ಪುತ್ತೂರು: ಕರ್ನಾಟಕ ಗಮಕ ಕಲಾ ಪರಿಷತ್ತು ಬೆಂಗಳೂರು, ದ.ಕ.ಜಿಲ್ಲೆ, ಪುತ್ತೂರು ತಾಲೂಕು ಘಟಕದ ವತಿಯಿಂದ ಕುಮಾರವ್ಯಾಸ ಜಯಂತಿ ಆಚರಣೆಯ ಪ್ರಯುಕ್ತ, ಗಮಕ ವಾಚನ- ವ್ಯಾಖ್ಯಾನ ಕಾರ್ಯಕ್ರಮ ತೆಂಕಿಲದ ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯಲ್ಲಿ ಜ.20ರಂದು ನಡೆಯಿತು.
ಈ ಕಾರ್ಯಕ್ರಮದಲ್ಲಿ ಕುಮಾರವ್ಯಾಸ ಕವಿಯ ಕರ್ನಾಟ ಭಾರತದಿಂದ ಆಯ್ದ “ಕರ್ಣ ಭೇದನ” ಎಂಬ ಕಥಾಭಾಗವನ್ನು ಪ್ರಸ್ತುತಪಡಿಸಿದರು.
ಗಮಕಿ ಪ್ರೇಮಾ ನೂರಿತ್ತಾಯ ಇವರು ಗಮಕ ವಾಚನಗೈದರು. ಪದ್ಮಾ ಆಚಾರ್ಯ ಇವರು ಗಮಕ ವ್ಯಾಖ್ಯಾನವನ್ನು ನಡೆಸಿಕೊಟ್ಟರು. ಘಟಕದ ಕಾರ್ಯದರ್ಶಿ ಶಂಕರಿ ಶರ್ಮ ಕಲಾವಿದರನ್ನು ಪರಿಚಯಿಸಿ ಕಾರ್ಯಕ್ರಮ ನಿರ್ವಹಿಸಿದರು. ಶಿಕ್ಷಕಿ ವೀಣಾ ಸರಸ್ವತಿ ಸ್ವಾಗತಿಸಿದರು. ಶಾಲಾ ಮುಖ್ಯೋಪಾಧ್ಯಾಯಿನಿ ಆಶಾ ಬೆಳ್ಳಾರೆ ಧನ್ಯವಾದ ಸಮರ್ಪಿಸಿ, ಕಲಾವಿದರನ್ನು ಶಾಲು ಹೊದಿಸಿ ಸನ್ಮಾನಿಸಿದರು.
ಪ್ರಾಥಮಿಕ ವಿಭಾಗದ ಮುಖ್ಯಶಿಕ್ಷಕಿ ನಳಿನಿ ವಾಗ್ಲೆ ನೆನಪಿನ ಕಾಣಿಕೆಯನ್ನಿತ್ತು ಗೌರವಿಸಿದರು. ಜಿಲ್ಲಾ ಘಟಕದ ಅಧ್ಯಕ್ಷರಾದ ಮೋಹನ ಕಲ್ಲೂರಾಯರು ಪ್ರಾಸ್ತಾವಿಕ ನುಡಿಗಳನ್ನಾಡಿ ಮಕ್ಕಳಿಗೆ ಶುಭ ಹಾರೈಸಿದರು. ಅಧ್ಯಕ್ಷರಾದ ವೇದವ್ಯಾಸ ರಾಮಕುಂಜ, ಉಪಾಧ್ಯಕ್ಷರಾದ ವತ್ಸಲಾ ರಾಜ್ಞಿ, ಈಶ್ವರ ಭಟ್ ಗುಂಡ್ಯಡ್ಕ ಮತ್ತು ಜಯಂತಿ ಹೆಬ್ಬಾರ್ ಹಾಗೂ ಸದಸ್ಯರಾದ ಭವಾನಿ ಶಂಕರ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು.