ಪುತ್ತೂರು ನಗರ ಸಭೆ, ತಾಲೂಕು ಪಂಚಾಯತ್‌ನ ಸಹಯೋಗದೊಂದಿಗೆ ನಗರ ಸಭೆ, ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ‘ನಮ್ಮ ಸಂಸ್ಕೃತಿ-ಸ್ವಚ್ಛ ಸಂಸ್ಕೃತಿ’ ಧ್ಯೇಯವಾಕ್ಯದೊಂದಿಗೆ ಸ್ವಚ್ಛತಾ ಶ್ರಮದಾನ ಅಭಿಯಾನ
ಪುತ್ತೂರು ಮಹಿಳಾ ವಿವಿಧೋದ್ದೇಶ ಸಹಕಾರಿ ಸಂಘದ ಪ್ರಧಾನ ಕಚೇರಿಯಲ್ಲಿ ಬೆಳಿಗ್ಗೆ ೧೦.೩೦ರಿಂದ ಆಡಳಿತ ಮಂಡಳಿ ನಿರ್ದೇಶಕರ ಚುನಾವಣೆಯ ನಾಮಪತ್ರ ಸಲ್ಲಿಕೆ
ಗೋಳಿತ್ತೊಟ್ಟು ಪಂಚಾಯತ್ ಸಭಾಭವನದಲ್ಲಿ ಬೆಳಿಗ್ಗೆ ೧೧ಕ್ಕೆ ಕೊಣಾಲು ೧ನೇ ವಾರ್ಡ್, ಕೊಣಾಲು ಹಿ.ಪ್ರಾ. ಶಾಲೆಯಲ್ಲಿ ಮಧ್ಯಾಹ್ನ ೨ಕ್ಕೆ ಕೊಣಾಲು ೨ನೇ ವಾರ್ಡ್‌ನ ವಾರ್ಡುಸಭೆ
ಉಪ್ಪಿನಂಗಡಿ ವದಶಂಕರನಗರ ಶ್ರೀರಾಮ ಶಾಲಾ ಆವರಣದಲ್ಲಿ ಶ್ರೀ ಆಂಜನೇಯ ಸಹಿತ ಶ್ರೀರಾಮನ ವಿಗ್ರಹ ಪ್ರತಿಷ್ಠಾಪನೆ
ಮುಕಂಪಾಡಿ ಸುಭದ್ರಾ ಸಭಾ ಮಂದಿರದಲ್ಲಿ ಬೆಳಿಗ್ಗೆ ೧೦.೩೦ರಿಂದ ಬ್ಯಾಂಕ್ ಆಫ್ ಬರೋಡಾ ಪುತ್ತೂರು ಕ್ಷೇತ್ರ, ಬ್ಯಾಂಕ್ ಆಫ್ ಬರೋಡಾ ಗ್ರಾಮೀಣ ಅಭಿವೃದ್ಧಿ ಪ್ರತಿಷ್ಠಾನ ಸಹಯೋಗದಲ್ಲಿ ಕೃಷಿಮೇಳ, ಕಣ್ಣಿನ ಉಚಿತ ತಪಾಸಣೆ, ಉಚಿತ ಕನ್ನಡಕ ವಿತರಣೆ
ಚಾರ್ವಾಕ ಶ್ರೀ ಕಪಿಲೇಶ್ವರ ದೇವಸ್ಥಾನದ, ಇರ್ವೆರ್ ಉಳ್ಳಾಕುಲ ದೈವಗಳ ಕ್ಷೇತ್ರ ಅಮರ ಕಾಸ್ಪಾಡಿಯಲ್ಲಿ ಸಂಪ್ರೋಕ್ಷಣೆ, ಮಹಾಪೂಜೆ, ಬೆಳಿಗ್ಗೆ ೮ಕ್ಕೆ ಗೊನೆ ಕಡಿಯುವುದು, ಭಂಡಾರ ತೆಗೆದು ಮುಂಡೈ ಮಜಲಲ್ಲಿ ಮುಂಡೈ ಹಾಕುವುದು, ರಾತ್ರಿ ಶ್ರೀ ದೈವಗಳ ವಾಲಸರಿ
ನಿಡ್ಪಳ್ಳಿ ಶ್ರೀ ಕಿನ್ನಿಮಾಣಿ ಪೂಮಾಣಿ ಪರಿವಾರ ದೈವಸ್ಥಾನದಲ್ಲಿ ಬೆಳಿಗ್ಗೆ ೯ರಿಂದ ಪೂಮಾಣಿ ದೈವಗಳ ನೇಮೋತ್ಸವ, ಮಧ್ಯಾಹ್ನ ಅನ್ನಸಂತರ್ಪಣೆ, ರಾತ್ರಿ ೮ರಿಂದ ದೇರ್ಲ ಮನೆಯಿಂದ ಧೂಮಾವತಿ ದೈವದ ಭಂಡಾರ ಬರುವುದು, ರಾತ್ರಿ ೧೦ರಿಂದ ಪಿಲಿಭೂತ ದೈವದ ನೇಮೋತ್ಸವ
ಮುಕ್ವೆ ರಹ್ಮಾನಿಯಾ ಜುಮಾ ಮಸೀದಿ ವಲಿಯುಲ್ಲಾಹಿ ದರ್ಗಾ ಶರೀಫ್ ಮರ್‌ಹೂಂ ಸಯ್ಯಿದ್ ಪಾಣಕ್ಕಾಡ್ ಪಿ.ಎಂ.ಎಸ್.ಎ ಪೂಕೋಯ ತಂಙಳ್ ನಗರದಲ್ಲಿ ಮುಕ್ವೆ ಮಖಾಂ ಉರೂಸ್, ಮುಖ್ಯ ಪ್ರಭಾಷಣ
ಕೋಡಿಂಬಾಡಿ ಅಶ್ವತ್ಥಕಟ್ಟೆ ಧರ್ಮಶ್ರೀ ಭಜನಾ ಮಂದಿರದ ೧೮ನೇ ವರ್ಷದ ನಗರ ಭಜನೆ ಪ್ರಯುಕ್ತ ಮರ್ದನಳಿಕೆ, ಪಾದೆ, ನಿಡ್ಯದಲ್ಲಿ ಬೈಲುವಾರು ಭಜನೆ
ಕೊಳ್ತಿಗೆ ಗ್ರಾಮ ಬಾಯಂಬಾಡಿ ಶ್ರೀ ಷಣ್ಮುಖದೇವ ದೇವಸ್ಥಾನದಲ್ಲಿ ಬೆಳಿಗ್ಗೆ ೮ರಿಂದ ಮಹಾಗಣಪತಿ ಹೋಮ, ಕಲಶಪೂಜೆ, ಶ್ರೀ ದೇವರ ಬಲಿ ಹೊರಟು ಉತ್ಸವ, ಪಲ್ಲಕ್ಕಿ ಉತ್ಸವ, ರಥೋತ್ಸವ, ದರ್ಶನ ಬಲಿ, ಬಟ್ಟಲು ಕಾಣಿಕೆ, ೧೦ರಿಂದ ಭಜನಾ ಕಾರ್ಯಕ್ರಮ, ಮಧ್ಯಾಹ್ನ ಮಹಾಪೂಜೆ, ಅನ್ನಸಂತರ್ಪಣೆ, ೨ಕ್ಕೆ ಇರ್ವೆರು ಉಳ್ಳಾಕ್ಲುರವರ ಭಂಡಾರ ದುಗ್ಗಳಕ್ಕೆ ನಿರ್ಗಮನ, ರಾತ್ರಿ ೭ರಿಂದ ರಂಗಪೂಜೆ, ೭.೩೦ರಿಂದ ವ್ಯಾಘ್ರ ಚಾಮುಂಡಿ, ವಾರಾಹಿ ದೈವದ ನೇಮ, ಕಾಣಿಕೆ ಹರಕೆ ಸಮರ್ಪಣೆ
ವಿಟ್ಲ ಶ್ರೀ ಪಂಚಲಿಂಗೇಶ್ವರ ದೇವಸ್ಥಾನದಲ್ಲಿ ಬೆಳಿಗ್ಗೆ ೮.೩೦ರಿಂದ ಕವಟೋದ್ಘಾಟನೆ, ಮಹಾಪೂಜೆ, ಕಾಲಾವಧಿ ಬಟ್ಲು ಕಾಣಿಕೆ, ತುಲಾಭಾರ ಸೇವೆ, ರಾತ್ರಿ ೭.೩೦ಕ್ಕೆ ಓಕುಳಿಕಟ್ಟೆಯಲ್ಲಿ ಕಟ್ಟೆಪೂಜೆ, ಶ್ರೀ ದೇವರಿಗೆ ಅಷ್ಟಾವಧಾನ ಸೇವೆ, ಅವಭೃತ ಸ್ನಾನಕ್ಕೆ ಕೊಡಂಗಾಯಿಗೆ ಸವಾರಿ ಧ್ವಜಾವರೋಹಣ, ಸಂಪ್ರೋಕ್ಷಣೆ, ೮ರಿಂದ ಸ್ಟಾರ್‌ನೈಟ್
ಬಂಟ್ವಾಳ ತಾಲೂಕಿನ ಪೆರ್ನೆ-ಬಿಳಿಯೂರು ಗ್ರಾಮದ ತಿಪ್ಪಕೋಡಿ ಬಾಲಕೃಷ್ಣ ಮಹಾಬಲ ರೈಯವರ ಮನೆಯಂಗಳದಲ್ಲಿ ಮಧ್ಯಾಹ್ನ ೩.೩೦ರಿಂದ ಭಜನಾ ಕಾರ್ಯಕ್ರಮ, ಸಂಜೆ ೬ರಿಂದ ಶ್ರೀ ಶನೀಶ್ವರ ಮಹಾತ್ಮೆ-ಯಕ್ಷಗಾನ ಬಯಲಾಟ, ರಾತ್ರಿ ೮ರಿಂದ ಅನ್ನಸಂತರ್ಪಣೆ
ಹಿರೇಬಂಡಾಡಿ ಸರೋಳಿ ನಾಗದೇವರು, ನಾಗಕನ್ನಿಕೆ, ರಕ್ತೇಶ್ವರಿ, ಗುಳಿಗ, ಬೈರವ ಸಾನಿಧ್ಯದಲ್ಲಿ ಬೆಳಿಗ್ಗೆ ೬ರಿಂದ ಗಣಪತಿ ಹೋಮ, ಕಲಶಾದಿ ಪೂಜೆಗಳು, ೮.೨೦ಕ್ಕೆ ಶ್ರೀ ನಾಗದೇವರು, ನಾಗಕನ್ನಿಕೆ, ರಕ್ತೇಶ್ವರಿ ಸಾನಿಧ್ಯಗಳ ಪ್ರತಿಷ್ಠೆ, ಕಲಶಾಭಿಷೇಕ, ತಂಬಿಲ ಸೇವೆ, ಮಹಾಪೂಜೆ
ಮಂಗಳೂರು ಪತ್ರಿಕಾ ಭವನದಲ್ಲಿ ಬೆಳಿಗ್ಗೆ ೧೧.೩೦ಕ್ಕೆ ಮಂಗಳೂರು ಪ್ರೆಸ್ ಕ್ಲಬ್ ವತಿಯಿಂದ ಪ್ರೆಸ್ ಕ್ಲಬ್ ಗೌರವ ಅತಿಥಿ ಕಾರ್ಯಕ್ರಮದಲ್ಲಿ ಮಾಜಿ ಸಚಿವ ಕೃಷ್ಣ ಜೆ. ಪಾಲೆಮಾರ್ ಭಾಗಿ
ತುರ್ಕಳಿಕೆ ಹಯಾತುಲ್ ಔಲಿಯಾ ದರ್ಗಾ ಶರೀಫ್ ವಠಾರದಲ್ಲಿ ಉರೂಸ್ ಮುಬಾರಕ್, ರಾತ್ರಿ ಉದ್ಘಾಟನೆ
ಶುಭಾರಂಭ
ವಿಟ್ಲದ ಪುತ್ತೂರು ರಸ್ತೆಯ ಎಂಪಾಯರ್ ಮಾಲ್‌ನಲ್ಲಿ ಬೆಳಿಗ್ಗೆ ೧೦ಕ್ಕೆ ಟೋಪ್ಕೋ ಜ್ಯುವೆಲ್ಲರಿ ನವೀಕೃತ ಮಳಿಗೆ ಉದ್ಘಾಟನೆ