಮಾನ್ಯ ಸ್ಥಾನದಿಂದ ಸಾದಿಕ್, ಮಹಿಳಾ ಮೀಸಲು ಕ್ಷೇತ್ರದಿಂದ ರಂಜಿತಾ ಪಿ. ಶೆಟ್ಟಿ, ಹಾಗೂ ಬಿಜೆಪಿ ಬಂಡಾಯ ಅಭ್ಯರ್ಥಿಗಳಾಗಿ ಸ್ಪರ್ಧಿಸಿದ್ದ ಸಾಮಾನ್ಯ ಕ್ಷೇತ್ರದಿಂದ ಜಗದೀಶ ಡಿ., ರಮಾನಂದ ಬಿ. ಶರ್ಮ, ಕೆ.ಜಿ.ನಾರಾಯಣ ರಾವ್, ಪುರುಷೋತ್ತಮ, ರಮೇಶ್ಚಂದ್ರ ಎಂ.ಎಸ್. ರವರು ಪರಾಭವಗೊಂಡಿದ್ದಾರೆ.


ಸಹಕಾರ ಭಾರತಿ ಅಭ್ಯರ್ಥಿಗಳಾದ ಆನಂದ ಕೆ., ಸತೀಶ್ ಕೆ.ಉಮೇಶ್ ಹಾಗೂ ಲೋಹಿತಾಶ್ವ ಎಂ. ರವರು ಆರಂಭದಲ್ಲೇ ಅವಿರೋಧವಾಗಿ ಆಯ್ಕೆಯಾಗಿದ್ದರು.
ಒಟ್ಟು 29 ಆಭ್ಯರ್ಥಿಗಳು ನಾಮಪತ್ರ ಸಲ್ಲಿಕೆ ಮಾಡಿದ್ದು, 9 ಅಭ್ಯರ್ಥಿಗಳು ನಾಮಪತ್ರ ಹಿಂಪಡೆದಿದ್ದರು. ನಾಲ್ವರು ಅವಿರೋಧವಾಗಿ ಆಯ್ಕೆಯಾಗಿದ್ದು, 16ಮಂದಿ ಅಂತಿಮ ಕಣದಲ್ಲಿದ್ದರು.
ಬಂಟ್ವಾಳ ಸಹಕಾರ ಸಂಘಗಳ ಅಭಿವೃದ್ದಿ ಅಽಕಾರಿ ಡಾ| ಜ್ಯೋತಿ ಡಿ.ರವರು ರಿಟರ್ನಿಂಗ್ ಅಧಿಕಾರಿಯಾಗಿದ್ದರು. ಸಂಘದ ಮುಖ್ಯ ಕಾರ್ಯನಿರ್ವಹಣಾಽಕಾರಿ ಈಶ್ವರ ನಾಯ್ಕ್ ಹಾಗೂ ಸಿಬ್ಬಂದಿಗಳು ಸಹಕರಿಸಿದರು.


ಬಿಜೆಪಿ ಸಂಭ್ರಮಾಚರಣೆ:
ಬಂಡಾಯದ ನಡುವೆಯೂ ಬಿಜೆಪಿ ಬೆಂಬಲಿತ ಸಹಕಾರ ಭಾರತಿ ಅಭ್ಯರ್ಥಿಗಳ ಭರ್ಜರಿ ಜಯಭೇರಿ ಹಿನ್ನೆಲೆಯಲ್ಲಿ ಬಿಜೆಪಿ ಕಾರ್ಯಕರ್ತರು ಸಂಭ್ರಮಾಚರಣೆ ಮಾಡಿದರು. ಈ ಸಂದರ್ಭದಲ್ಲಿ ಸಹಕಾರ ಭಾರತೀಯ ಮಾಜಿ ರಾಷ್ಟ್ರೀಯ ಉಪಾಧ್ಯಕ್ಷ ಮತ್ತು ಕ್ಯಾಂಪ್ಕೊ ಸಂಸ್ಥೆ ಮಾಜಿ ಅಧ್ಯಕ್ಷ ಕೊಂಕೋಡಿ ಪದ್ಮನಾಭ, ಪುತ್ತೂರು ಬಿಜೆಪಿ ಗ್ರಾಮಾಂತರ ಮಂಡಲ ಅಧ್ಯಕ್ಷ ದಯಾನಂದ ಶೆಟ್ಟಿ ಉಜಿರೆಮಾರು ಸೇರಿದಂತೆ ಹಲವಾರು ಮುಖಂಡರು ಉಪಸ್ಥಿತರಿದ್ದರು.

ಎಲ್ಲರ ಸಹಕಾರಕ್ಕೆ ಆಭಾರಿಯಾಗಿದ್ದೇವೆ
ಇಡ್ಕಿದು ಸೇವಾ ಸಹಕಾರಿ ಸಂಘದ ಚುನಾವಣೆಯಲ್ಲಿ ಸಹಕಾರ ಭಾರತಿಯ ನಮ್ಮೆಲ್ಲ ಅಭ್ಯರ್ಥಿಗಳನ್ನು ಬಹುಮತದಿಂದ ವಿಜಯಗೊಳಿಸಿ ಮುಂದಿನ ಅವಧಿಗೆ ಸೇವೆ ಮಾಡಲು ಅವಕಾಶ ಮಾಡಿಕೊಟ್ಟ ನಮ್ಮ ಸಹಕಾರಿ ಸಂಘದ ಸದಸ್ಯ ಬಂಧುಗಳಿಗೆ ನಾವುಗಳು ಆಭಾರಿಯಾಗಿದ್ದೇವೆ. ಮುಂದೆಯೂ ತಮ್ಮೆಲ್ಲರ ಸಹಕಾರದ ನಿರೀಕ್ಷೆಯಲ್ಲಿದ್ದೇವೆ.
-ಸುಧಾಕರ ಶೆಟ್ಟಿ ಬೀಡಿನಮಜಲು

ನಲವತ್ತು ವರುಷಗಳ ಬಳಿಕ ಚುನಾವಣೆ
ಇಡ್ಕಿದು ಸೇವಾ ಸಹಕಾರಿ ಸಂಘದ ಆಡಳಿತ ಮಂಡಳಿಗೆ ಇದೀಗ ನಲವತ್ತು ವರುಷಗಳ ಬಳಿಕ ಚುನಾವಣೆ ನಡೆದಿದೆ. ಚುನಾವಣೆ ರಂಗೇರುತ್ತಿದ್ದಂತೆ ಬಿಜೆಪಿಯಲ್ಲಿ ಬಂಡಾಯದ ಕಾವು ಕೂಡಾ ಜೋರಾಗೆ ಆರಂಭವಾಗಿತ್ತು. ಈ ನಡುವೆ ಕಾಂಗ್ರೆಸ್ ಸ್ಪರ್ಧೆ ನಡೆಸಿತ್ತು. ಅಂತಿಮವಾಗಿ ಬಿಜೆಪಿ ಬೆಂಬಲಿತ ಸಹಕಾರ ಭಾರತಿ ಅಭ್ಯರ್ಥಿಗಳು ಭರ್ಜರಿ ಗೆಲುವು ಸಾಧಿಸಿದ್ದಾರೆ.

LEAVE A REPLY

Please enter your comment!
Please enter your name here